
ಕಲಬುರ್ಗಿ, ಸೆ ,12:ಚಿತ್ತಾಪುರ ತಾಲೂಕಿನ ಸನ್ನತಿಯಲ್ಲಿ ಶ್ರೀ ಗುರು ಸೋಮೇಶ್ವರ ವೇದ ಸಂಸ್ಕೃತ ಪಾಠಶಾಲೆ, ಸನ್ನತಿ, ತಾ. ಚಿತ್ತಾಪುರ, ಜಿ. ಕಲಬುರಗಿ ಇವರ ವತಿಯಿಂದ ಹಾಗೂ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಬೆಂಗಳೂರು ಹಾಗೂ ಶ್ರೀ ಗುರು ಸೋಮೇಶ್ವರ ಜ್ಯೋತಿ ಸಂಸ್ಥೆ (ರಿ), ಯಾದಗಿರಿ ಇವರ ಸಹಯೋಗದಲ್ಲಿ ವಿಶ್ವ ಸಂಸ್ಕೃತ ದಿನಾಚರಣೆಯ ಪ್ರಯುಕ್ತ ಸಂಸ್ಕೃತ ಜಾಗೃತಿ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.ಕಾರ್ಯಕ್ರಮವನ್ನು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಲಾಯಿತು. ವಿದ್ಯಾರ್ಥಿಗಳಿಂದ ವೇದ ಮಂತ್ರ ಪಠಣ, ಸಂಸ್ಕೃತ ಶ್ಲೋಕ ಪಠಣ ನಡೆಯಿತು.ಈ ಸಂದರ್ಭದಲ್ಲಿ ಮಾತನಾಡಿದ ಜಗದೀಶ್ವರಯ್ಯ ಶಾಸ್ತ್ರಿಗಳು , “ಸಂಸ್ಕೃತ ಕೇವಲ ಭಾಷೆಯಲ್ಲ, ಅದು ನಮ್ಮ ಸಂಸ್ಕೃತಿ. ಪ್ರಪಂಚದ ಎಲ್ಲ ಭಾಷೆಗಳ ಮೂಲ ಸಂಸ್ಕೃತದಲ್ಲಿದೆ. ಇಂದಿನ ಯುವಕರು ಸಂಸ್ಕೃತ ಕಲಿಯುವ ಮೂಲಕ ನಮ್ಮ ವೇದ, ಪುರಾಣ ಮತ್ತು ಆಯುರ್ವೇದ ಜ್ಞಾನವನ್ನು ಉಳಿಸಬೇಕು. ಸಂಸ್ಕೃತ ಪಾಠಶಾಲೆಗಳಿಗೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಹೆಚ್ಚಿನ ಪೆÇ್ರೀತ್ಸಾಹ ನೀಡುತ್ತಿದೆ” ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಗ್ರಾಮದ ಗಂಗಾಧರಯ್ಯ ಸ್ವಾಮಿ, ಪಂಚಾಕ್ಷರಿ ಗುಡಿ,ರುದ್ರಯ್ಯ ಮಠಪತಿ ಹಿರಿಯರು, ಪೆÇೀಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.






























