
ಸಂಜೆವಾಣಿ ವಾರ್ತೆ
ಬಳ್ಳಾರಿ, ಜು.06: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕುಡದರಹಾಳು ಗ್ರಾಮದಲ್ಲಿ ಶ್ರೀ ತಾಯಮ್ಮ ದೇವಿ ಜನ ಸೇವಾ ಹಾಗೂ ಸಾಂಸ್ಕೃತಿಕ ಕಲಾ ಟ್ರಸ್ಟ್ ಪಂ. ಪುಟ್ಟರಾಜ ಗವಾಯಿಗಳ ಕಲಾಸಂಘ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳ್ಳಾರಿ ಇವರ ಸಹಯೋಗದಲ್ಲಿ ನಿನ್ನೆ ಸಂಜೆ ಹಮ್ಮಿಕೊಂಡ ಗದುಗಿನ ಉಭಯ ಗುರುಗಳಾದ ಪಂ. ಪಂಚಾಕ್ಷರ ಗವಾಯಿ ಪಂ. ಪುಟ್ಟರಾಜ ಗವಾಯಿಗಳ ಹಾಗೂ ರಂಗಭೂಮಿ ಗಜಸಿಂಹ ಎಲಿವಾಳ ಸಿದ್ದಯ್ಯ ಸ್ವಾಮಿಗಳ 19ನೇ ವರ್ಷದ ಜಾತ್ರಾ ಮಹೋತ್ಸವದ ನೂತನ ರಥಕ್ಕೆ ಚಾಲನೆ ನೀಡಿ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದ ಸಿರುಗುಪ್ಪ ತಾಲೂಕು ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷರಾದ ಎನ್.ಜಿ.ಬಸವರಾಜರು
ನಂತರ ಮಾತನಾಡಿದವರು ರಾಜ್ಯದ ಅಸಂಖ್ಯಾತ ಭಕ್ತ ಸಮುದಾಯ ಹೊಂದಿರುವ ಮಠಗಳಲ್ಲಿ ಗದಗಿನ ವೀರೇಶ್ವರ ಪುಣ್ಯಶ್ರಮ ಒಂದು ಆಗಿದ್ದು ನಿತ್ಯ ಅನ್ನದಾಸೋಹ ಸಂಗೀತ ನಾಟಕ ಸಂಸ್ಕೃತಿ ನಾಡಿನುದ್ದಕ್ಕೂ ಅಂಧ ಅನಾಥರು ಜಾತಿ ಮತ ಭೇದಭಾವ ಇಲ್ಲದೆ ಎಲ್ಲರಿಗೂ ಶಿಕ್ಷಣ ಸಂಗೀತ ಜೊತೆಗೆ ಅನ್ನದಾಸೋಹ ಕಾರ್ಯ ಪಂಚಾಕ್ಷರಿ ಗವಾಯಿಗಳಿಂದ ಹಿಡಿದು ಈಗಿನ ಕಲ್ಲಯ್ಯಜ್ಜ ನವರು ಈ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ.
ಇಡೀ ದೇಶದಲ್ಲಿ ಸಂಗೀತದ ಜಾತ್ರೆ ನಡೆದರೆ ಗದಗಿನಲ್ಲಿ ಮಾತ್ರ ನಡೆಯುತ್ತಿತ್ತು ವಿಶೇಷವೆಂದರೆ ಃsಟಿಟ ತಾಲೂಕಿನ ಕುಡದರಹಾಳು ಗ್ರಾಮದಲ್ಲಿ ನೂತನ ತೇರನ್ನು ನಿರ್ಮಿಸಿ ಚಿಲಿಪಿಲಿ ಚಿನ್ನರಿಂದ ನೂತನ ರಥ ಸಾಗಿದ್ದು ಬಹು ವಿಶೇಷವಾಗಿದೆ. ಈ ಭಾಗದ ಮಕ್ಕಳಲ್ಲಿನ ಕಲೆ ಸಾಹಿತ್ಯ ನಾಟಕದ ಬಗ್ಗೆ ಮತ್ತು ಜನ ಸಾಮಾನ್ಯರಲ್ಲಿ ಅಡಗಿರುವ ಮೂಢನಂಬಿಕೆ ಅಜ್ಞಾನವನ್ನು ಹೋಗಲಾಡಿಸಲು ತಮ್ಮ ವಚನಗಳ ಮೂಲಕ ನಾಟಕದ ಮೂಲಕ ಸಾಮಾಜಿಕ ಜಾಗೃತಿಯನ್ನು ಡಾ. ಶಿವಕುಮಾರ್ ತಾತನವರು ನಿರಂತರ ಪ್ರಯತ್ನ ದಿಂದ ಮಾಡುತ್ತಿರುವುದಕ್ಕೆ ಇಂದು ಇಂತಹ ಕಾರ್ಯಕ್ರಮ ನಡೆಯಲಿಕ್ಕೆ ಸಾಧ್ಯವಾಗಿದೆ ಎಂದು ಹೇಳಿದರು.
ಡಾ ಶಿವಕುಮಾರ್ ತಾತನವರ ರಚನೆಯ ಒಳಗಣ್ಣ ಕಂಡ ವಚನಗಳು ಹಾಗೂ ಕಾರಂತರತ್ನ ಡಾ. ಶಿವಕುಮಾರ್ ತಾತನವರ ವಚನಗಳು ಎಂಬ ಎರಡು ಪುಸ್ತಕಗಳನ್ನು ರಂಗಭೂಮಿ ಉಪನ್ಯಾಸಕ ಆರ್. ಪಿ ಮಂಜುನಾಥ್ ಬಿಡುಗಡೆ ಮಾಡಿದರು. ನಂತರ ಚಂದ್ರಶೇಖರ ಹಳ್ಳದ ಗವಾಯಿಗಳಿಗೆ ಪಂ. ಪುಟ್ಟರಾಜ ಗವಾಯಿಗಳ ಪ್ರಶಸ್ತಿ, ಬಸವರಾಜ್ ಬೆಂಗೇರಿ ಇವರಿಗೆ ರಂಗಭೂಮಿ ಗಜ ಸಿಂಹ ಎಲಿವಾಳ ಸಿದ್ದಯ್ಯ ಸ್ವಾಮಿ ಪ್ರಶಸ್ತಿ, ಸಿರುಗುಪ್ಪದ ಜೆ. ನರಸಿಂಹಮೂರ್ತಿ ಅವರಿಗೆ ಸಾಹಿತ್ಯ ಸಾಮ್ರಾಟ್ ಚಂಪಾ ಪ್ರಶಸ್ತಿ, ಬಳ್ಳಾರಿಯ ಖ್ಯಾತ ಚಿತ್ರಕಲಾವಿದ ಮಹಮ್ಮದ್ ರಫಿ ಅವರಿಗೆ ರವಿವರ್ಮ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಲಾಯಿತು. ಬಳ್ಳಾರಿಯ ಕನ್ನಡ ಸಂಸ್ಕೃತಿ ಇಲಾಖೆ ಪ್ರಾಯೋಜನೆ ಅಡಿಯಲ್ಲಿ ಡಾ. ಶಿವಕುಮಾರ್ ತಾತನವರ ತಂಡದಿಂದ ಮೋಜಿನ ಮದುವೆಗಳು ಎಂಬ ಹಾಸ್ಯ ಪ್ರಧಾನ ಸಾಮಾಜಿಕ ನಾಟಕವು ನೆರೆದಿದ್ದ ಜನರನ್ನು ಮನರಂಜಿಸಿತು. ನಂತರ ದಳವಾಯಿ ಅಂಬಣ್ಣ, ಚಂದ್ರಶೇಖರ್ ಹಳ್ಳದ ಗವಾಯಿ, ವೀರೇಶ್ ದಳವಾಯಿ, ಹರ್ಷದ್ ಕುಮಾರ್, ಕುಮಾರ ಐಶ್ವರ್ಯ ಇವರಿಂದ ಪುಟ್ಟರಾಜ ಗವಾಯಿಗಳ ಭಕ್ತಿ ಸಂಗೀತ ಹಾಗೂ ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ನಂತರ ನಾಗಲಾಪುರ ಗ್ರಾಮ ಕುಡುದ್ರಾಳು, ಶ್ರೀಧರ್ ಗಡ್ಡೆ, ಸಿರುಗುಪ್ಪ, ದೇಶನೂರು, ಕಲಾವಿದ ರಿಂದ ಅಹೋರಾತ್ರಿ ಭಜನೆ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪ್ರೌಢಶಾಲಾ ಮುಖ್ಯ ಗುರುಗಳಾದ ಶ್ರೀ ಮುರುಗನ್, ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕರಾದ ಪಿ. ತಾಯಪ್ಪ, ಆಯಿನೋರು ಕಾಸಿಂಸಾಬ್, ರವಿ ಬಾಬು, ಬಿ.ಸತ್ಯನಾರಾಯಣ, ಪಿ. ಕಾಸಿಂಸಾಬ್, ಬಿ. ವೆಂಕಟೇಶ್, ಕಲಾ ಟ್ರಸ್ಟಿನ ಅಧ್ಯಕ್ಷರಾದ ಪಿ. ಆಲಂಭಾಷ. ಉಪಾಧ್ಯಕ್ಷರಾದ ಹುಸೇನಿ, ಎಚ್.ಕೆ ನಾಗರಾಜ, ಗೋನುವಾರ ಮಹಂತಯ್ಯ ಸ್ವಾಮಿ, ಹಾಗೂ ಊರಿನ ಮುಖಂಡರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು ಉಪಸ್ಥಿತರಿದ್ದರು.





























