Home ಜಿಲ್ಲೆ ನಮ್ಮ ನಾಡಿನ ಹೆಮ್ಮೆಯ ಮಹಾನ್ ಚೇತನರು ಕನಕದಾಸರು

ನಮ್ಮ ನಾಡಿನ ಹೆಮ್ಮೆಯ ಮಹಾನ್ ಚೇತನರು ಕನಕದಾಸರು


ಸಂಜೆವಾಣಿ ವಾರ್ತೆ
ಸಿರುಗುಪ,್ಪ:, ನ.೨೭: ನಗರದ ಬಿಜೆಪಿ ಕಚೇರಿಯಲ್ಲಿ ಭಕ್ತ ಕನಕದಾಸರ ಜಯಂತಿಯನ್ನು ಗೌರವಪೂರ್ವಕವಾಗಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸಿ ಆಚರಿಸಲಾಯಿತು.
ಯುವ ಮುಖಂಡ ಎಂ.ಎಸ್ ಸಿದ್ದಪ್ಪ ಮಾತನಾಡಿ, ಕನಕ ದಾಸರು ಸಾಹಿತ್ಯ, ಕೀರ್ತನೆಗಳು ಹಾಗೂ ಕ್ರಾಂತಿಕಾರಿ ವಿಚಾರಧಾರೆಗಳ ಮೂಲಕ ಸಮಾಜಕ್ಕೆ ಭಕ್ತಿ, ಸಮಾನತೆ, ಸ್ವಾಭಿಮಾನ ಮತ್ತು ಮಾನವೀಯತೆಯ ಮೌಲ್ಯಗಳನ್ನು ಸಾರಿದ ಭಕ್ತ ಕನಕದಾಸರು ನಮ್ಮ ನಾಡಿನ ಹೆಮ್ಮೆಯ ಮಹಾನ್ ಚೇತನರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಕುಂಟ್ನಾಳ್ ಮಲ್ಲಿಕಾರ್ಜುನ ಸ್ವಾಮಿ, ಕೌತಾಲ್ ಶದಾಶಿವ, ರಾರವಿ ನಾಗೇಶಪ್ಪ, ಬಲಕುಂದಿ ಶರಣಬಸವ, ಉಡೆಗೋಳ ಖಜಾಸಾಬ್,ಶಿವರಾಮ್ ಗೌಡ,ಶರಣಬಸವ ಗೌಡ, ಮುದುಕಪ್ಪ, ಹಳೇಕೋಟೆ ಶೆಕ್ಕಣ್ಣ, ಮಂಜುನಾಥ,ಟಿ ಎಸ್ ಕೂಡ್ಲುರು ಅಯ್ಯಪ್ಪ,ಚಿರಂಜೀವಿ, ಮೆಹಬೂಬ್, ಬಸವರಾಜ ಇದ್ದರು.