
ಸಂಜೆವಾಣಿ ವಾರ್ತೆ
ಹನೂರು.ಸೆ.23 :- ತಾಲೂಕಿನ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು 34 ದಿನಗಳ ಅವಧಿಯಲ್ಲಿ ಸುಮಾರು 2 ಕೋಟಿ, 21 ಲಕ್ಷ , 65 ಸಾವಿರ ರೂ. ಸಂಗ್ರಹವಾಗಿದೆ.
ದಿನಾಂಕ :- 22-09-2026 ರಂದು ಬೆಳಿಗ್ಗೆ 7-00 ಗಂಟೆಯಿಂದ ಸಾಲೂರು ಬೃಹನ್ಮಠದ ಪೀಠಾಧ್ಯಕ್ಷರಾದ ಡಾ. ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ, ಪ್ರಾಧಿಕಾರದ ಕಾರ್ಯದರ್ಶಿ ಜಿ. ಪುರುಷೋತ್ತಮ್ ಅವರ ನೇತೃತ್ವದಲ್ಲಿ ಹುಂಡಿ ಎಣಿಕೆ ಕಾರ್ಯ ಕೈಗೊಳ್ಳಲಾಯಿತು.
ದಿನಾಂಕ 19-08-2026 ರಿಂದ 21-09-2026 ರವರೆಗೆ ಒಟ್ಟು 34 ದಿನಗಳ ಅವಧಿಯಲ್ಲಿ ಭಕ್ತರು ಕಾಣಿಕೆಯಾಗಿ ಅರ್ಪಿಸಿದ್ದಾರೆ. ಎಣಿಕೆಯಲ್ಲಿ ಒಟ್ಟು ರೂ. 2,21,65,915/- (ಇ-ಹುಂಡಿ ಸೇರಿ), ಚಿನ್ನ 68 ಗ್ರಾಂ 500 ಮಿಲಿ ಗ್ರಾಂ. ಮತ್ತು ಬೆಳ್ಳಿ 1 ಕೆ.ಜಿ 913 ಗ್ರಾಂ ಸಂಗ್ರಹವಾಗಿದೆ. ಜೊತೆಗೆ ವಿದೇಶಿ ನೋಟುಗಳು 21, ಚಲಾವಣೆಯಾಗದ 2 ಸಾವಿರ ಮುಖಬೆಲೆಯ 2 ನೋಟುಗಳು ಸಹ ಹುಂಡಿಯಲ್ಲಿ ದೊರೆತಿದೆ.
ಈ ಎಣಿಕೆ ಕಾರ್ಯದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಪುರುಷೋತ್ತಮ್, ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರುಗಳಾದ ಮರಿಸ್ವಾಮಿ ಕಾಗಲವಾಡಿ, ಗಂಗನ ತಿಮ್ಮಯ್ಯ ಮೆಲ್ಲಹಳ್ಳಿ, ಮಹದೇವಪ್ಪ ಕೀಳನಪುರ, ಭಾಗ್ಯಮ್ಮ ಕುಪ್ಯಾ, ಕುಮಾರ್, ವಿಜಯ್ ರಾವಂದೂರು, ಹಣಕಾಸು ಲೆಕ್ಕಪತ್ರ ಸಲಹೆಗಾರ ಮಹದೇವ ಸಿ, ಉಪಕಾರ್ಯದರ್ಶಿ ಜಿ.ಎಲ್ ಚಂದ್ರಶೇಖರ್,
ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿಯ ವಿಷಯ ನಿರ್ವಾಹಕರು ಕಲ್ಯಾಣಮ್ಮ, ಬ್ಯಾಂಕ್ ಆಫ್ ಬರೋಡ ಕೊಳ್ಳೇಗಾಲ ಶಾಖೆಯ ವ್ಯವಸ್ಥಾಪಕ ರವಿಶಂಕರ್ ಮತ್ತು ಸಿಬ್ಬಂದಿ ವರ್ಗ, ಮಹದೇಶ್ವರ ಬೆಟ್ಟ ಪೆÇಲೀಸ್ ಠಾಣೆ ಸಿಬ್ಬಂದಿ, ಪ್ರಾಧಿಕಾರದ ಸಿಬ್ಬಂದಿಗಳಾದ ಇಂದ್ರೇಶ್, ಸರಗೂರು ಮಹದೇವಸ್ವಾಮಿ, ಜನಾರ್ಧನ್, ವೆಂಕಟಾಚಾರಿ, ಧನಕೋಟಿ, ಮಾಧರಾಜ್ ಅರಸು, ಪಾರುಪತ್ತೆದಾರ್ ಮಾದೇಶ್, ಸೆಕ್ಯುರಿಟಿ ಸೂಪರ್ ವೈಸರ್ ಮಾದೇಶ್, ಸಿದ್ದಲಿಂಗ ಹಾಗೂ ಪ್ರಾಧಿಕಾರದ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು.
























