Home ಜಿಲ್ಲೆ ಬೆಂಗಳೂರಿನಲ್ಲಿ ಶ್ರಿ ಕಲಾಂಜಲಿ ನೃತ್ಯ ಕಲಾವಿದರ ಪ್ರತಿಭೆ ..

ಬೆಂಗಳೂರಿನಲ್ಲಿ ಶ್ರಿ ಕಲಾಂಜಲಿ ನೃತ್ಯ ಕಲಾವಿದರ ಪ್ರತಿಭೆ ..

ಸಂಜೆವಾಣಿ ವಾರ್ತೆ

ಬಳ್ಳಾರಿ, ಸೆ.10..ಸರಸ್ವತಿ ನೃತ್ಯ ಕಲಾ ಕೇಂದ್ರ ಹಾಗು ನಾಟ್ಯ ಕುಸುಮಾಂಜಲಿ ಸಾಂಸ್ಕ್ರತಿಕ ವೇದಿಕೆ ವತಿಯಿಂದ ಭಾನುವಾರ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡ ಭಾರತ ವಾರಿಧಿ ವೇದಿಕೆಯಲ್ಲಿ  ಜಯಚಾಮ ರಾಜೇಂದ್ರ ಒಡೆಯರ್ ಕೃತಿಗಳಿಗೆ..ರಾಜ್ಯ ಮಟ್ಟದ ಎರಡು ಸಾವಿರ ನೃತ್ಯ ಕಲಾವಿದರು ಶಾಸ್ತ್ರಿಯ ನೃತ್ಯ ಪ್ರದರ್ಶನ ಮಾಡಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ನೋಂದಣಿ ಪಡದರೆಂದು ನೃತ್ಯ ಗುರುಗಳು ಶ್ರೀಜಾ ಹೇಳಿದರು. ಬಳ್ಳಾರಿಯ ಕಲಾಂಜಲಿ ನೃತ್ಯ ಅಕಾಡೆಮಿಯ 40 ಜನ ನೃತ್ಯ ವಿದ್ಯಾರ್ಥಿಗಳು ಭರತ ನೃತ್ಯ ಪ್ರದರ್ಶನ ಮಾಡಿ ರಂಜಿಸಿದರು. ಕಲಾವಿದರಿಗೆ ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರ ನೀಡಿ ಗೌರವಿಸಿದರೆಂದು ಅವರು ತಿಳಿಸಿದರು.