
ಸಂಜೆವಾಣಿ ವಾರ್ತೆ
ಹೊಸಪೇಟೆ.ಜು.5 ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆ ನಗರಕ್ಕೆ ಜು.7 ರಂದು ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್ ಆಗಮಿಸುತ್ತಿದ್ದಾರೆ.
ಜು.7 ರಂದು ಬೆಳಿಗ್ಗೆ 9-30ಕ್ಕೆ ಬೆಂಗಳೂರಿನ ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ಹೆಲಿಕ್ಯಾಪ್ಟರ್ ಮೂಲಕ ಹೊರಟು, 10-45ಕ್ಕೆ ತಾಲೂಕಿನ ಕಮಲಾಪುರ ಬಳಿಯ ಹಂಪಿ ಕನ್ನಡ ವಿಶ್ವವಿದ್ಯಾಲಯದ ಹೆಲಿಪ್ಯಾಡ್ ಗೆ ಆಗಮಿಸುವರು.
ನಂತರ 11-30ಕ್ಕೆ ತಾಲೂಕಿನ ಹಂಪಿಯ ಹೆರಿಟೇಜ್ ರೆಸಾರ್ಟ್ನಲ್ಲಿ “ಜಾಗತಿಕ ಪ್ರವಾಸಿ ತಾಣ ಅಭಿವೃದ್ದಿ” ಯೋಜನೆಯಡಿ ‘ಹಂಪಿ ಪ್ರವಾಸಿ ತಾಣ’ ವನ್ನು ಅಭಿವೃದ್ದಿ ಪಡಿಸುವ ಕುರಿತು ಜರುಗಲಿರುವ ರಾಜ್ಯ ಮಟ್ಟದ ಸಮಾಲೋಚನಾ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ.
ನಂತರ ಮಧ್ಯಾಹ್ನ 3 ಗಂಟೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಹೆಲಿಪ್ಯಾಡ್ ಮೂಲಕ ಹೆಲಿಕ್ಯಾಪ್ಟರ್ ನಲ್ಲಿ ಬೆಂಗಳೂರಿಗೆ ತೆರಳಲಿದ್ದಾರೆ.





























