Home ಜಿಲ್ಲೆ ಮೈಸೂರು ಅಂಗವಿಕಲ ಮಕ್ಕಳ ಆರೋಗ್ಯದಲ್ಲಿ ಆರೈಕೆದಾರರ ಪಾತ್ರ ಬಹಳ ಮುಖ್ಯವಾಗಿರುತ್ತದೆ: ವೆಂಕಟನಾಗಪ್ಪಶೆಟ್ಟಿ

ಅಂಗವಿಕಲ ಮಕ್ಕಳ ಆರೋಗ್ಯದಲ್ಲಿ ಆರೈಕೆದಾರರ ಪಾತ್ರ ಬಹಳ ಮುಖ್ಯವಾಗಿರುತ್ತದೆ: ವೆಂಕಟನಾಗಪ್ಪಶೆಟ್ಟಿ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.23-
ಅಂಗವಿಕಲರು ಎಂದರೇ ಅವರನ್ನು ನೋಡುವ ಮನೋಭಾವ ಬೇರೆಯೇ ಇರುತ್ತದೆ. ಅಂತಹ ಮಕ್ಕಳನ್ನು ತಾಯಿಯಾದವಳು ನೋಡುವ ಪರಿಯು ಮಗುವಿಗೆ ಆರೈಕೆಮಾಡಿ ಆ ಮಗುವನ್ನು ಉತ್ತಮ ವ್ಯಕ್ತಿಯಾಗಿ ಮಾಡಬೇಕು ಎನ್ನುವುದು ಅವರ ಅಸೆಯಾಗಿರುತ್ತದೆ. ಇದರ ಉದ್ದೇಶದಿಂದ ವಿಕಲಚೇತನರ ಸಂಸ್ಥೆಯಾದ ಮಾರ್ಗದರ್ಶಿ ಸಂಸ್ಥೆಯು ಶ್ರೀಮಾತೆ ಆರೈಕೆದಾರರ ಸೌಹಾರ್ದ ಸಹಕಾರಿ ಸಂಘವನ್ನು ಪ್ರಾರಾಂಭಿಸಿ ಯಶಸ್ವಿಯಾಗಿದೆ ಎಂದು ಖ್ಯಾತ ಉದ್ಯಮಿ, ಸಮಾಜ ಸೇವಕ ವೆಂಕಟನಾಗಪ್ಪ ಶೆಟ್ಟಿ ತಿಳಿದರು.


ನಗರದ ಜೋಡಿ ರಸ್ತೆಯಲ್ಲಿ ಇರುವ ರೋಟರಿ ಭವನದಲ್ಲಿ ಮಂಗಳವಾರ ನಡೆದ ಶ್ರೀಮಾತೆ ಆರೈಕೆದಾರರ ಸೌಹಾರ್ದ ಸಹಕಾರಿ ಸಂಘ ನಿಯಮಿತ 2025-26ನೇ ಸಾಲಿನ ಸರ್ವ ಸದಸ್ಯರ ನಾಲ್ಕನೇ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಾರ್ಗದರ್ಶಿ ಸಂಸ್ಥೆಯು ಅಂಗಲವಿಕಲ ಮಕ್ಕಳ ಅಭಿವೃದ್ದಿಗೆ ಶ್ರಮಿಸುತ್ತಿದೆ. ಮಕ್ಕಳ ಹಾಗೂ ಕುಟುಂಬಗಳ ಅಭಿವೃದ್ದಿಗೆ ಶ್ರೀಮಾತೆ ಆರೈಕೆದಾರರ ಸೌಹಾರ್ದ ಸಹಕಾರಿಯನ್ನು ತೆರೆದಿರುವುದು ಬಹಳ ಸಂತೋಷದ ವಿಷಯ. ಈಸಹಕಾರಿಯು ಲಾಭದಾಯಕದಲ್ಲಿ ನಡೆಯುತ್ತಿರುವು ಹೆಮ್ಮೆಯಾಗಿದೆ. ವಿಕಲಚೇತನ ಮಕ್ಕಳಿಗೆ ಶಾಲೆಯ ರೀತಿಯಲ್ಲಿ ಪಿಜಿಯೋಥೆರೇಪಿ ಮಾಡಿ ಇಂತಹ ಮಕ್ಕಳ ಭವಿಷ್ಯವನ್ನು ರೂಪಿಸಿಕೊಳ್ಳಲು ಕಾರಣವಾಗಿದೆ ಎಂದರು.


ವಿಕಲಚೇತರ ಮಾರ್ಗದರ್ಶಿ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷೆÀ ಶಾಂತಲಕ್ಷ್ಮಿ ಅವರು ಮಾತನಾಡಿ, ಬೆಂಗಳೂರಿನಲ್ಲಿ ವಿಕಲಚೇತನರಿಗಾಗಿ ಮಾರ್ಗದರ್ಶಿ ಸಂಸ್ಥೆಯನ್ನು ನಮ್ಮ ಸ್ನೇಹಿತರೆಲ್ಲರೂ ತೆರೆದೆವು. ಅದು ಉತ್ತಮ ಸೇವೆ ನೀಡುತ್ತಿದೆ. ನಮ್ಮ ಸದಸ್ಯರ ಬೆಂಬಲದೊಂದಿಗೆ ಚಾಮರಾಜನಗರದಲ್ಲಿ ಮಾರ್ಗದರ್ಶಿ ವಿಕಲಚೇತನರ ಅಭಿವೃದ್ದಿಗೆ ಸಂಸ್ಥೆಯನ್ನು ತೆರೆಯಾಯಿತು. ಜಿಲ್ಲೆಯ ಅಂಗವಿಕಲತೆ ಇರುವ ಮಕ್ಕಳನ್ನು ಗುರುತಿಸಿ ಅವರಿಗೆ ಸಹಾಯ ಹಸ್ತ ನೀಡುವ ಕಾರ್ಯಗಳನ್ನು ಸುಮಾರು 10 ವರ್ಷಗಳಿಂದ ಮಾಡಲಾಗುತ್ತಿದೆ ಎಂದು ಹೇಳಿದರು.


ನಿರ್ದೇಶಕ ಕೆ.ವಿ.ರಾಜಣ್ಣ ಮಾತನಾಡಿ, ನಮ್ಮ ಸಹಕಾರವು ಅಭಿವೃದ್ದಿಯ ಹಾದಿಯಲ್ಲಿ ಮುಂದೆ ಸಾಗುತ್ತಿದೆ.
10 ಲಕ್ಷ ರೂ ಷೇರುದಾರರು ಇದ್ದಾರೆ. ಮುಂದಿನ ದಿನಗಳಲ್ಲಿ ಸಂತೇಮರಳ್ಳಿ, ಕೊಳ್ಳೇಗಾಲ, ಹನೂರು ತೆರಕನಾಂಬಿ, ಹಾಗೂ ಗುಂಡ್ಲುಪೇಟೆಯಲ್ಲಿ ಶ್ರೀಮಾತೆ ಆರೈಕೆ ಸೌಹಾರ್ದ ಸಹಕಾರವನ್ನು ತೆರೆಯಲಾಗುವುದು. ಶ್ರೀಮಾತೆ ಆರೈಕೆದಾರರ ಸೌಹಾರ್ದವು ದೇಶದಲ್ಲಿ ಮೊದಲನೇಯದಾಗಿದೆ ಎಲ್ಲರು ಸಹಕಾರ ನಮ್ಮ ತಂಡಕ್ಕೆ ಇದೆ ಎಂದು ಹೇಳಿದರು.
ಶ್ರೀಮಾತೆ ಆರೈಕೆದಾರರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಡಾ.ಅಜಯ್.ಕೆ.ಟಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಕೋಮಲ, ಮುಖ್ಯ ಕಾರ್ಯನಿವಾಹಕರು ಕವಿತ.ಟಿ.ಎನ್, ನಿರ್ದೇಶಕರುಗಳು ಶ್ರೀಮಾತೆ ಆರೈಕೆದಾರರ ಹಾಗೂ ಮಾರ್ಗದರ್ಶಿ ಸಂಸ್ಥೆಯ ನೌಕರರು ಹಾಜರಿದ್ದರು.