Home ಜಿಲ್ಲೆ ಮೈಸೂರು ಕಸಾಯಿ ಖಾನೆ ರವಾನಿಸುತ್ತಿದ್ದ ರಾಸುಗಳನ್ನು ರಕ್ಷಿಸಿದ ಪೆÇೀಲಿಸರು

ಕಸಾಯಿ ಖಾನೆ ರವಾನಿಸುತ್ತಿದ್ದ ರಾಸುಗಳನ್ನು ರಕ್ಷಿಸಿದ ಪೆÇೀಲಿಸರು

ಸಂಜೆವಾಣಿ ವಾರ್ತೆ
ನಂಜನಗೂಡು. ಜು.30 :-
ತಾಲ್ಲೂಕಿನ ಕೌಲಂದೆ ಚೆಕ್ ಪೆÇೀಸ್ಟ್ ಬಳಿ 2 ಕ್ಯಾಂಟರ್ಗಳಲ್ಲಿ ತಮಿಳು ನಾಡಿನ ತಳವಾಡಿ ಕಸಾಯಿ ಖಾನೆಗೆ ಸಾಗಿಸುತ್ತಿದ್ದ 30 ಕ್ಕೂ ಹೆಚ್ಚು ರಾಸುಗಳನ್ನು ಕೌಲಂದೆ ಪೆÇೀಲಿಸರು ರಕ್ಷಣೆ ಮಾಡಿದ್ದಾರೆ.


ಮಂಗಳವಾರ ಮುಂಜಾನೆ ಸುಮಾರು 8 ಗಂಟೆ ಸುಮಾರಿಗೆ ಮೈಸೂರಿ ನಿಂದ ತಮಿಳು ನಾಡಿನ ತಳವಾಡಿ ಕಸಾಯಿ ಖಾನೆಗೆ ಸಾಗಿಸುತ್ತಿದ ಕೆ ಎ 01 ಎ ಜಿ 4796 ನ ಚಾಲಕ ಸಲ್ಮಾನ (38), ಕೆ ಎ 06 ಬಿ 5714, 2 ಕ್ಯಾಂಟರ್ ವಾಹನದಲ್ಲಿ ಸುಮಾರು 30 ಕ್ಕೂ ಹೆಚ್ಚು ಹಸು ಕರು, ಎಮ್ಮಕರು, ಎಮ್ಮಗಡಸು,ಕೋಣಗಳನ್ನು ತುಂಬಾ ಒತ್ತೊತ್ತಾಗಿ ಹಿಂಸಾರೂಪದಲ್ಲಿ ತುಂಬಿಕೊಂಡು ಹೋಗುತ್ತಿದದ್ದನ್ನು. ಖಚಿತ ಮಹಿತಿ ಮೇರೆಗೆ ಕೌಲಂದೆ ಠಾಣೆ ಪೆÇಲೀಸ್ ಸಬ್ ಇನ್ಸ್ಪೆಕ್ಟರ್, ಬಸವರಾಜು ಮತ್ತು ತಂಡದವರು ವಾಹನಗಳನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ. ಗಾಡಿಯ ಒಳಗೆ ಧನ ಕರುಗಳು ಇರುವುದು ಕಂಡುಬಂದಿದೆ. ವಾಹನವನ್ನು ತಡೆದು ನಿಲ್ಲಿಸುತ್ತಿದ್ದಂತೆ ಎರಡು ವಾಹನದ ಚಾಲಕರು ಗಾಡಿಯಿಂದ ಜಿಗಿದು ಪರಾರಿಯಾಗಿದ್ದಾರೆ ಕ್ಲೀನರ್ ಗಳನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ.1 ಲಕ್ಷ ಮೌಲ್ಯದ 56 ದನಕರುಗಳನ್ನು ಮೈಸೂರಿನ ಸಂತೆಯಿಂದ ಅಕ್ರಮವಾಗಿ ತಮಿಳು ನಾಡಿನ ತಳವಾಡಿ ಕಾಯಿಖಾನೆಗೆ ಸಾಗಿಸಲಾಗುತ್ತಿತ್ತು ಎಂಬ ಸತ್ಯ ತಿಳಿದು ಬಂದಿದೆ. ಈ ಸಂಬಂಧ ಲಾರಿ ಕ್ಲೀನರ್ ಗಳನ್ನು ವಶಕ್ಕೆ ಪಡೆದುಕೊಂಡು, 56 ಹಸುಗಳನ್ನು ಮೈಸೂರಿನ ಪಿಂಜರಪೆÇೀಲ್ಗೆ ಕಳಿಸಲಾಗಿದೆ ಎಂದು ಪೆÇಲೀಸ್ ಇಲಾಖೆ ತಿಳಿಸಿದೆ.