
ಕಲಬುರಗಿ,ನ.27: ವಿಶ್ವ ಪೈಲ್ಸ್ ದಿನದ ಅಂಗವಾಗಿ ನ.29 ಭಾನುವಾರದಂದು ನಗರದ ಡಾ. ರಾವ್ ಅವರ ಪೈಲ್ಸ್ ಕೇರ್ ಕ್ಯೂರ್ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಆಫ್ ಗುಲಬರ್ಗ ಮಿಡ್ಟೌನ್ ಸಹಯೋಗದೊಂದಿಗೆ ಮೂಲವ್ಯಾಧಿ ಜಾಗೃತಿ ಹಾಗೂ ಉಚಿತ ತಪಾಸಣಾ ಶಿಬಿರ ನಡೆಯಲಿದೆ ಎಂದು ಆಸ್ಪತ್ರೆ ನಿರ್ದೇಶಕ ಡಾ.ಪಿ.ಎಸ್ ರಾವ್ ಅವರು ಇಂದು ಪತ್ರಿಕಾಭವನದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಲಬುರಗಿ ನಗರದ ಎಸ್ವಿಪಿ ಚೌಕ್ ಹತ್ತಿರ, ಒನ್ ವೇ ಸ್ಟೇಷನ್ ರಸ್ತೆ, ರಹೀಮ್ ಪ್ಲಾಜಾದಲ್ಲಿರುವ ಆಸ್ಪತ್ರೆಯಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೂ ಶಿಬಿರ ನಡೆಯಲಿದೆ.ಶಿಬಿರದಲ್ಲಿ ಸಮಾಲೋಚನೆ, ರಕ್ತಪರೀಕ್ಷೆ,ಪಿಆರ್ ಪರೀಕ್ಷೆ ಮತ್ತು ಅಗತ್ಯ ಔಷಧಿಗಳನ್ನು ಉಚಿತವಾಗಿ ನೀಡಲಾಗುವದು. ಬಿಪಿಎಲ್ ಕಾರ್ಡುದಾರರಿಗೆ ಶೇ 50 ರಿಯಾಯತಿ ನೀಡಲಾಗುವದು ಎಂದು ವಿವರಿಸಿದರು
ಆಹಾರ ಪದ್ಧತಿ,ಜೀವನಶೈಲಿ ಮತ್ತು ವಂಶವಾಹಿ ಪ್ರವೃತ್ತಿ, ಮತ್ತಿತರ ಅಂಶಗಳು ಮೂಲವ್ಯಾಧಿಗೆ ಕಾರಣವಾಗುತ್ತವೆ.
ಆರಂಭಿಕ ಹಂತದಲ್ಲಿ ರೋಗ ಪತ್ತೆ ಹಚ್ಚಿದರೆ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದು.
ಡಾ. ರಾವ್ ಅವರ ಪೈಲ್ಸ್ ಕೇರ್ ಕ್ಯೂರ್ ಆಸ್ಪತ್ರೆಯು ಕಳೆದ 49 ವರ್ಷಗಳಿಂದ ಮೂಲವ್ಯಾಧಿ ಹಾಗೂ ಗುದದ್ವಾರ ಮತ್ತು ಗುದನಾಳಕ್ಕೆ ಸಂಬಂಧಿಸಿದ ವಿವಿಧ ಕಾಯಿಲೆಗಳ ಪತ್ತೆ ,ರೋಗನಿರ್ಣಯ ಮತ್ತು ಚಿಕಿತ್ಸೆಯಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದೆ.ಕಲಬುರಗಿಯಲ್ಲಿ ಪ್ರೊಕ್ಟಾಲೋಜಿ ಚಿಕಿತ್ಸೆಗೆ ಮೀಸಲಾಗಿರುವ ಏಕೈಕ ವಿಶೇಷ ಆಸ್ಪತ್ರೆಯಾಗಿ ಕಾರ್ಯ ನಿರ್ವಹಿಸುತ್ತದೆ.ಇಲ್ಲಿಯವರೆಗೆ ಸುಮಾರು 1 ಲಕ್ಷಕ್ಕೂ ಅಧಿಕ ರೋಗಿಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ಎಂಡಿ ಡಾ. ಪಿ.ನ್ ರಾವ್ ಉಪಸ್ಥಿತರಿದ್ದರು.



















