
ಕಲಬುರಗಿ: ಜೋಕುಮಾರಸ್ವಾಮಿಯ ಆಚರಣೆಗಾಗಿ ಪ್ರತಿ ಗ್ರಾಮಕ್ಕೆ 51 ಸಾವಿರ ಗೌರವಧನ ನೀಡುವದು ಹಾಗೂ ಆಚರಣೆ ಮಾಡುವ ಸಮುದಾಯದ ಮಹಿಳೆಯರಿಗೆ ಮಾಸಿಕ ಸಂಭಾವನೆ ನೀಡುವಂತೆ ಆಗ್ರಹಿಸಿ ಬುಡಕಟ್ಟು ಸಮುದಾಯಗಳ ಸಾಂಸ್ಕøತಿಕ ಸಾಹಿತ್ಯ ಪರಿಷತ್ ವತಿಯಿಂದ ಜೋಕುಮಾರನಬುಟ್ಟಿ ಸಮೇತ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಪರಿಷತ್ ಪ್ರಧಾನ ಕಾರ್ಯದರ್ಶಿ ಡಾ.ಟಿ.ಡಿ ರಾಜ್ ಸೇರಿದಂತೆ ಹಲವರಿದ್ದರು.





















