Home ಸುದ್ದಿ ಅಂತರಾಷ್ಟ್ರೀಯ ಟ್ರಂಪ್ ಹತ್ಯೆ ಮಾಡಿದವರಿಗೆ 10 ಮಿಲಿಯನ್ ಡಾಲರ್ ಬಹುಮಾನ

ಟ್ರಂಪ್ ಹತ್ಯೆ ಮಾಡಿದವರಿಗೆ 10 ಮಿಲಿಯನ್ ಡಾಲರ್ ಬಹುಮಾನ

ಇರಾನ್ ಸಶಸ್ತ್ರ ಗುಂಪು ಘೋಷಣೆ
ಟೆಹ್ರಾನ್, ಜು.೧೭-ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊಲ್ಲುವವರಿಗೆ ೧೦ ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿ ಇರಾನ್ ಸಶಸ್ತ್ರ ಗುಂಪು ಘೋಷಿಸಿದೆ.
ತನ್ನನ್ನು ಇಸ್ಲಾಮಿಕ್ ರೆಸಿಸ್ಟೆನ್ಸ್ ಇರಾಕ್ ಎಂದು ಗುರುತಿಸಿಕೊಂಡಿರುವ ಈ ಗುಂಪು ಜುಲೈ ೧೬ ರಂದು ಈ ಪ್ರಕಟಣೆ ಹೊರಡಿಸಿರುವುದನ್ನು ಉಲ್ಲೇಖಿಸಿ ಖಾಸಗಿ ಚಾನಲ್ ವರದಿ ಮಾಡಿದೆ
ಈ ಘೋಷಣೆ ೨೦೨೦ರಲ್ಲಿ ಬಾಗ್ದಾದ್‌ನಲ್ಲಿ ನಡೆದ ಅಮೆರಿಕದ ಡ್ರೋನ್ ದಾಳಿಯಲ್ಲಿ ಇರಾನ್‌ನ ಜನರಲ್ ಖಾಸಿಂ ಸುಲೈಮಾನಿ ಮತ್ತು ಇರಾಕಿನ ಮಿಲಿಷಿಯಾ ನಾಯಕ ಅಬು ಮಹ್ದಿ ಅಲ್-ಮುಹಂದಿಸ್ ಮೃತಪಟ್ಟ ಘಟನೆಯ ಪ್ರತೀಕಾರವಾಗಿ ಈ ಘೋಷಣೆ ಮಾಡಲಾಗಿದೆ ಎಂದು ಸಂಘಟನೆ ಹೇಳಿದೆ.
ಟ್ರಂಪ್ ಅವರನ್ನೇ ಆ ಸಾವಿಗೆ ಹೊಣೆಗಾರರೆಂದು ಆರೋಪಿಸಿ, ತನ್ನ ಹೇಳಿಕೆಯಲ್ಲಿ ಧಾರ್ಮಿಕ ಮತ್ತು ರಾಜಕೀಯ ಉಲ್ಲೇಖಗಳನ್ನು ಬಳಸಿದೆ.
ಮುಖ್ಯವಾಗಿ, ಈ ದಾವೆಯನ್ನು ಸ್ವತಂತ್ರ ಮೂಲಗಳಿಂದ ದೃಢೀಕರಿಸಲಾಗಿಲ್ಲ.
ಸಾಮಾನ್ಯವಾಗಿ, ಪ್ರಸ್ತುತ ಅಥವಾ ಮಾಜಿ ರಾಷ್ಟ್ರ ಮುಖ್ಯಸ್ಥರ ವಿರುದ್ಧದ ಸಾರ್ವಜನಿಕ ಬೆದರಿಕೆಗಳನ್ನು ಅಮೆರಿಕದ ಭದ್ರತಾ ಮತ್ತು ಕಾನೂನು ಜಾರಿ ಸಂಸ್ಥೆಗಳು ಗಂಭೀರವಾಗಿ ಪರಿಗಣಿಸಿ ಪರಿಶೀಲಿಸುತ್ತವೆ. ಆದರೆ ಅಮೆರಿಕದ ಅಧಿಕಾರಿಗಳಿಂದ ಈ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಹೊರ ಬಂದಿಲ್ಲ
ಕುರಾನ್ ವಚನ ಉಲ್ಲೇಖ
ಈ ಗುಂಪು ಇಸ್ಲಾಮಿಕ್ ಪ್ರಾರ್ಥನೆಯಾದ ಪರಮ ದಯಾಮಯಿ ಕರುಣಾ ಮಯನೂ ಆದ ಅಲ್ಲಾಹನ ಹೆಸರಿನಲ್ಲಿ ಎಂಬ ಸಾಲುಗಳೊಂದಿಗೆ ಪ್ರಾರಂಭಿಸಿದೆ. ಕುರಾನ್ ನ ಒಂದು ವಚನವನ್ನು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ. ನ್ಯಾಯಯುತ ಪ್ರತೀಕಾರಗಳಿಂದ ಮುಗ್ಧ ಜೀವಗಳನ್ನು ಉಳಿಸಬಹುದು. ಇದರಿಂದ ನೀವಯ ಧರ್ಮ ನಿಷ್ಠರಾಗಬಹುದು ಎಂದು ತಿಳಿಸಿದೆ.
ಅಮೆರಿಕ ಕನ್ಸ್ ಸರ್ವೇಟಿವ್ ಪಕ್ಷದ ಕಾರ್ಯಕರ್ತೆ ಲಾರಾ ಲೂಮರ್, ಈ ವರದಿಗಳನ್ನು ಟೀಕಿಸಿದ್ದಾರೆ.
ಟ್ರಂಪ್ ಅವರ ಹತ್ಯೆಗಾಗಿ,ಇಸ್ಲಾಮಿಕ್ ರೆಸಿಸ್ಟೆನ್ಸ್ ಘೋಷಿಸಿರುವ ೧೦ ಮಿಲಿಯನ್ ಡಾಲರ್ ಬಹುಮಾನದ ಸುದ್ದಿಯನ್ನು ರಷ್ಯಾದ ಸರ್ಕಾರಿ ಮಾಧ್ಯಮಗಳು ಪ್ರಚಾರ ಮಾಡುತ್ತಿವೆ ಎಂದು ಸಾಮಾಜಿಕ ಜಾಲ ತಾಣ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.