
ಸಂಜೆವಾಣಿ ವಾರ್ತೆ
ಕೆ.ಆರ್.ನಗರ,ಜು.30:- ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ಅವರ ನಿರ್ದೇಶನದಂತೆ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಚಿಂತನೆಗಳನ್ನು ತಳ ಮಟ್ಟದಲ್ಲಿ ಜಾರಿಗೊಳಿಸಿ ದೇಶದಲ್ಲಿ ಕಾಂಗ್ರೆಸ್ ಪಕ್ಷದ ಪುನರ್ ಸಂಘಟನೆಗೆ ಅಭಿಯಾನ ಆರಂಭವಾಗಿದೆ ಎಂದು ಎಐಸಿಸಿ ಉಸ್ತುವಾರಿ ಜಾರ್ಖಂಡ್ ಪಿಸಿಸಿ ಮಾಜಿ ಅಧ್ಯಕ್ಷ ರಾಜೇಶ್ ಠಾಕೂರ್ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಂಘಟನ ಸೃಜನ್ ಅಭಿಯಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಸಂಘಟನೆಯ ಅತ್ಯಂತ ಪ್ರಮುಖ ಆಧಾರದಾರ ಬೂತ್ ಮಟ್ಟದ ಸದೃಢ ಕಾರ್ಯಕರ್ತರು, ಬ್ಲಾಕ್ ಅಧ್ಯಕ್ಷರು, ಯುವ ಕಾಂಗ್ರೇಸ್ ಮುಖಂಡರೊಡನೆ ನಿಮ್ಮೊಂದಿಗೆ ಬ್ಲಾಕ್ ಮಟ್ಟದಲ್ಲಿ ಚರ್ಚಿಸಲು ಬಂದಿದ್ದೇನೆ ಹಾಗಾಗಿ ಕಾಂಗ್ರೆಸ್ ಸಂಘಟನೆ ಗ್ರಾಮ, ವಾರ್ಡ್ ಮತ್ತು ಬೂತ್ ಮಟ್ಟದವರೆಗೆ ಬಲಿಷ್ಠವಾಗಿರಬೇಕು ಎಂದು ಹೇಳಿದರು.
ಕಾಂಗ್ರೆಸ್ ಕಾರ್ಯಕರ್ತರೂ ಪಕ್ಷದ ಸಿದ್ಧಾಂತಗಳು ಮತ್ತು ಜನಪರ ವಿಚಾರಗಳನ್ನು ಮನೆ ಮನೆಗೆ ತಲುಪಿಸುವ ಸಂಕಲ್ಪ ಮಾಡಬೇಕು. ಸಮಸ್ಯೆ ಗಳಿಗಾಗಿ ಹೋರಾಡಬೇಕು. ಕಾಂಗ್ರೆಸ್ನ ಸಿದ್ಧಾಂತಗಳಿಗೆ ಸಂಪೂರ್ಣ ಬದ್ದರಾಗಿರಬೇಕು. ನೀವು ನಿಜವಾದ ಸಂಗತಿಗಳನ್ನು ಪ್ರಾಮಾಣಿಕನಾಗಿ ನನ್ನೊಂದಿಗೆ ಹಂಚಿಕೊಂಡಾಗ ಮಾತ್ರ ನಾನು ನಿಮ್ಮ ಮಾತುಗಳನ್ನು ಸರಿಯಾದ ರೀತಿಯಲ್ಲಿ ನಾಯಕತ್ವದವರೆಗೆ ತಲುಪಿಸಲು ಸಾಧ್ಯವಾಗುತ್ತದೆ ಎಂದರು.
ಎಐಸಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಚಿಂತನೆಗಳನ್ನು ತಳಮಟ್ಟದಲ್ಲಿ ಜಾರಿಗೊಳಿಸಿ, ದೇಶದಲ್ಲಿ ಕಾಂಗ್ರೆಸ್ ಪಕ್ಷದ ಪುನರ್ ಸಂಘಟನೆಗೆ ಅಭಿಯಾನ ಆರಂಭಿಸಲಾಗಿದ್ದು ಎಲ್ಲರೂ ಸಹಕಾರ ನೀಡಬೇಕೆಂದು ಕೋರಿದರು.
ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮಾತನಾಡಿ ಕೆ.ಆರ್.ನಗರ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ ಇದಕ್ಕೆ ಉದಾಹರಣೆ ಭಾನುವಾರ ಟಿಎಪಿಸಿಎಂಎಸ್ನ ಆಡಳಿತ ಮಂಡಳಿಯ 12ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 12 ಮಂದಿ ಅಭ್ಯರ್ಥಿಗಳು ಜಯಗಳಿಸಿರುವುದು ಸಾಕ್ಷಿ ಎಂದರು.
ಕಾಂಗ್ರೆಸ್ ಪಕ್ಷ ಸದೃಢವಾಗಿರುವುದರಿಂದ 2028ಕ್ಕೆ ನಡೆಯುವ ವಿಧಾನ ಸಭಾ ಚುನಾವಣೆಯಲ್ಲಿ ಶಾಸಕ ಡಿ.ರವಿಶಂಕರ್ ವಿರುದ್ಧ ಜೆಡಿಎಸ್ ಮತ್ತು ಬಿಜೆಪಿಯಿಂದ ಸ್ಪರ್ಧಿಸುವಂತವರು ಚಿಂತನೆ ಮಾಡುವ ಅಗತ್ಯವಿದೆ ಎಂದು ಹೇಳಿದ ಅಧ್ಯಕ್ಷರು ರವಿಶಂಕರ್ ಮತ್ತೆ ಆಯ್ಕೆಯಾಗಿ ರಾಜ್ಯ ಸರ್ಕಾರದಲ್ಲಿ ಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು.
ಸಂಘಟನಾ ಸೃಜನ ಅಭಿಯಾನದ ಅಂಗವಾಗಿ ನಡೆದ ವಿಧಾನಸಭಾ ಕ್ಷೇತ್ರ ಮಟ್ಟದ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ಅಧ್ಯಕ್ಷರು, ಮಹಿಳಾ, ಯುವ ಕಾಂಗ್ರೆಸ್, ಅಧ್ಯಕ್ಷರು, ಬ್ಲಾಕ್ ಸೇವಾ ದಳ, ಪ್ರಚಾರ ಸಮಿತಿ, ಕಾರ್ಮಿಕ ವಿಭಾಗ, ಅಲ್ಪ ಸಂಖ್ಯಾಂತರ ವಿಭಾಗ, ಹಿಂದುಳಿದ ವರ್ಗ, ಎಸ್.ಟಿ.ಎಸ್.ಸಿ ಘಟಕಗಳು, ಗ್ಯಾರಂಟಿ ಅಭಿವೃದ್ಧಿ ಸಮಿತಿ ಸದಸ್ಯರು, ರಾಜೀವ್ ಗಾಂಧಿ ಗ್ರಾಮೀಣಾಭಿವೃದ್ಧಿ ನಿಗಮದ ಸದಸ್ಯರು ಹಾಗೂ ವಿವಿಧ ವಿಭಾಗಗಳ ಪ್ರತಿನಿಧಿ ಗಳ ಜೊತೆಗೆ ಎಐಸಿಸಿ ಉಸ್ತುವಾರಿ ಜಾರ್ಖಂಡ್ ಪಿಸಿಸಿ ಮಾಜಿ ಅಧ್ಯಕ್ಷ ರಾಜೇಶ್ ಠಾಕೂರ್ ರವರು ಒನ್.ಟು.ಓನ್ ಮಾಹಿತಿ ಪಡೆದರು.
ಬೂತ್ ಸಮಿತಿಗಳ ರಚನೆಯನ್ನು ಶೀಘ್ರು ಪೂರ್ಣ ಗೊಳಿಸಲು, ಸದಸ್ಯತ್ವ ಅಭಿಯಾನಕ್ಕೆ ವೇಗ ನೀಡಲು ಹಾಗೂ ಸಾರ್ವಜನಿಕರೊಂದಿಗೆ ನಿರಂತರ ಸಂಪರ್ಕ ಕಾರ್ಯಕರ್ತರಿಗೆ ಕಾಂಗ್ರೆಸ್ ನಾಯಕತ್ವದ ಚಿಂತನೆಯಂತೆ ಸಂಘಟನೆ ಬಲಗೊಳಿಸಲು ತೀರ್ಮಾನಿಸಲಾಯಿತು.
ಶಾಸಕ ಡಿ.ರವಿಶಂಕರ್, ಎಐಸಿಸಿಯ ಮೈಸೂರು ಜಿಲ್ಲಾ ಉಸ್ತುವಾರಿ ಹೆಚ್.ಸಿ.ಬಸವರಾಜ್, ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಕಾರ್ಯದರ್ಶಿ ಶಿವಪ್ರಕಾಶ್, ಯುವ ಕಾಂಗ್ರೆಸ್ ಅಧ್ಯಕ್ಷ ಚಂದನ್, ಮಾತನಾಡಿದರು. ಕೆಪಿಸಿಸಿ ಸದಸ್ಯ ಸಿ.ಪಿ.ರಮೇಶ್, ಜಿ.ಪಂ.ಮಾಜಿ ಸದಸ್ಯರಾದ ಜಿ.ರಾಮೇಗೌಡ, ಮಾರ್ಚಹಳ್ಳಿಶಿವರಾಂ, ತಾ.ಪಂ. ಮಾಜಿ ಅಧ್ಯಕ್ಷರಾದ ಹಾಡ್ಯಮಹದೇವಸ್ವಾಮಿ, ಹೆಚ್.ಟಿ.ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಕೆ.ಪಿ.ಯೋಗೇಶ್,ಟಿಎಪಿಸಿಎಂಎಸ್ ನಿರ್ದೇಶಕರಾದ ಎಸ್.ಸಿದ್ದೇಗೌಡ, ಹೆಚ್.ಪಿ.ಪ್ರಶಾಂತ್, ಕಾಂಗ್ರೆಸ್ ನಗರಾಧ್ಯಕ್ಷ ಎಂ.ಜೆ.ರಮೇಶ್, ತಾಲೂಕು ವಕ್ತಾರ ಸೈಯದ್ಜಾಬೀರ್, ಮುಖಂಡರಾದ ವೈ.ಎಸ್.ಜಯಂತ್, ಲತಾರವಿ, ರಾಣಿ, ಸರಿತಾ ಜವರಪ್ಪ, ಸುನೀತಾ, ತಾರಾಕುಮಾರ್,, , ಪ್ರಭಾಕರ್, ತಿಮ್ಮಶೆಟ್ಟಿ, ಜಲ್ಲಿಮಂಜು, ಮತ್ತೀತರರು ಹಾಜರಿದ್ದರು.


































