
ಸತ್ತೂರು,ಆ೧: ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ, ವನಸಿರಿ ನಗರದಲ್ಲಿರುವ ಶ್ರೀನಿವಾಸ ಪಟ್ಟಣಕೊಡಿ ಅವರ ನಿವಾಸದಲ್ಲಿ ಬರುವ ಭಾನುವಾರದಂದು ದಿನಾಂಕ ೨-೮-೨೦೨೬ ರಂದು ಬೆಳಿಗ್ಗೆ ೮:೧೫ ಕ್ಕೆ ಯತಿಕುಲತಿಲಕ ಶ್ರೀಮದ ಜಯತೀರ್ಥರ (ಟೀಕಾಚಾರ್ಯರ) ಆರಾಧನೆ ನಿಮಿತ್ತ “ಸಾಹಿತ್ಯ ಕ್ಷೇತ್ರದಲ್ಲಿ ಶ್ರೀ ಜಯತೀರ್ಥರ ಕೊಡುಗೆ” ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಪಂ. ಭೀಮಸೇನಾಚಾರ್ಯ ಮಳಗಿಯವರು ಆಗಮಿಸಲಿದ್ದಾರೆ.
ಕಾರ್ಯಕ್ರಮದ ಪೂರ್ವದಲ್ಲಿ ಬಳಗದ ಸದಸ್ಯರಿಂದ ಬೆಳಿಗ್ಗೆ ೭-೧೫ ರಿಂದ ಶ್ರೀ ಹರಿ ವಾಯು ಗುರುಗಳ ಸ್ತೋತ್ರಗಳ ಪಾರಾಯಣ ಜರುಗಲಿದೆ ಎಂದು ಬಳಗದ ಕಾರ್ಯದರ್ಶಿ ಶ್ರೀ ರಘೋತ್ತಮ ಅವಧಾನಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ ೬೩ ೬೧ ೮೩ ೫೭ ೧೦ ನ್ನು ಸಂಪರ್ಕಿಸಲು ಕೋರಲಾಗಿದೆ.






























