Home ಕ್ರೈಂ ಸುದ್ದಿಗಳು ಈಜಲು ತೆರಳಿದ್ದ ಯುವಕನಿಗೆ ಬಾವಿಯೇ ಮೃತ್ಯುಕೂಪಬಿ.ಎಲ್.ಡಿ.ಇ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗೆ ದುರಂತ ಅಂತ್ಯ

ಈಜಲು ತೆರಳಿದ್ದ ಯುವಕನಿಗೆ ಬಾವಿಯೇ ಮೃತ್ಯುಕೂಪಬಿ.ಎಲ್.ಡಿ.ಇ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗೆ ದುರಂತ ಅಂತ್ಯ

ಜಮಖಂಡಿ: ಈಜಲು ತೆರಳಿದ್ದ 17 ವರ್ಷದ ಯುವಕನೊಬ್ಬ ಬಾವಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಜಮಖಂಡಿ ನಗರದ ಗ್ರಾಮೀಣ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಜಮಖಂಡಿ ನಗರದ ಹೈದರ ಎಂಬುವರಿಗೆ ಸೇರಿದ ಬಾವಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತ ಯುವಕನನ್ನು ಮುಧೋಳ ತಾಲೂಕಿನ ಮೆಳ್ಳಿಗೇರಿ ಗ್ರಾಮದ ಸುಹಾಸ ಲಕ್ಷ್ಮಣ ಕುಳಲಿ (17) ಎಂದು ಗುರುತಿಸಲಾಗಿದೆ.

ಸುಹಾಸ ಜಮಖಂಡಿಯ ಬಿ.ಎಲ್.ಡಿ.ಇ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. ಕಾಲೇಜಿನ ವಸತಿ ನಿಲಯದಲ್ಲಿ ವಾಸವಾಗಿದ್ದ ಎಂದು ತಿಳಿದುಬಂದಿದೆ.

ಘಟನೆ ತಿಳಿಯುತ್ತಿದ್ದಂತೆ ಗ್ರಾಮೀಣ ಪೆÇಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಶೋಧ ಕಾರ್ಯಾಚರಣೆ ನಡೆಸಿ ಬಾವಿಯಿಂದ ಮೃತದೇಹವನ್ನು ಹೊರತೆಗೆದಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಮಖಂಡಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಗ್ರಾಮೀಣ ಪೆÇಲೀಸ್ ಠಾಣೆಯ ಪಿಎಸ್‍ಐ ಶಿವಾನಂದ ಮನ್ನಿಕೇರಿ, ಎ.ಎಸ್‍ಐ ಕೆ.ಪಿ. ಸವದತ್ತಿ, ಹವಾಲ್ದಾರರಾದ ಆನಂದ ಕುಂಬಾರ, ಬಸವರಾಜ ಜಂಬಗಿ,
ಸಿದ್ದು ಸನಗೌಡರ, ಆನಂದ ಮಾಳಿ,ಎಂ.ಬಿ. ತಮದಡ್ಡಿ ಹಾಗೂ ಅಗ್ನಿಶಾಮಕ ಇಲಾಖೆಯ ಸಹಾಯಕ ಅಗ್ನಿಶಾಮಕ ಅಧಿಕಾರಿ ಎಂ.ಎಸ್. ಹುಗಾರ, ಅಶೋಕ ಹಳೆಗೌಡರ, ಪ್ರಕಾಶ ಆಲಿಶೇಟ್ಟಿ, ಶ್ರೀಧರ ಮಾಳಶೇಟ್ಟಿ, ಎ.ಡಿ. ಮುಲ್ಲಾ, ಸೋಮಶೇಖರ ಕುಂಬಾರ, ಶ್ರೀಶೈಲ ಹಿರೇಮಠ, ಬಿ.ವೈ. ಮೇಳ್ಳಿಗೇರಿ, ಎ.ಆರ್. ಟೋಣಿ ಸೇರಿದಂತೆ ಸಿಬ್ಬಂದಿ ಇದ್ದರು.

ಘಟನೆ ಕುರಿತು ಜಮಖಂಡಿ ಗ್ರಾಮೀಣ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೆÇಲೀಸರು ತನಿಖೆ ಮುಂದುವರಿಸಿದ್ದಾರೆ.