Home ಜಿಲ್ಲೆ ‘ಬಯಲು ಆಲಯದೊಳಗೆ’ ಕಾದಂಬರಿ ಬಿಡುಗಡೆ

‘ಬಯಲು ಆಲಯದೊಳಗೆ’ ಕಾದಂಬರಿ ಬಿಡುಗಡೆ


ಸಂಜೆವಾಣಿ ವಾರ್ತೆ

ಬಳ್ಳಾರಿ, ನ.೨೭: ಗ್ರಾಮೀಣ ಬದುಕಿನ ವಿವಿಧ ಮಜಲುಗಳು, ಹಳ್ಳಿಯ ಸಾಂಸ್ಕೃತಿಕ ಪರಂಪರೆ, ಆಧ್ಯಾತ್ಮಿಕ ಚಿಂತನೆ ಹಾಗೂ ಮಾನವೀಯ ಮೌಲ್ಯಗಳನ್ನು ಆಪ್ತವಾಗಿ ಕಟ್ಟಿಕೊಡುವ ಡಾ. ಸಂಪಿಗೆ ನಾಗರಾಜ ಅವರ ‘ಬಯಲು ಆಲಯದೊಳಗೆ’ ಕಾದಂಬರಿಯನ್ನು ನಗರದಲ್ಲಿ ಇಂದು ಬಿಡುಗಡೆ ಮಾಡಿದೆ.
ಲೋಹಿಯಾ ಪ್ರಕಾಶನದ ಡಾ. ಸಿ. ಚನ್ನಬಸವಣ್ಣ ಕಾದಂಬರಿಯನ್ನು ಬಿಡುಗಡೆ ಮಾಡಿದರು. ಸತ್ಯಂ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಹೆಚ್. ವೀರಭದ್ರಪ್ಪ ಅಧ್ಯಕ್ಷತೆ ವಹಿಸಿದ್ದರು.
ಕಾದಂಬರಿಯ ಕುರಿತು ಲೇಖಕ ಡಾ. ಹಳೆಮನೆ ರಾಜಶೇಖರ, ಈ ಕಾದಂಬರಿಯು ಹಳ್ಳಿಯ ಬದುಕಿನ ಹಲವು ಘಟನೆಗಳು ಮತ್ತು ಅನುಭವಗಳ ಸಮಗ್ರ ಚಿತ್ರಣವಾಗಿದೆ. ಮದುವೆ, ಮನಸ್ತಾಪ, ಅಂತರ್ಜಾತಿ ವಿವಾಹ, ಗುಡಿ ನಿರ್ಮಾಣ, ಶ್ರೀಶೈಲ ಯಾತ್ರೆ, ಷಡ್ಯಂತ್ರ, ಸಾವು, ಪ್ರವಚನ ಹಾಗೂ ಆಧ್ಯಾತ್ಮಿಕ ಚಿಂತನೆಗಳAತಹ ಗ್ರಾಮೀಣ ಬದುಕಿನ ವಿವಿಧ ಮಜಲುಗಳನ್ನು ಸಹಜವಾಗಿ ಕಟ್ಟಿಕೊಟ್ಟಿದೆಂದರು. ಕನ್ನಡ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಸಿದ್ದರಾಮ ಕಲ್ಮಠ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಸಚಿವ ಡಾ. ಎ. ಚೆನ್ನಪ್ಪ, ಕಾದಂಬರಿಕಾರ ಡಾ. ಸಂಪಿಗೆ ನಾಗರಾಜ, ವಕೀಲ ಬಾದಾಮಿ ಶಿವಲಿಂಗ ನಾಯಕ, ನಿವೃತ್ತ ಅಧ್ಯಾಪಕ ಡಾ. ಟಿ.ಎಂ. ಅಂಗರಾಜ್ ಮತ್ತಿತರರು ಇದ್ದರು. ವಿರೇಶಸ್ವಾಮಿ ಕಾರ್ಯಕ್ರಮ ನಿರೂಪಣೆ, ಆಲಂ ಭಾಷಾ ಸ್ವಾಗತ ನೆರೆವೇರಿಸಿದರು .