
ಕಾರ್ಡಿಫ್, ಜು.೧೭: ಜೋ ರೂಟ್ (೯೯) ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ತಂಡ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದಧ ೪ ವಿಕೆಟ್ ಗಳಿಂದ ಜಯ ಗಳಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು ೧-೧ರಲ್ಲಿ ಸಮಬಲಗೊಳಿಸಿರುವ ಆತಿಥೇಯ ತಂಡ ಮೂರನೇ ಪಂದ್ಯದ ಕುತೂಹಲವನ್ನು ಹಿಡಿದಿಟ್ಟಿದೆ. ಉಭಯ ತಂಡಗಳ ಮೂರನೇ ಹಾಗೂ ಅಂತಿಮ ಪಂದ್ಯ ಜುಲೈ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಜುಲೈ ೧೯ರಂದು ನಡೆಯಲಿದೆ. ಭಾರತ ನೀಡಿದ ೨೩೪ ರನ್ ಗಳ ಸಾಧಾರಣ ಗುರಿ ಬೆನ್ನಟ್ಟಿದಿ ಇಂಗ್ಲೆಂಡ್ ಆರಂಭದಲ್ಲಿ ಹಿನ್ನಡೆ ಕಂಡರೂ ಹಿರಿಯ ಆಟಗಾರ ಜೋ ರೂಟ್ ಅವರ ಸಮಯೋಚಿತ ಆಟದ ನೆರವಿನಿಂದ ಜಯ ಗಳಿಸಿ, ಮೊದಲ ಸೋಲಿಗೆ ತಿರುಗೇಟು ನೀಡಿತು. ರೂಟ್ ಅಲ್ಲದೆ, ವಿಲ್ ಜಾಕ್ಸ್, ಅಟ್ಕಿನ್ಸನ್ ಮತ್ತು ಸ್ಯಾಮ್ ಕರ್ರನ್ ಕ್ರಮವಾಗಿ ೩೦, ೨೩ ಮತ್ತು ೨೬ ರನ್ ಗಳಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.ಟೀಮ್ ಇಂಡಿಯಾ ಪರ ಗುರ್ನೂರ್ ಬ್ರಾರ್ ೨ ವಿಕೆಟ್ ಗಿಟ್ಟಿಸಿದರು. ಇದಕ್ಕೂ ಮುನ್ನ ರೋಹಿತ್ ಮತ್ತು ಗಿಲ್ ನಿರಾಸೆ ಮೂಡಿಸಿದರು.ಆದರೆ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಕ್ರಮವಾಗಿ ೬೫ ಮತ್ತು ೬೬ ರನ್ ಗಳಿಸಿ ತಂಡದ ಗೌರವಾನ್ವಿತ ಮೊತ್ತಕ್ಕೆ ನೆರವಾದರು. ಇಂಗ್ಲೆಂಡ್ ತಂಡದ ಪರ ಜೋಫ್ರಾ ಆರ್ಚರ್ ಮತ್ತು ಅಟ್ಕಿನ್ಸನ್ ತಲಾ ೩ ವಿಕೆಟ್ ಪಡೆದರು. ಸಂಕ್ಷಿಪ್ತ ಸ್ಕೋರ್ ಭಾರತ : ೪೪ ಓವರ್ ಗಳಲ್ಲಿ ೨೩೩ (ಕೊಹ್ಲಿ ೬೫, ಶ್ರೇಯಸ್ ೬೬; ಆರ್ಚರ್ ೪೭ಕ್ಕೆ ೩, ಅಟ್ಕಿನ್ಸನ್ ೫೦ಕ್ಕೆ ೩) ಇಂಗ್ಲೆಂಡ್: ೪೪.೧ ಓವರ್ ಗಳಲ್ಲಿ ೬ ವಿಕೆಟ್ ಗೆ ೨೩೫ (ರೂಟ್ ೯೯, ಜಾಕ್ಸ್ ೩೦;ಬ್ರಾರ್ ೬೭ಕ್ಕೆ ೨).






























