ಬೆಂಗಳೂರು:ಜು.೧-೧೯ನೇ ಆವೃತ್ತಿಯ ನಂದನ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ನಂದನ ಮಾಸ್ಟರ್ ತಂಡವು ವಿನ್ನರ್ ಆಗಿ ಹೊರಹೊಮ್ಮಿದೆ. ನಂದನ ಥಂಡರ್ ತಂಡವು ರನ್ನರ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.
ಕೋರಮಂಗಲದ ಸೇಂಟ್ ಜಾನ್ಸ್ ಕ್ರೀಡಾಂಗಣದಲ್ಲಿ ನಡೆಯಿತು. ಒಟ್ಟಾರೆ ೧೬ ತಂಡಗಳು ಸ್ಪರ್ಧಿಸಿದ್ದವು.
ನಂದನ ಪ್ಯಾಲೇಸ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಆರ್. ರವಿಚಂದರ್ ಮತ್ತು , ಆಡಿ. ವಿ ಜಿ ಕಿರಣ್ ಕುಮಾರ್ ವಿಜೇತ ತಂಡಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಗಿರೀಶ್ ಆರಾಧ್ಯ ಇತರರು ಇದ್ದರು.
































