
ಸಂಜೆವಾಣಿ ವಾರ್ತೆ,
ವಿಜಯಪುರ, ಸೆ. ೧೩: ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ (ಡಿಸಿಸಿ) ಬ್ಯಾಂಕ್ ೨೦೨೫-೨೬ನೇ ಸಾಲಿನಲ್ಲಿ ಅಭೂತಪೂರ್ವ ಪ್ರಗತಿ ದಾಖಲಿಸಿದ್ದು, ೮,೦೭೫.೫೬ ಕೋಟಿ ದಾಖಲೆಯ ವಹಿವಾಟು ನಡೆಸುವುದರೊಂದಿಗೆ ೨೯.೧೬ ಕೋಟಿ ನಿವ್ವಳ ಲಾಭ ಗಳಿಸಿದೆ. ಇದು ಬ್ಯಾಂಕಿನ ಇತಿಹಾಸದಲ್ಲೇ ಸಾರ್ವಕಾಲಿಕ ಗರಿಷ್ಠ ವಾರ್ಷಿಕ ಲಾಭವಾಗಿದ್ದು, ಸಹಕಾರಿ ಬ್ಯಾಂಕಿAಗ್ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಸಚಿವ ಶಿವಾನಂದ ಎಸ್. ಪಾಟೀಲ ಹೇಳಿದರು.
ನಗರದ ಸೋಲಾಪುರ ರಸ್ತೆಯ ಕೆ.ಸಿ.ನಗರದಲ್ಲಿರುವ ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿಯ ಸಭಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕಿನ ಸಾಧನೆ ಹಾಗೂ ಆರ್ಥಿಕ ಪ್ರಗತಿಯ ವಿವರಗಳನ್ನು ಹಂಚಿಕೊAಡರು.
ರೈತರಿಗೆ ಆದ್ಯತೆ ನೀಡಿರುವ ಬ್ಯಾಂಕ್, ೨೦೨೫-೨೬ನೇ ಸಾಲಿನಲ್ಲಿ ಕೃಷಿ ಕ್ಷೇತ್ರಕ್ಕೆ ೧,೯೫೩.೪೩ ಕೋಟಿ ಹಾಗೂ ಕೃಷಿಯೇತರ ಉದ್ದೇಶಗಳಿಗೆ ೧,೪೩೮.೨೦ ಕೋಟಿ ಸೇರಿ ಒಟ್ಟು ೩,೩೯೧.೬೩ ಕೋಟಿ ಸಾಲ ವಿತರಿಸಿದೆ. ಮಾರ್ಚ್ ೩೧, ೨೦೨೬ರ ವೇಳೆಗೆ ಒಟ್ಟು ಸಾಲ ಬಾಕಿ ೩,೬೭೩.೨೦ ಕೋಟಿಯಾಗಿದ್ದು, ಇದರಲ್ಲಿ ೨,೧೧೫.೦೯ ಕೋಟಿ ಕೃಷಿ ಸಾಲ ಹಾಗೂ ೧,೫೫೮.೧೧ ಕೋಟಿ ಕೃಷಿಯೇತರ ಸಾಲವಾಗಿದೆ. ಕೃಷಿ ಮತ್ತು ಕೃಷಿಯೇತರ ಸಾಲದ ಅನುಪಾತ ೫೮:೪೨ರಷ್ಟಿದೆ ಎಂದು ತಿಳಿಸಿದರು.
೨.೫೫ ಲಕ್ಷ ರೈತರಿಗೆ ಕೃಷಿ ಸಾಲ
ಬಡ್ಡಿ ಸಹಾಯಧನ ಯೋಜನೆಯಡಿ ೨.೫೫ ಲಕ್ಷ ರೈತರಿಂದ ೨,೧೧೫.೦೯ ಕೋಟಿ ಕೃಷಿ ಸಾಲ ಬಾಕಿಯಿದೆ. ಇದೇ ಸಾಲಿನಲ್ಲಿ ೧೧,೫೫೦ ಹೊಸ ರೈತರಿಗೆ ೧೦೮.೦೨ ಕೋಟಿ ಬೆಳೆ ಸಾಲ ವಿತರಿಸಲಾಗಿದೆ. ತೋಟದ ಮನೆ ನಿರ್ಮಾಣಕ್ಕಾಗಿ ಗರಿಷ್ಠ ೨೦ ಲಕ್ಷದವರೆಗೆ ಸಾಲ ನೀಡುವ ಯೋಜನೆಯಡಿ ಈವರೆಗೆ ೨೦೨ ರೈತರಿಗೆ ೨೭.೬೪ ಕೋಟಿ ಸಾಲ ಮಂಜೂರು ಮಾಡಲಾಗಿದೆ ಎಂದು ಶಿವಾನಂದ ಪಾಟೀಲ ವಿವರಿಸಿದರು.
೪,೪೦೨ ಕೋಟಿ ಠೇವಣಿ ಸಂಗ್ರಹ
ಬ್ಯಾAಕಿನ ೫೧ ಶಾಖೆಗಳ ಮೂಲಕ ೨೦೨೫-೨೬ನೇ ಸಾಲಿನ ಅಂತ್ಯಕ್ಕೆ ೪,೪೦೨.೩೬ ಕೋಟಿ ಠೇವಣಿ ಸಂಗ್ರಹಿಸಲಾಗಿದೆ. ಹಿಂದಿನ ಸಾಲಿನ ೩,೮೧೪.೧೬ ಕೋಟಿಗೆ ಹೋಲಿಸಿದರೆ ೫೮೮.೨೦ ಕೋಟಿ ಹೆಚ್ಚಳವಾಗಿದ್ದು, ೧೫.೪೨ರಷ್ಟು ವಾರ್ಷಿಕ ಬೆಳವಣಿಗೆ ದಾಖಲಿಸಿದೆ.
ಬ್ಯಾಂಕಿನ ಒಟ್ಟು ದುಡಿಯುವ ಬಂಡವಾಳ ೫,೫೯೯.೮೯ ಕೋಟಿಗೆ ಏರಿಕೆಯಾಗಿದೆ. ಹಿಂದಿನ ವರ್ಷಕ್ಕಿಂತ ೬೯೮.೨೯ ಕೋಟಿ ಹೆಚ್ಚಳವಾಗಿದ್ದು, ಶೇ.೧೪.೨೫ರಷ್ಟು ಪ್ರಗತಿಯಾಗಿದೆ. ಬ್ಯಾಂಕಿನ ಸ್ವಂತ ಬಂಡವಾಳ ೬೫೨.೨೦ ಕೋಟಿಯಾಗಿದ್ದು, ಈ ವರ್ಷ ೫೪.೪೪ ಕೋಟಿ ಹೆಚ್ಚಳವಾಗಿದೆ.
ಸಾರ್ವಕಾಲಿಕ ಗರಿಷ್ಠ ಲಾಭ
೨೦೨೫-೨೬ನೇ ಸಾಲಿನಲ್ಲಿ ಬ್ಯಾಂಕ್ ೪೦.೧೫ ಕೋಟಿ ತೆರಿಗೆ ಪೂರ್ವ ಲಾಭ ಗಳಿಸಿದ್ದು, ೧೦.೯೯ ಕೋಟಿ ಆದಾಯ ತೆರಿಗೆ ಪಾವತಿಸಿದ ಬಳಿಕ ೨೯.೧೬ ಕೋಟಿ ನಿವ್ವಳ ಲಾಭ ಉಳಿಸಿಕೊಂಡಿದೆ. ಹಿಂದಿನ ಸಾಲಿಗೆ ಹೋಲಿಸಿದರೆ ನಿವ್ವಳ ಲಾಭದಲ್ಲಿ ಶೇ.೧೫.೮೧ರಷ್ಟು ಏರಿಕೆಯಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.
?೮,೦೭೫ ಕೋಟಿ ವಹಿವಾಟು
೨೦೨೫-೨೬ರಲ್ಲಿ ಬ್ಯಾಂಕಿನ ಒಟ್ಟು ವಹಿವಾಟು ?೮,೦೭೫.೫೬ ಕೋಟಿ ತಲುಪಿದೆ. ಹಿಂದಿನ ಸಾಲಿನ ೭,೦೯೪.೭೩ ಕೋಟಿಗೆ ಹೋಲಿಸಿದರೆ ೯೮೦.೮೩ ಕೋಟಿ ಹೆಚ್ಚಳವಾಗಿದ್ದು, ಶೇ.೧೩.೮೨ರಷ್ಟು ಪ್ರಗತಿ ಸಾಧಿಸಿದೆ.
ಬ್ಯಾಂಕಿನ ಒಟ್ಟು ಸಾಲ ಮರುಪಾವತಿ ಪ್ರಮಾಣ ಶೇ.೯೨.೬೧ರಷ್ಟಿದೆ. ಕೃಷಿ ಸಾಲ ಮರುಪಾವತಿ ಶೇ.೯೬.೨೬ ಹಾಗೂ ಕೃಷಿಯೇತರ ಸಾಲ ಮರುಪಾವತಿ ಶೇ.೮೭.೭೬ರಷ್ಟಿದೆ. ಕಳೆದ ಎರಡು ದಶಕಗಳಿಂದ ಕೃಷಿ ಸಾಲ ಮರುಪಾವತಿ ಪ್ರಮಾಣ ಶೇ.೯೦ಕ್ಕಿಂತ ಹೆಚ್ಚಿರುವುದು ಬ್ಯಾಂಕಿನ ಪ್ರಮುಖ ಸಾಧನೆಯಾಗಿದೆ ಎಂದರು.
ನೆಟ್ ಎನ್‌ಪಿಎ ಶೂನ್ಯ
ಬ್ಯಾಂಕಿನ ಒಟ್ಟು ಎನ್‌ಪಿಎ ಪ್ರಮಾಣ ಶೇ.೪.೩೪ರಷ್ಟಿದ್ದರೂ, ನಿಷ್ಕ್ರಿಯ ಆಸ್ತಿಗಳಿಗೆ ಪೂರ್ಣ ಪ್ರಮಾಣದಲ್ಲಿ ಅನುವು ಕಲ್ಪಿಸಿರುವ ಹಿನ್ನೆಲೆಯಲ್ಲಿ ನೆಟ್ ಎನ್‌ಪಿಎ ಶೂನ್ಯವಾಗಿದೆ. ೨೦೨೫-೨೬ನೇ ಸಾಲಿನ ಶಾಸನಬದ್ಧ ಲೆಕ್ಕ ಪರಿಶೋಧನೆಯಲ್ಲಿ ಬ್ಯಾಂಕ್ ಸತತವಾಗಿ ‘ಅ’ ವರ್ಗದ ಮಾನ್ಯತೆ ಉಳಿಸಿಕೊಂಡಿದೆ.
ಸಿಆರ್‌ಎಆರ್ ನಿಯಮಾವಳಿಗಳ ಪ್ರಕಾರ ಶೇ.೯ರಷ್ಟು ಇರಬೇಕಾದ ಬಂಡವಾಳ ಅನುಪಾತವು ಮಾರ್ಚ್ ೩೧, ೨೦೨೬ಕ್ಕೆ ಶೇ.೧೨.೭೯ರಷ್ಟಿದ್ದು, ಬ್ಯಾಂಕಿನ ಆರ್ಥಿಕ ಸುದೃಢತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.
೩೭ ಸಕ್ಕರೆ ಕಾರ್ಖಾನೆಗಳಿಗೆ ಸಾಲ
ಜಿಲ್ಲೆಯ ೩೭ ಸಕ್ಕರೆ ಕಾರ್ಖಾನೆಗಳಿಗೆ ಯೋಜನಾ ವೆಚ್ಚ ಹಾಗೂ ನಿರ್ವಹಣೆಗಾಗಿ ಸಾಲ ನೀಡಲಾಗಿದೆ. ಈ ಪೈಕಿ ೨೧ ಕಾರ್ಖಾನೆಗಳಿಂದ ವರ್ಷಾಂತ್ಯಕ್ಕೆ ೮೮೧.೫೭ ಕೋಟಿ ಸಾಲ ಬಾಕಿ ಬರಬೇಕಿದೆ ಎಂದು ತಿಳಿಸಿದರು.
ಬ್ಯಾಂಕ್ ನಬಾರ್ಡ್ ಹಾಗೂ ಅಪೆಕ್ಸ್ ಬ್ಯಾಂಕಿನಿAದ ?೫೬೨.೩೬ ಕೋಟಿ ಸಾಲ ಪಡೆದಿದ್ದು, ವರ್ಷಾಂತ್ಯಕ್ಕೆ ೪೯೨.೨೯ ಕೋಟಿ ಬಾಕಿಯಿದೆ. ಸಾಲವನ್ನು ನಿಯಮಿತವಾಗಿ ಮರುಪಾವತಿಸಲಾಗುತ್ತಿದ್ದು, ಯಾವುದೇ ಸುಸ್ತಿ ಬಾಕಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಡಿಜಿಟಲ್ ಬ್ಯಾಂಕಿAಗ್‌ಗೆ ಒತ್ತು
ಜಿಲ್ಲೆಯಾದ್ಯಂತ ೫೧ ಶಾಖೆಗಳನ್ನು ಹೊಂದಿರುವ ಡಿಸಿಸಿ ಬ್ಯಾಂಕ್ ಸಂಪೂರ್ಣ ಕೋರ್ ಬ್ಯಾಂಕಿAಗ್ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿದೆ. ೮ ಶಾಖೆಗಳಲ್ಲಿ ಎಟಿಎಂ ಸೌಲಭ್ಯ ಕಲ್ಪಿಸಲಾಗಿದೆ. ಮೊಬೈಲ್ ಬ್ಯಾಂಕಿAಗ್ ಮೂಲಕ ಎನ್‌ಇಎಫ್‌ಟಿ, ಆರ್‌ಟಿಜಿಎಸ್, ಐಎಂಪಿಎಸ್, ಯುಪಿಐ ಸೇರಿದಂತೆ ಫೋನ್‌ಪೇ, ಗೂಗಲ್ ಪೇ ಹಾಗೂ ವಿವಿಧ ಬಿಲ್ ಪಾವತಿ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಕ್ಯೂಆರ್ ಕೋಡ್, ಎಂ-ಪಿಒಎಸ್ ಹಾಗೂ ಮೈಕ್ರೋ ಎಟಿಎಂ ಸೇವೆಗಳನ್ನೂ ಜಾರಿಗೊಳಿಸಲಾಗಿದೆ.
೧.೧೨ ಲಕ್ಷ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್
ಜಿಲ್ಲೆಯ ಪ್ಯಾಕ್ಸ್ ಹಾಗೂ ಬ್ಯಾಂಕ್ ಶಾಖೆಗಳ ಮೂಲಕ ೨.೫೦ ಲಕ್ಷ ರೈತರಿಗೆ ಬೆಳೆ ಸಾಲ ವಿತರಿಸಲಾಗುತ್ತಿದೆ. ೧,೧೨,೨೨೭ ರೈತರಿಗೆ ಡೈರೆಕ್ಟ್/ರೂಪೇ ಕಿಸಾನ್ ಕ್ರೆಡಿಟ್ ಕಾರ್ಡ್ ಹಾಗೂ ೩೩,೭೦೨ ಇತರೆ ಗ್ರಾಹಕರಿಗೆ ಡೆಬಿಟ್ ಕಾರ್ಡ್ ನೀಡಲಾಗಿದೆ.
ಸ್ವಸಹಾಯ ಗುಂಪುಗಳಿಗೂ ಸಾಲದ ಬೆಂಬಲ
ಮಾರ್ಚ್ ೩೧, ೨೦೨೬ಕ್ಕೆ ಬ್ಯಾಂಕಿನೊAದಿಗೆ ೧೦,೯೭೮ ಸ್ವಸಹಾಯ ಗುಂಪುಗಳು ಸಂಪರ್ಕ ಹೊಂದಿದ್ದು, ೯.೧೭ ಕೋಟಿ ಠೇವಣಿ ಹೊಂದಿವೆ. ೨೦೨೫-೨೬ನೇ ಸಾಲಿನಲ್ಲಿ ೬೫೭ ಗುಂಪುಗಳಿಗೆ ೨೩.೬೩ ಕೋಟಿ ಸಾಲ ಜೋಡಣೆ ಮಾಡಲಾಗಿದೆ.
೧೦೭ ವರ್ಷಗಳ ಸೇವೆ
೧೯೧೯ರಲ್ಲಿ ಸ್ಥಾಪನೆಯಾದ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ೧೦೭ ವರ್ಷಗಳ ನಿರಂತರ ಸೇವೆ ಪೂರ್ಣಗೊಳಿಸಿ ೧೦೮ನೇ ವರ್ಷಕ್ಕೆ ಕಾಲಿಟ್ಟಿದೆ. ಜಿಲ್ಲೆಯ ಗ್ರಾಮೀಣ, ಪಟ್ಟಣ ಹಾಗೂ ನಗರ ಪ್ರದೇಶಗಳ ರೈತರು, ಸಹಕಾರ ಸಂಘಗಳು ಹಾಗೂ ಗ್ರಾಹಕರಿಗೆ ಬ್ಯಾಂಕ್ ನಿರಂತರವಾಗಿ ಸೇವೆ ಸಲ್ಲಿಸುತ್ತಿದೆ.
ಜಿಲ್ಲೆಯ ೭೩೯ ಸಹಕಾರ ಸಂಘ ಸಂಸ್ಥೆಗಳು ಬ್ಯಾಂಕಿನ ಸದಸ್ಯತ್ವ ಹೊಂದಿದ್ದು, ಒಟ್ಟು ೭೮,೫೯೫ ವ್ಯಕ್ತಿ ಹಾಗೂ ಸಹ ಸದಸ್ಯತ್ವವಿದೆ. ಬ್ಯಾಂಕಿನ ೫೧ ಶಾಖೆಗಳಲ್ಲಿ ೫೦೮ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಆಡಳಿತ ಮಂಡಳಿ, ಸಿಬ್ಬಂದಿ, ಸಹಕಾರ ಸಂಘಗಳು ಹಾಗೂ ರೈತರ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಶಿವಾನಂದ ಪಾಟೀಲ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರು, ಪ್ರಧಾನ ವ್ಯವಸ್ಥಾಪಕರು ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.



























