Home ಜಿಲ್ಲೆ ಕಲಬುರಗಿ ವಿದ್ಯಾರ್ಥಿಗಳು ನಾವೀನ್ಯತೆಯ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು: ಬಟ್ಟು ಸತ್ಯನಾರಾಯಣ

ವಿದ್ಯಾರ್ಥಿಗಳು ನಾವೀನ್ಯತೆಯ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು: ಬಟ್ಟು ಸತ್ಯನಾರಾಯಣ

ಕಲಬುರಗಿ,ಸೆ.12: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ) ದ ಕಂಪ್ಯೂಟರ್ ವಿಜ್ಞಾನಇಂಜನೀಯರಿಂಗ್ ವಿಭಾಗದ ವತಿಯಿಂದ ಐಇಇಇ ಕಂಪ್ಯೂಟರ್ ಸೊಸೈಟಿ ವಿದ್ಯಾರ್ಥಿ ಘಟಕಉದ್ಘಾಟನೆ ಮತ್ತು ಐಇಇಇ ಕಂಪ್ಯೂಟರ್ ಸೊಸೈಟಿಯ 80ನೇ ವಾರ್ಷಿಕೋತ್ಸವದ ಆಚರಣೆಕಾರ್ಯಕ್ರಮ ನಡೆಯಿತು.
ನೂತನ ವಿದ್ಯಾರ್ಥಿ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಕುಲಪತಿ ಪ್ರೊ.ಬಟ್ಟುಸತ್ಯನಾರಾಯಣ ಅವರು ವಿದ್ಯಾರ್ಥಿಗಳು ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ತಕ್ಕಂತೆತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ಅಭಿವೃದ್ಧಿಪಡಿಸಿಕೊಳ್ಳುವುದರಜೊತೆಗೆ ನಾವೀನ್ಯತೆ ಹಾಗೂ ಉದಯೋನ್ಮುಖ ತಂತ್ರಜ್ಞಾನಗಳನ್ನು
ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ನಿನ್ನೆಯ ತಂತ್ರಜ್ಞಾನವು ನಾಳೆಗೆ ಸಾಕಾಗುವುದಿಲ್ಲ ಎಂದು ಹೇಳಿದಕುಲಪತಿಗಳು, ವಿದ್ಯಾರ್ಥಿಗಳು ಸಾಂಪ್ರದಾಯಿಕ ಚಿಂತನೆಯಿಂದ ಹೊರಬಂದು ಹೊಸ ಹೊಸಆಲೋಚನೆಗಳು ಮತ್ತು ತಂತ್ರಜ್ಞಾನಗಳತ್ತ ಗಮನ ಹರಿಸಬೇಕು ಎಂದರು.ನವೀನ ಆಲೋಚನೆಗಳನ್ನು ಅಭಿವೃದ್ಧಿಪಡಿಸಿ ಅವುಗಳನ್ನು ನವೋದ್ಯಮಗಳಾಗಿರೂಪಿಸುವ ಮೂಲಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಹಾಗೂ ಸಮಾಜ ಮತ್ತುರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡುವಂತೆ ವಿದ್ಯಾರ್ಥಿಗಳಿಗೆ ಕರೆ ಸಲಹೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಹಾಗೂ ಐಇಇಇ ಕಂಪ್ಯೂಟರ್ ಸೊಸೈಟಿ,ಬೆಂಗಳೂರು ವಿಭಾಗದ ಎಕ್ಸಕಾಂ ಸದಸ್ಯ ಡಾ. ಸುನಿಲ್ ಸಿ. ಕೆ. ಮಾತನಾಡಿ, ಐಇಇಇ ವಿದ್ಯಾರ್ಥಿಗಳುಮತ್ತು ತಂತ್ರಜ್ಞಾನ ಕ್ಷೇತ್ರದ ವೃತ್ತಿಪರರನ್ನು ಸಂಪರ್ಕಿಸುವ ಜಾಗತಿಕವೇದಿಕೆಯಾಗಿದ್ದು, ವಿವಿಧ ಕ್ಷೇತ್ರಗಳ ನಡುವಿನ ಸಹಯೋಗ, ಜ್ಞಾನ ವಿನಿಮಯ
ಮತ್ತು ನಾವೀನ್ಯತೆಗೆ ಉತ್ತೇಜನ ನೀಡುತ್ತಿದೆ ಎಂದರು.
ಸಿಯುಕೆ ಕಂಪ್ಯೂಟರ್ ವಿಜ್ಞಾನ ನಿಕಾಯದ ಡೀನ್ ಪೆÇ್ರ. ಆರ್.ಎಸ್.ಹೆಗಡಿ ಅವರು ವಿದ್ಯಾರ್ಥಿಗಳಲ್ಲಿತಾಂತ್ರಿಕ ಜ್ಞಾನ, ಸೃಜನಶೀಲತೆ, ನಾವೀನ್ಯತೆ ಹಾಗೂ ವೃತ್ತಿಪರ ಕೌಶಲ್ಯಗಳನ್ನುಬೆಳೆಸುವಲ್ಲಿ ವಿದ್ಯಾರ್ಥಿ ಘಟಕದ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಶೇಷ ಭಾಷಣಕಾರರಾಗಿ ಯುಎಕ್ಸ್ ವಿನ್ಯಾಸದ ಹಿರಿಯ ಸಹವರ್ತಿ ಅಂಜಲಿ ರೆಡ್ಡಿ ಹಾಗೂ ಯುಎಕ್ಸ್ ವಿಷಯ ವಿನ್ಯಾಸದ ಹಿರಿಯ ಸಹವರ್ತಿ ದೇವದರ್ಶಿನಿ, ಕಂಪ್ಯೂಟರ್ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ನಾಗರಾಜ್ ವಿ. ಧಾರವಾಡಕರ, ಐಇಇಇ ಕಂಪ್ಯೂಟರ್ ಸೊಸೈಟಿ ಸಲಹೆಗಾರ ಮತ್ತು ಪ್ರಾಧ್ಯಾಪಕ ಡಾ. ರಾಕೇಶ್ ಕುಮಾರ್ ಗೋದಿ,ಪ್ರಾಧ್ಯಾಪಕರಾದ ಪೆÇ್ರ. ವೆಂಕಟ ರಮಣ ದೊಡ್ಡಿ, ಡಾ. ಪಿ. ಎಂ. ಕಾಂಬಳೆ, ಪೆÇ್ರ. ಪ್ರಮೋದ್‍ಕುಮಾರ್, ಡಾ. ಪರಮೇಶ್ ಎಸ್. ಪಿ., ಡಾ. ಎನ್. ಸಂದೀಪ್, ಡಾ. ನೃಸಿಂಹ ಚರಣ್ ಪ್ರಧಾನ್ ಹಾಗೂ ಡಾ.ರೋಹಿತ್ ಕುಮಾರ್ ಸೇರಿದಂತೆ ವಿವಿಧ ವಿಭಾಗಗಳ ಪ್ರಾಧ್ಯಾಪಕರು. ವಿದ್ಯಾರ್ಥಿಗಳು
ಉಪಸ್ಥಿತರಿದ್ದರು.ಕಾರ್ಯಕ್ರಮವು ‘ವಂದೇ ಮಾತರಂ’ದೊಂದಿಗೆ ಪ್ರಾರಂಭವಾಗಿ, ರಾಷ್ಟ್ರಗೀತೆಯೊಂದಿಗೆ ಸಮಾಪ್ತಿಯಾಯಿತು.