
ಸಂಜೆವಾಣಿ ವಾರ್ತೆ
ಮಳವಳ್ಳಿ. ಸೆ.23:- ಮಳವಳ್ಳಿಯಲ್ಲಿ ಆದರ್ ತಿದ್ದುಪಡಿಗಾಗಿ ಅಹೋರಾತ್ರಿ ಸಾರ್ವಜನಿಕರ ಪರದಾಟ ಸರ್ಕಾರಗಳು ದಿನಕೊಂದು ಕಾನೂನುಗಳನ್ನು ಜನರಲ್ಲಿ ತರುತ್ತಿದ್ದು ಪ್ರತಿನಿತ್ಯ ಮಳವಳ್ಳಿ ತಾಲೂಕಿನ ಸುತ್ತಮುತ್ತಿನ ಗ್ರಾಮಗಳಿಂದ ಮಳವಳ್ಳಿ ಪಟ್ಟಣದ ಬಿಎಸ್ಎನ್ಎಲ್ ಕಚೇರಿಗೆ ಆದರ್ ತಿದ್ದುಪಡಿಗಾಗಿ ಇಡೀ ರಾತ್ರಿಯೆಲ್ಲ ಸುಮಾರು ಮೂರರಿಂದ ನಾಲ್ಕು ಗಂಟೆ ವೇಳೆಗೆ ಬಂದು ಬೆಳಗಿನ ಜಾವ 9:30ವರೆಗೆ ಟೋಕನ್ ಕೊಡುವವರೆಗೆ ಪ್ರತಿನಿತ್ಯ ಅರವತ್ತು 60ಟೋಕನ್ಗಳನ್ನು ನೀಡುತ್ತಿದ್ದು.
ಆ ದಿನದಲ್ಲಿ ಸರ್ವರ್ ಇಲ್ಲದೆ ಎಷ್ಟು ತಿದ್ದುಪಡಿಯಾಗಿದ್ದವೋ ಅಷ್ಟಕ್ಕೆ ಮಾತ್ರ ಸೀಮಿತವಾಗಿರುತ್ತದೆ ಮಹಿಳೆಯರು ಮಕ್ಕಳು ವೃದ್ಧರು ಅನಾರೋಗ್ಯ ಪೀಡಿತರು ಸೇರಿದಂತೆ ಆಧಾರ್ ಕಾರ್ಡ್ ತಿದ್ದುಪಡಿಗಾಗಿ ಕಾದು ಕೂರಬೇಕಾದ ಸ್ಥಿತಿ ನಿರ್ಮಾಣವಾಗಿದೆ ಪ್ರತಿನಿತ್ಯ ಗ್ರಾಮಗಳಿಂದ ಬಂದಂತಹ ಜನರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ವಾರಗಟ್ಟಲೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ ಮಕ್ಕಳು ಶಾಲೆಗೆ ಹೋಗುವುದನ್ನು ಬಿಟ್ಟು ಅವುಗಳು ಕೂಡ ಕಾಯಬೇಕಾಗಿದೆ ತಮ್ಮ ಅರೋಗ್ಯವನ್ನು ಲೆಕ್ಕಿಸದೆ ತಾವು ಕೂಡ ಕಾದು ಕುಳಿತಿರಬೇಕಾದ ಘಟನೆ ಸಂಭವಿಸುತ್ತಿದೆ.
ತಮ್ಮ ಊಟ ತಿಂಡಿಗಳನ್ನು ಬಿಟ್ಟು ಆರೋಗ್ಯದ ಸಮಸ್ಯೆಗಳನ್ನು ಬಿಟ್ಟು ಕಾದು ಕುಳಿತಿರಬೇಕಾಗಿದೆ ಸರ್ಕಾರಗಳು ನೀಡಿರುವ ದಿನಾಂಕಗಳ ಬಗ್ಗೆ ಗಾಬರಿಗೊಂಡು ಸಾರ್ವಜನಿಕರು ಕಾದು ಕುಳಿತು ಟೋಕನಿಸಿಕೊಂಡು ತಿದ್ದುಪಡಿಗೋಸ್ಕರ ವಾರಗಟ್ಟಲೆ ಕಾಯಬೇಕಾಗಿರುವ ಘಟನೆ ನಿರ್ಮಾಣವಾಗಿದೆ ಸರ್ಕಾರಗಳು ಪ್ರಜಾ ಸೇವೆ ಪ್ರಜಾ ಸರ್ಕಾರ ನಾವು ಎಂದು ಬೊಬ್ಬೆ ಹೊಡೆದುಕೊಳ್ಳುತ್ತಿದೆ ಹಾಗೆಯೇ ಮಳವಳ್ಳಿಯ ತಾಸಿಲ್ದಾರವರು ಕೂಡನಿಮ್ಮ ಮನೆ ಬಾಗಿಲಿಗೆ ಎಲ್ಲ ರೀತಿಯ ಸೇವೆಗಳನ್ನು ಒದಗಿಸುತ್ತೇವೆ ಎಂದು ಬರಿ ಭಾಷಣವಾಗುತ್ತಿದೆ ಆದರೆ ಇಲ್ಲಿನ ಪರಿಸ್ಥಿತಿ ನೋಡಿದರೆ ಕಂಣ್ಣಿದ್ದರು ಕುರುಡಾದಂತಿದೆ ಇದನ್ನ ಗಮನಿಸಿದ ಸಂಜೆವಾಣಿಯ ಪ್ರತಿನಿಧಿ ನಾಗರಾಜು ರವರು ಸಾರ್ವಜನಿಕರ ಬಳಿ ವಿಚಾರಿಸಿದಾಗ ತಮ್ಮ ಅಳಲನ್ನು ತಮ್ಮ ನೋವನ್ನು ಹೇಳಿಕೊಂಡು ತೋಡಿಕೊಂಡಿದ್ದಾರೆ ಎಷ್ಟೋ ಮಂದಿ ಇಡೀ ರಾತ್ರಿ ಎಲ್ಲಾ ಇಲ್ಲೇ ಕಾಯುವ ವಿಷಯವನ್ನು ಕೂಡ ಹಂಚಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಸಾರ್ವಜನಿಕರು ಈ ಒಂದು ತಿದ್ದುಪಡಿ ಕಾರ್ಯವನ್ನು ಆಯ ಗ್ರಾಮ ಪಂಚಾಯತಿಯ ಮಟ್ಟದಲ್ಲಿ ಮಾಡಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಅಳಲು ತೋರಿಸಿಕೊಂಡರು ಸುತ್ತಮುತ್ತಲ ಗ್ರಾಮಗಳಿಂದ ಬಂದು ಕಾಯುವುದರ ಬದಲು ನಮ್ಮ ಗ್ರಾಮ ಪಂಚಾಯತಿಗಳ ಬಳಿಯೇ ಆಧಾರತಿದ್ದುಪಡಿ ಕಾರ್ಯವನ್ನು ಮಾಡಿಕೊಟ್ಟರೆ ನಾವು ಸರಿಪಡಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.
ಇನ್ನಾದರೂ ಇದರ ಬಗ್ಗೆ ತಾಲೂಕು ದಂಡಾಧಿಕಾರಿಗಳು ತಹಸಿಲ್ದರವರು ಗಮನ ಹರಿಸಬೇಕೆಂದು ಒತ್ತಾಯಿಸಿ ನಮ್ಮ ಗ್ರಾಮ ಪಂಚಾಯತಿಗಳಲ್ಲಿ ತಿದ್ದುಪಡಿ ಕಾರ್ಯವನ್ನು ಆರಂಭಿಸಬೇಕೆಂದು ಆಗ್ರಹ ಪಡಿಸಿದರು ಇದೇ ಸಂದರ್ಭದಲ್ಲಿ ಆದ್ದರಿಂದ ಮಹಿಳಾ ಜನವಾದಿ ಮಹಿಳಾ ಸಂಘಟನೆಯ ಸುಶೀಲರವರು ಮಾತನಾಡಿ ಒಂದು ಆಧಾರ್ ಕಾರ್ಡ್ ತಿದ್ದುಪಡಿ ಮಾಡಬೇಕಾದರೆ ಸುಮಾರು 250 ರೂಪಾಯಿಗಳಷ್ಟು ಕಚ್ಚಾಗುತ್ತಿದೆ ಜೊತೆಗೆ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಮಳವಳ್ಳಿಪಟ್ಟಣಕ್ಕೆ ಬಂದು ಅಲೆಯಬೇಕಾಗಿದೆ ಆದ್ದರಿಂದ ಕೂಡಲೇ ಸಂಬಂಧಪಟ್ಟ ತಾಲೂಕು ದಂಡಾಧಿಕಾರಿಗಳು ಗ್ರಾಮ ಪಂಚಾಯತಿ ಮಟ್ಟದಲ್ಲಿ ಆದ ತಿದ್ದುಪಡಿ ಮಾಡುವಂತೆ ಕಾರ್ಯಗತಗೊಳಿಸಬೇಕೆಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು ಇಂತಹ ಕಾರ್ಯವನ್ನು ಸರಿಪಡಿಸದಿದ್ದರೆ ದಿನಾಂಕ 28ನ ತಾರೀಖಿನಂದು ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು ಒತ್ತಾಯಿಸಿದರು.
























