
ಗದಗ,ನ೧: ಗದಗ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ದಲ್ಲಿ ಶುಕ್ರವಾರ ವಸತಿ ನಿಲಯಗಳು ಮತ್ತು ವಸತಿ ಶಾಲೆಗಳ ನಿಲಯಪಾಲಕರು ಹಾಗೂ ಹೊರಸಂಪನ್ಮೂಲ ಸಿಬ್ಬಂದಿಗಳಿಗೆ ಮಾನಸಿಕ ಆರೋಗ್ಯ, ಮಾದಕ ದ್ರವ್ಯ, ದುಶ್ಚಟಗಳ ತಡೆಗಟ್ಟುವಿಕೆ, ಅಗ್ನಿಸುರಕ್ಷತೆ ಜಾಗೃತಿ ಹಾಗೂ ವಸತಿ ನಿಲಯಗಳ ನಿರ್ವಹಣೆ ಕುರಿತು ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.
ಅಪರ ಜಿಲ್ಲಾಧಿಕಾರಿ ಡಾ. ದುರಗೇಶ ಕೆ.ಆರ್ ಅವರು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ ಕಾರ್ಯಾಗಾರಕ್ಕೆ ಆಗಮಿಸಿದ ಸಿಬ್ಬಂದಿಗಳಿಗೆ ಕಾರ್ಯಾಗಾರದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಡಾ. ನಂದಾ ಹಣಬರಟ್ಟಿ ಮಾತನಾಡಿ ಕಾರ್ಯಾಗಾರ ಹಮ್ಮಿಕೊಂಡಿರುವ ಮೂಲ ಉದ್ದೇಶ ವಿದ್ಯಾರ್ಥಿ ನಿಲಯ/ವಸತಿ ಶಾಲೆಗಳಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗದAತೆ ಅಡುಗೆಯವರು, ಅಡುಗೆ ಸಹಾಯಕರು ಹಾಗೂ ನಿಲಯಪಾಲಕರು ಸಮನ್ವಯತೆಯಿಂದ ಕೆಲಸ ನಿರ್ವಹಿಸಬೇಕು ಹಾಗೂ ವಿದ್ಯಾರ್ಥಿಗಳೊಂದಿಗೆ ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು, ವಸತಿ ನಿಲಯದ ನಿಲಯಾರ್ಥಿಗಳಿಗೆ ನಿಲಯಪಾಲಕರು/ಅಡುಗೆ ಸಿಬ್ಬಂದಿಗಳು ಮಾದರಿಯಾಗಬೇಕು. ನಿಲಯಾರ್ಥಿಗಳಿಗೆ ಆರೋಗ್ಯ, ಸ್ವಚ್ಚತೆ, ಮಾದಕ ದ್ರವ್ಯದಿಂದಾಗುವ ದುಸ್ಪರಿಣಾಮ ಕುರಿತು ನಿಲಯದ ಸಿಬ್ಬಂದಿಗಳು ಮಕ್ಕಳಿಗೆ ತಿಳುವಳಿಕೆಯನ್ನು ಕೊಡುವುದು, ಮಕ್ಕಳ ಶೈಕ್ಷಣಿಕ ಪ್ರಗತಿ ಕುರಿತು ಸಲಹೆ ಹಾಗೂ ಸೂಚನೆಗಳನ್ನು ನೀಡಬೇಕು. ನಿಲಯಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಲು ನಿಲಯಪಾಲಕರು ನಿಲಯಗಳಲ್ಲಿ ನಿರ್ವಹಿಸಬೇಕಾದ ದಾಖಲಾತಿಗಳನ್ನು ನಿರ್ವಹಿಸುವುದು ಮುಖ್ಯವಾಗಿರುತ್ತದೆ, ಅದೇ ರೀತಿ ಅಡುಗೆಯವರು ಮಕ್ಕಳಿಗೆ ರುಚಿ ಶುಚಿಯಾದ ಆಹಾರ ತಯಾರಿಸಿ ಬಡಿಸುವುದು ಮತ್ತು ನಿಲಯದ/ವಸತಿ ಶಾಲೆಗಳ ಸಮಗ್ರ ಸ್ವಚ್ಚತೆಗೆ ಗಮನ ಕೊಡಲು ಸೂಚಿಸಿದರು.
ಗದಗ ಗ್ರಾಮೀಣ ಪೋಲೀಸ್ ಠಾಣೆ ಪೋಲೀಸ್ ಇನ್ಸೆ÷್ಪಕ್ಟರ್ ಸಿದ್ದರಾಮೇಶ್ವರ ಗಡೇದ ಅವರು ಮಾತನಾಡಿ ಮಾದಕ ದ್ರವ್ಯಗಳ ಬಗ್ಗೆ ಮಾಹಿತಿಯನ್ನು ಹಾಗೂ ಮಾದಕ ದ್ರವ್ಯಗಳಿಂದಾಗುವ ದುಷ್ಪರಿಣಾಮಗಳ ಕುರಿತು ವಿವರಿಸಿದರು.
ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಿ.ವಾಯ್ ತುರನೂರ ಅವರು ನಿಲಯಗಳಲ್ಲಿ ಅಥವಾ ಮನೆಯಲ್ಲಿ ಅಗ್ನಿ ಅವಗಡ ಸಂಭವಿಸಿದಾಗ ಯಾವ ರೀತಿಯಲ್ಲಿ ಮುನ್ನಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪ್ರಾತಕ್ಷಿತೆಯನ್ನು ಮಾಡಿ ತೋರಿಸಿದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಂದ್ರ ಎಸ್ ಗಡಾದ ಅವರು ಮಾತನಾಡಿ ವಸತಿ ನಿಲಯ ಹಾಗೂ ವಸತಿ ಶಾಲೆಗಳಲ್ಲಿ ಆಹಾರ ಸುರಕ್ಷತೆ ಕುರಿತು ಮಾಹಿತಿಯನ್ನು ನೀಡಿದರು. ಸಹಾಯಕ ನಿರ್ದೇಶಕರುಗಳಾದ ಉದಯಕುಮಾರ ಯಲಿವಾಳ, ಬಸವರಾಜ ಬಡಿಗೇರ ಹಾಗೂ ಗೋಪಾಲ ಲಮಾಣಿ ಅವರು ಮಾತನಾಡಿ ವಸತಿ ನಿಲಯಗಳ/ವಸತಿ ಶಾಲೆಗಳ ನಿರ್ವಹಣೆ ಕುರಿತು ಕಾರ್ಯಾಗಾರದಲ್ಲಿ ಹಾಜರಿದ್ದ ಎಲ್ಲಾ ಸಿಬ್ಬಂದಿಗಳಿಗೆ ಮಾಹಿತಿಯನ್ನು ನೀಡಿದರು.
ಕಾರ್ಯಾಗಾರದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಎಂ.ಎA.ತುAಬರಮಟ್ಟಿ, ಉಪನಿರ್ದೇಶಕರ ಕಛೇರಿಯ ಪತ್ರಾಂಕಿತ ವ್ಯವಸ್ಥಾಪಕರು, ಕ್ರೆöÊಸ್ ವಸತಿ ಶಾಲೆಗಳ ಡಿಸಿಓ- ಅಶೋಕ ಕರಣಿ, ಕ್ರೆöÊಸ್ ವಸತಿ ಶಾಲೆಗಳ ಎಲ್ಲಾ ಪ್ರಾಂಶುಪಾಲರು, ಜಿಲ್ಲೆಯ ಎಲ್ಲಾ ಸಹಾಯಕ ನಿದೇಶಕರು ಹಾಗೂ ನಿಲಯಪಾಲಕರು ಅಡುಗೆಯವರು/ಅಡುಗೆ ಸಹಾಯಕರು ಹಾಜರಿದ್ದರು.























