ಬೆಂಗಳೂರು,ಜು.1-ಸನಾತನ ಯೋಗವನ್ನು ಪ್ರಚಾರ ಮಾಡಲು ಬಹು ಅಮೂಲ್ಯವಾದ ಕೊಡುಗೆ ನೀಡುತ್ತಿರುವ ಯೋಗ ಶಿಕ್ಷಕರಾದ ಡಾ. ವಿಶ್ವ ಬಂಧು ನಾಗೇಶ್ ಅವರ ನೇತೃತ್ವದಲ್ಲಿ ನಾರ್ಥ್ ಬೆಂಗಳೂರು ಎಜುಕೇಷನಲ್ ಟ್ರಸ್ಟ್ ನ ಆಶ್ರಯದಲ್ಲಿ ಕಮ್ಮನಗೊಂಡನಹಳ್ಳಿಯಲ್ಲಿರುವ ಪೂರ್ಣ ಪ್ರಜ್ಞಾ ಅಕಾಡೆಮಿ ಶಾಲೆಯಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎನ್ನುವ ದೂರದೃಷ್ಟಿಯನ್ನು ಅನುಸರಿಸಿ ದಿನನಿತ್ಯದ ಜೀವನದಲ್ಲಿ ಯೋಗದ ಮಹತ್ವ ತಿಳಿಸುವ ಮೂಲಕ ಮಕ್ಕಳಿಗೆ ಯೋಗಾಭ್ಯಾಸದ ವಿವಿಧ ಆಸನಗಳನ್ನು ಮಾಡಿಸಿ ಆಸನಗಳಿಂದ ಆರೋಗ್ಯದ ಉಪಯೋಗಗಳನ್ನು ತಿಳಿಸಿ ದಿನ ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಲು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಆರ್.ಶಾಂತಕುಮಾರ್, ಕಾರ್ಯದರ್ಶಿಗಳಾದ ಡಾ. ಡಿ.ಎನ್.ಹರಿದಾಸ್, ಖಜಾಂಚಿಗಳಾದ ಜಿ.ರಾಜೇಂದ್ರ, ನಿರ್ದೇಶಕರಾದ ಬಿ.ಎನ್.ಅಶೋಕ,ಪಿ.ಪಿ.ಎ.ಶಾಲೆಯ ಮುಖ್ಯೋಪಾಧ್ಯಾಯಿನಿ.ಜ್ಯೋತಿ ದೇಶಪಾಂಡೆ, ಎಮ್.ಎನ್.ಟಿ.ಐ ಪ್ರಾಂಶುಪಾಲರಾದ ಬಸಪ್ಪ,ಶಿಕ್ಷಕರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
































