Home ಜಿಲ್ಲೆ ಬೆಂಗಳೂರು ಬಂಡವಾಳ ಹೂಡಿಕೆ: ಸಣ್ಣ ಉದ್ಯಮಿಗಳಿಗೆ ಮನವರಿಕೆಗೆ ಕಾಶಪ್ಪನವರ್ ಸೂಚನೆ

ಬಂಡವಾಳ ಹೂಡಿಕೆ: ಸಣ್ಣ ಉದ್ಯಮಿಗಳಿಗೆ ಮನವರಿಕೆಗೆ ಕಾಶಪ್ಪನವರ್ ಸೂಚನೆ

ಬೆಂಗಳೂರು, ಸೆ.24: – ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಿಗಳ ಇಲಾಖೆಯಲ್ಲಿರುವ ಅವಕಾಶಗಳ ಕುರಿತು ಬಂಡವಾಳ ಹೂಡಿಕೆ ಮಾಡಲು ಉದ್ಯಮಿಗಳಿಗೆ ಮನವರಿಕೆ ಮಾಡಿಕೊಡಬೇಕೆಂದು ಸಚಿವ ವಿಜಯಾನಂದ ಕಾಶಪ್ಪನವರ ಅಧಿಕಾರಿಗಳಿಗೆ ಸಲಹೆ ಸೂಚಿಸಿದ್ದಾರೆ.
ಈ ಸಂಬಂಧ ವಿಕಾಸಸೌಧದಲ್ಲಿ ಸಣ್ಣ ಮತ್ತು ಸಾರ್ವಜನಿಕ ಉದ್ಯಮಗಳ ಇಲಾಖೆಯ ಸಹಾಯಕ ನಿರ್ದೇಶಕ( ಂಆ)ರನ್ನು ಭೇಟಿ ಮಾಡಿ ಇಲಾಖೆ ಸ್ಥಿತಿಗತಿ ಕುರಿತು ಮಾತುಕತೆ ನಡೆಸಿದರು.


ಸಣ್ಣ ಮತ್ತು ಸಾರ್ವಜನಿಕ ಉದ್ಯಮಗಳ ಇಲಾಖೆಯಲ್ಲಿ ಬಂಡವಾಳ ಹೂಡಿಕೆ ಮಾಡಲು ಸಾಕಷ್ಟು ಅವಕಾಶಗಳಿವೆ. ಇಲಾಖೆಯಲ್ಲಿರುವ ಹೊಸ ಯೋಜನೆಗಳ ಬಗ್ಗೆ ಉದ್ಯಮಿಗಳಿಗೆ ಮನವರಿಕೆ
ಮಾಡಿಕೊಡಬೇಕು. ಕೆಲವರಿಗೆ ಇದರ ಬಗ್ಗೆ ಮಾಹಿತಿ ಇರುವುದಿಲ್ಲ ಅಧಿಕಾರಿಗಳು ಈ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕೆಂದು ಕಿವಿಮಾತು ಹೇಳಿದರು.
ಸರ್ಕಾರ ಜಾರಿಗೆ ತಂದಿರುವ ಹೊಸ ಯೋಜನೆಗಳು ಬಂಡವಾಳ ಹೂಡಿಕೆಯಿಂದ ಸಿಗಬಹುದಾದ ಅನುಕೂಲಗಳು, ಉದ್ಯೋಗಗಳ ಸೃಷ್ಟಿ, ಮೂಲಭೂತ ಸೌಕರ್ಯಗಳು, ಇತ್ಯಾದಿ ಅಂಶಗಳ ಬಗ್ಗೆ ಮನವರಿಕೆ ಮಾಡಿಕೊಡಿ. ಇದರಿಂದ ಸಣ್ಣ ಉದ್ಯಮಿಗಳು ಬಂಡವಾಳ ಹೂಡಿಕೆ ಮಾಡಲು ಮುಂದೆ ಬರುತ್ತಾರೆ ಎಂದು ಹೇಳಿದರು.
ರಾಜ್ಯ ಸರ್ಕಾರ ಸಣ್ಣ ಕೈಗಾರಿಕೆಗಳಿಗೆ ಪೆÇ್ರೀತ್ಸಾಹ ನೀಡುವ ನಿಟ್ಟಿನಲ್ಲಿ ಸಾಕಷ್ಟು ಸಬ್ಸಿಡಿಯನ್ನು ನೀಡುತ್ತದೆ .ಇಲಾಖೆಯಲ್ಲಿ ಈ ಬಗ್ಗೆ ಹೆಚ್ಚಿನ ಪ್ರಚಾರದ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟರು.


ವಾಸ್ತವವಾಗಿ ದೇಶದಲ್ಲಿ ಯಾವುದೇ ರಾಜ್ಯಗಳು ಸಣ್ಣ ಕೈಗಾರಿಕೆಗಳಿಗೆ ನೀಡದಷ್ಟು ಪೆÇ್ರೀತ್ಸಾಹವನ್ನು ನಮ್ಮ ಕಾಂಗ್ರೆಸ್ ಸರ್ಕಾರ ನೀಡುತ್ತದೆ. ಹೀಗಾಗಿಯೇ ಈಗಲೂ ನಾವು ಇತರರಿಗಿಂತಲೂ ಮುಂದೆ ಇದ್ದೇವೆ ಎಂದು ತಿಳಿಸಿದರು.
ಸಣ್ಣ ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಮಗೆ ಸಂಪೂರ್ಣವಾದ ಅರಿವಿದೆ. ಒಂದೇ ಹಂತದಲ್ಲಿ ಇವೆಲ್ಲವನ್ನೂ ಪರಿಹರಿಸಲು ಸಾಧ್ಯವಿಲ್ಲ. ಹಂತ ಹಂತವಾಗಿ ಕಾಲಮಿತಿಯೊಳಗೆ ಬಗೆಹರಿಸಿಕೊಳ್ಳುವ ಭರವಸೆಯನ್ನು ಸಚಿವರು ನೀಡಿದರು.


ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ನಂತರ ಈಗಾಗಲೇ ಅಧಿಕಾರಿಗಳ ಜೊತೆ ಹಲವು ಸುತ್ತಿನ ಮಾತುಕತೆ ಸಭೆ ನಡೆಸಲಾಗಿದೆ. ಸಮಸ್ಯೆಗಳು ಪರಿಹರಿಸುವ ಬಗ್ಗೆ ತಾವು ವಿಶೇಷವಾದ ಕಾಳಜಿಯನ್ನು ಹೊಂದಿದ್ದೇನೆ .ಒಂದೇ ಹಂತದಲ್ಲಿ ಎಲ್ಲವೂ ಬಗೆಹರಿಸಲು ಸಾಧ್ಯವಿಲ್ಲ. ಸಂಪನ್ಮೂಲದ ಇತಿಮಿತಿಗಳಿಗೆ ಪರಿಹರಿಸುವ ಇಂಗಿತವನ್ನು ವ್ಯಕ್ತಪಡಿಸಿದರು.