
ಗದಗ,ನ೧: ಪಾರ್ಶ್ವವಾಯು ಒಂದು ಗಂಭೀರ ಆರೋಗ್ಯ ಸಮಸ್ಯೆಯಾಗಿದ್ದು ಇದರ ಲಕ್ಷಣಗಳನ್ನು ಆರಂಭದಲ್ಲಿಯೆ ಗುರುತಿಸಿ ನಿಗದಿತ ಸಮಯದಲ್ಲಿ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಅತ್ಯಂತ ಮುಖ್ಯವಾಗಿದೆ ಎಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಹಾಗೂ ಕಭಿ ಕಾರ್ಯಕ್ರಮದ ನೊಡಲ್ ಅಧಿಕಾರಿಗಳು ಡಾ. ಜಿ.ಎಸ್.ಪಲ್ಲೇದ ಹೇಳಿದರು.
ಗದಗದ ಕೆ.ಹೆಚ್. ಪಾಟೀಲ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಂಭಾಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಇವರುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಸ್ಟೊçÃಕ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಸಾಮಾನ್ಯವಾಗಿ ವಯಸ್ಸಾದವರಲ್ಲಿ ಕಾಣಿಸಿಕೊಳ್ಳುತ್ತಿದ್ದ ಸ್ಟೊçÃಕ ಇತ್ತೀಚಿನ ದಿನಗಳಲ್ಲಿ ಯುವಪೀಳಿಗೆಯಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ಜಾಗತಿಕವಾಗಿ ಅತಿ ಹೆಚ್ಚು ಸಾವುಗಳು ಸಂಭವಿಸುತ್ತಿರುವ ಕಾಯಿಲೆಗಳ ಪಟ್ಟಿಯಲ್ಲಿ ಹೃದಯಾಘಾತದ ನಂತರ ಸ್ಟೊçÃಕ ೨ನೇ ಸ್ಥಾನದಲ್ಲಿದೆ ಯಾವುದೇ ಕಾರಣಗಳಿಂದ ಮೆದುಳಿಗೆ ರಕ್ತ ಸರಬರಾಜು ಕೆಲವೇ ನಿಮಿಷಗಳವರೆಗೆ ನಿಂತರೂ ಮೆದುಳಿನ ನರಕೋಶಗಳು ನಿರ್ಜೀವಗೊಳ್ಳುತ್ತವೆ ಮೆದುಳಿನ ಪ್ರತಿಯೊಂದು ನರಕೋಶಗಳ ಸಮೂಹವು ದೇಹದ ವಿವಿಧ ಅಂಗಗಳ ಮೇಲೆ ಹಿಡಿತ ಹೊಂದಿರುತ್ತದೆ ಮುಖ್ಯವಾಗಿ ದೇಹ ಸಮತೋಲನ ತಪ್ಪುವುದು, ಮುಖ ಒಂದು ಕಡೆ ವಾಲುವುದು, ತೊದಲಿನ ಮಾತು, ಆಹಾರ ನುಂಗಲು ಕಷ್ಟವಾಗುವುದು, ಕೈ ಕಾಲುಗಳು ಮರಗಟ್ಟಿದಂತಾಗುವುದು ಪ್ರಮುಖ ಲಕ್ಷಣಗಳಾಗಿವೆ ಎಂದರು ಆದ್ದರಿಂದ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಸ್ಟೊçÃಕ ಅಪಾಯವನ್ನು ಬಹುಮಟ್ಟಿಗೆ ತಡೆಗಟ್ಟಬಹುದಾಗಿದೆ ಎಂದರು.
ನAತರ ಜಿಲ್ಲಾ ಶಸ್ತçಚಿಕಿತ್ಸಕ ಡಾ. ಬಿ.ಸಿ ಕರಿಗೌಡ್ರ ಸ್ಟೊçÃಕ ಲಕ್ಷಣಗಳು ಮತ್ತು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವ ಮಹತ್ವದ ಕುರಿತು ತಿಳಿಸಿದರು.
ವೈದ್ಯಕೀಯ ವಿಜ್ಞಾನ ಸಂಸ್ಥೆಯ ಜನರಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ. ಸಂಗಮೇಶ ಅಸೂಟಿ ಮಾತನಾಡಿ ಸ್ಟೊçÃಕ ಕಾಯಿಲೆ ಬಾರದಂತೆ ಮಾಡುವ ವಿಧಾನಗಳ ಬಗ್ಗೆ ತಿಳಿಸಿ ಹೇಳಿದರು ಮುಖ್ಯವಾಗಿ ರಕ್ತದÀ ಒತ್ತಡ ಮತ್ತು ಮಧುಮೇಹ ರೋಗಗಳ ಹತೋಟಿ ಬಗ್ಗೆ ಮತ್ತು ಮೆದುಳಿಗೆ ರಕ್ತದ ಹರಿವು ಅಡ್ಡಿ ಆಗುವದರಿಂದ ಅಥವಾ ಮೆದುಳಿನ ರಕ್ತನಾಳ ಒಡೆಯುವದರಿಂದ ಸ್ಟೊçÃಕ ಸಂಭವಿಸುತ್ತದೆ. ಆರಂಭಿಕ ಲಕ್ಷಣಗಳು ಕಂಡು ಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡಿಯಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ ಹಾಗೂ ಕಭೀ ಕಾರ್ಯಕ್ರಮದ ಜಿಲ್ಲಾ ಸಂಯೋಜಕ ಪ್ರವೀಣ ರೋಣದ ಮಾತನಾಡಿದರು.
ಇದೇ ವೇಳೆ ಸ್ಟೊçÃಕ ಬಗ್ಗೆ ಜಾಗೃತಿ ಮೂಡಿಸಲು ಹೊರತಂದಿರುವ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು.
ಸದರಿ ಕಾರ್ಯಕ್ರಮದಲ್ಲಿ ವೈದ್ಯಕೀಯ ಅಧಿಕ್ಷಕ ಡಾ. ವಿನಾಯಕ ಪಂಚಗಾರ, ಎಲುಬು ಕೀಲು ವಿಭಾಗದ ಮುಖ್ಯಸ್ಥರಾದ ಡಾ. ಮಹಾಂತೇಶ ಪಾಟೀಲ, ಪಲ್ಮನರಿ ವಿಭಾಗದ ಡಾ. ಇರ್ಫಾನ, ಜನರಲ್ ಮೆಡಿಸಿನ ವಿಭಾಗದ ನಿರೋಫಿಜಿಷಿಯನ ಡಾ.ವಿನಯಕುಮಾರ ಎಸ್ ಎಮ್, ಕಾರ್ಯಕ್ರಮ ಸಂಯೋಜಕ ವಿಶ್ವನಾಥ, ಜಿಲ್ಲಾ ಆಸ್ಪತ್ರೆ ಮತ್ತು ಕಭೀ ಕಾರ್ಯಕ್ರಮದ ಸಿಬ್ಬಂದಿಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿ/ ಸಿಬ್ಬಂಧಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ನರ್ಸಿಂಗ ವಿದ್ಯಾರ್ಥಿನಿ ಯಲ್ಲಮ್ಮ ಪ್ರಾಥಿಸಿದರು. ಫಿಜಿಯೋಥೆರೆಪಿಸ್ಟ್ ಡಾ. ಅಶ್ವಿನಿ ಕುರಿಯವರ ಸ್ವಾಗತಿಸಿದರು. ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸಹದೇವಪ್ಪ ಹನಕನಹಳ್ಳಿ ವಂದಿಸಿದರು.























