Home ಜಿಲ್ಲೆ ಕಲಬುರಗಿ ಜಗದಂಬಾ ಮಂದಿರದಲ್ಲಿ ಶ್ರಾವಣ ಹೋಮಹವನದ ಪೂರ್ಣಾಹುತಿ

ಜಗದಂಬಾ ಮಂದಿರದಲ್ಲಿ ಶ್ರಾವಣ ಹೋಮಹವನದ ಪೂರ್ಣಾಹುತಿ

ಕಲಬುರಗಿ.ಸೆ.12: ನಗರದ ಶಹಾಬಜಾರ್ ಜಗದಂಬಾ ಮಂದಿರದಲ್ಲಿ ಕಲಬುರಗಿಯ ಎಸ್‍ಎಸ್‍ಕೆ ಸಮಾಜದ ವತಿಯಿಂದ ಶ್ರಾವಣ ಮಾಸದಲ್ಲಿ ಪ್ರತಿದಿನ ಹೋಮಹವನ, ಪೂಜಾ ಕಾರ್ಯಕ್ರಮ ಕೈಗೊಳ್ಳಲಾಯಿತು.ಶುಕ್ರವಾರ ( ಸೆ.11 ) ಅಮವಾಸ್ಯೆ ಶ್ರಾವಣಮಾಸದ ಕೊನೆಯ ದಿನದಂದು ಪೂರ್ಣಾಹುತಿ ನೆರವೇರಿಸಲಾಯಿತು.
ಪೂರ್ಣಾಹುತಿ ಕಾರ್ಯಕ್ರಮದಲ್ಲಿ ಎಸ್ ಎಸ್ ಕೆ ಸಮಾಜದ ಹಾಗೂ ಇತರೇ ಸಮಾಜದ 120 ದಂಪತಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷರಾದ ಶ್ರೀರಾಮ ಡಿ ಪವಾರ,ಉಪಾಧ್ಯಕ್ಷ ಡಾ.ಯಶವಂತರಾವ ಮೆಂಗಜಿ,ಕಾರ್ಯದರ್ಶಿ ವಿಷ್ಣುಸಾ ಬಾರಾಡ,ಜಂಟಿ ಕಾರ್ಯದರ್ಶಿ ರಮಾಕಾಂತ ಚವ್ಹಾಣ,ಖಜಾಂಚಿ ನಾಗೇಶ ಚುಡಾಮಣಿ ,ನಾಗೇಶ ಶಾಲಗರ ಹಾಗೂ ಕಾರ್ಯಕಾರಣಿ ಸಮಿತಿಯ ಸದಸ್ಯರು, ಮಹಿಳಾಮಂಡಳದ, ಯುವಕ ಮಂಡಳದ ಪದಾಧಿಕಾರಿಗಳು, ಸದಸ್ಯರು ಮತ್ತು ಶ್ರಾವಣ ಸಮಿತಿ ಅಧ್ಯಕ್ಷರಾದ ಅಂಬಾದಾಸ ಮಿಸ್ಕಿನ್,ಉಪಾಧ್ಯಕ್ಷ ನರಸಿಂಗ ಪವಾರ,ಕಾರ್ಯದರ್ಶಿ ನರಸಿಂಗ ಮೆಂಗಜಿ,ಸಹ ಕಾರ್ಯದರ್ಶಿ ಕಿಶೋರ ಆರಾಧಿ,ಖಜಾಂಚಿ ಅಮರನಾಥ ಗಾಂಗಜಿ.ಸದಸ್ಯರಾದ ನಾಗೇಂದ್ರ ಆರಾಧಿ ಅವರು ಸೇರಿದಂತೆ ಹಲವರು ಉಪಸ್ಥಿತರಿದ್ದರು ಎಂದು ಪುರೋಹಿತರಾದ ರವೀಂದ್ರ ಮೆಂಗಜಿ,ಸಹ ಪುರೋಹಿತ ಶುಭಂ ಮೆಂಗಜಿ ಅವರು ತಿಳಿಸಿದ್ದಾರೆ.