Home ಜಿಲ್ಲೆ ಮಾಸ್ಟರ್ ಸಿವಿವಿ 37 ನೇ ಗುರುಪೂಜೆಬದುಕು ಬದಲಾಗಬೇಕು: ಬಿ ಆರ್ ಕೆ ರಾಜು

ಮಾಸ್ಟರ್ ಸಿವಿವಿ 37 ನೇ ಗುರುಪೂಜೆಬದುಕು ಬದಲಾಗಬೇಕು: ಬಿ ಆರ್ ಕೆ ರಾಜು

oplus_2097154

ಸಂಜೆವಾಣಿ ಪ್ರತಿನಿಧಿಯಿಂದ

ಬಳ್ಳಾರಿ:ಸೆ,27-  ತಾಲೂಕಿನ ಸಂಗನಕಲ್ಲು ಗ್ರಾಮದ ಶ್ರೀಗುರು ಧಾಮದಲ್ಲಿ ನಿನ್ನೆ ಮತ್ತು ಇಂದು ಮಾಸ್ಟರ್ ಸಿವಿವಿ 37 ನೇ ಗುರುಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಬೆಂಗಳೂರು, ವಿಶಾಖಪಟ್ಟಣಂ, ಪುಟ್ಟಪರ್ತಿ, ಮೈಸೂರು, ವಿಜಯವಾಡ ಮೊದಲಾದಡೆಗಳಿಂದ ಜಗದ್ಗುರು ಪೀಠದ ಪ್ರಧಾನ ಕಾರ್ಯದರ್ಶಿ ಬಿ.ಆರ್.ಕೆ.ರಾಜು,  ವಿವಿ ಆರ್ ಕೆ ಶಾಸ್ತ್ರಿ. ಸದ್ಗುರು ತಪೋವನದ ಆರ್.ಪಿ.ಜೋಷಿ. ಪಿ.ರವಿಶಂಕರ್, ರಾಜೇಂದ್ರ ಪ್ರಸಾದ್ ಮೊದಲಾದ ಸಾಧಕರು ಆಗಮಿಸಿದ್ದರು.

ಪೂಜೆ ,ಹೋಮ, ಪ್ರವಚನ, ಸಂಸ್ಕಾರಗಳು ನೆರವೇರಿದವು.   ಉಚಿತ ಹೋಮಿಯೋ ತರಗತಿಗಳ ಉದ್ಘಾಟನೆ, ಮಕ್ಕಳಿಗೆ ಅಕ್ಷರ ಅಭ್ಯಾಸ, ನಾಮಕರಣ ಮೊದಲಾದ ಕಾರ್ಯಕ್ರಮಗಳು ಜರುಗಿದವು.

ಪ್ರವಚನದಲ್ಲಿ ಬದುಕಿಗೆ ಬದಲಾವಣೆ ಮುಖ್ಯ, ಬದುಕು ಬದಲಾಗದಿದ್ದರೆ ವನವಾಗುತ್ತದೆ, ಬದಲಾದರೆ ಬೃಂದಾವನವಾಗುತ್ತದೆ. ಮನುಷ್ಯ ಬದಲಾಗಲು ಅವಗಾಹನೆ ಮುಖ್ಯ, ಮಹಾತ್ಮರ ಬದುಕಿನ ಆದರ್ಶಗಳನ್ನು ಕೆರಳುವುದು ಮತ್ತು ಆರಾಧಿಸುವುದು ಮಾತ್ರವಲ್ಲ. ಅಳವಡಿಸಿಕೊಳ್ಳಬೇಕು. ಮಾಸ್ಟರ್ ಅವರು ಈ ಬದಲಾವಣೆಗೆ, ಅಧ್ಯಯನ, ಸೇವೆ ಮತ್ತು ಪ್ರಾರ್ಥನೆಯ ಮಾರ್ಗವನ್ನು ಸೂಚಿಸಿದ್ದಾರೆ. ಅದನ್ನು ನಾವೆಲ್ಲ ಪಾಲಿಸಿ ನಮ್ಮ ಬದುಕನ್ನು ಬದಲಾಯಿಸಿಕೊಳ್ಳೋಣ. ಪರ ಸೇವೆ ಮಾಡದ ವ್ಯಕ್ತಿ ಪಶುವಿಗೆ ಸಮ, ಪರಸೇವೆಯಲ್ಲೇ ಪರಮಾತ್ಮನನ್ನು ಕಾಣಬೇಕು. ಗುಡಿಗುಂಡಾರಗಳಲ್ಲಿ ಅಲ್ಲ ಎಂದರು.

ಕಾರ್ಯಕ್ರಮ ನಿರ್ವಹಣೆ ಸಾಧಕ ಕೆ.ಬಿ.ಸಿದ್ದಲಿಂಗಪ್ಪ ನೆರವೇರಿಸದರು.