
ಚನ್ನಮ್ಮನ ಕಿತ್ತೂರು,ಜು೩೧: ಸಾರ್ವಜನಿಕರು ಮತದಾನ ಪಟ್ಟಿಯಲ್ಲಿ ತಮ್ಮ ಹೆಸರು ನೋದಾಯಿಸಿಕೊಳ್ಳಬೇಕು. ಮತದಾನ ಮಾಡುವುದು ಪ್ರತಿಯೊಬ್ಬರ ಹಕ್ಕು ಎಂದು ಬಿಜೆಪಿಯ ಮಾಜಿ ಶಾಸಕ ಮಹಂತೇಶ ದೊಡ್ಡ ಗೌಡರ ಹೇಳಿದರು.
ಕ್ಷೇತ್ರದ ಸಂಪಗಾAವ ಜಿಪಂ ಎಸ್‌ಐಆರ್ ಮಹಾಸಂಪರ್ಕ ಅಭಿಯಾನ ಸಂಪಗಾAವ ಮಹಾ ಶಕ್ತಿ ಕೇಂದ್ರ ಪ್ರತಿ ಓಣಿಗಳಲ್ಲಿ ಎಸ್‌ಐಆರ್ ಮಹಾಸಂಪರ್ಕ ಅಭಿಯಾನದ ಹಿನ್ನೆಲೆ ಮನೆ ಮನೆಗೆ ಭೇಟಿ ನೀಡಿ ಮಾತನಾಡಿ ಅರ್ಹ ಮತದಾರರು ಹೊರಗೆ ಉಳಿಯದಂತೆ ಜಾಗೃತಿ ವಹಿಸಿ ತಮ್ಮ ಕರ್ತವ್ಯ ನಿರ್ವಹಿಸಬೇಕೆಂದು ಬಿ ಎಲ್ ಓ ಗಳಿಗೆ ತಿಳಿಹೇಳಿದರು. ಅಭಿಯಾನದಲ್ಲಿ ಬಿಜೆಪಿ ಮಂಡಳ ಅಧ್ಯಕ್ಷ ಶ್ರೀಕರ್ ಕುಲಕರ್ಣಿ, ಉದ್ಯಮಿ ಹಾಗೂ ಸಮಾಜ ಸೇವಕಿ ಬಿಜೆಪಿ ಮುಖಂಡೆ ಲಕ್ಷಿ÷್ಮ ಇನಾಮದಾರ, ಮಾಜಿ ಗ್ರಾಪಂ ಅಧ್ಯಕ್ಷ ಅನಿಲದೇವ್ ನೇಸರಗಿ, ಮಹಿಳೆಯರು, ಬಿಜೆಪಿ ಕಾರ್ಯಕರ್ತರು ಇನ್ನಿತರರಿದ್ದರು.






























