Home ಜಿಲ್ಲೆ ಜಲ ಮೂಲಗಳ ಪುನಶ್ಚೇತನಕ್ಕೆ ವಿಬಿಜಿ ರಾಮ್‌ಜಿ ಬಲ

ಜಲ ಮೂಲಗಳ ಪುನಶ್ಚೇತನಕ್ಕೆ ವಿಬಿಜಿ ರಾಮ್‌ಜಿ ಬಲ


ಗದಗ,ಆ.೧೨: ಕೂಲಿ ಕಾರ್ಮಿಕರ ವಲಸೆ ತಡೆಗಟ್ಟುವುದು, ಗ್ರಾಮೀಣ ಭಾಗದ ಸಂಪನ್ಮೂಲ ಸಂರಕ್ಷಣೆ, ಮಣ್ಣು ಮತ್ತು ನೀರು ಸಂರಕ್ಷಣೆ, ಜಲ ಮೂಲಗಳ ಸಂರಕ್ಷಣೆ ಜತೆಗೆ ದುಡಿಮೆಗೆ
ವಿಬಿಜಿ ರಾಮ್ ಜಿ ಯೋಜನೆ ಪೂರಕವಾಗಿದೆ ಎಂದು ತಾಪಂ ಸಹಾಯಕ ನಿರ್ದೇಶಕರು (ವಿಬಿಜಿ ರಾಮ್‌ಜಿ) ಕುಮಾರ ಪೂಜಾರ ಹೇಳಿದರು.


ಗದಗ ತಾಲೂಕಿನ ಅಂತೂರ ಗ್ರಾಮದಲ್ಲಿಯ ವಿಬಿಜಿ ರಾಮ್‌ಜಿ ಯೋಜನೆಯಡಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ವಿಬಿಜಿ ರಾಮ್‌ಜಿ ಯೋಜನೆ ಅಡಿ ಕೂಲಿ ಮೊತ್ತ ರೂ. ೩೮೨ ರೂ.ಗೆ ಹೆಚ್ಚಳವಾಗಿದೆ. ಎನ್‌ಎಂಎಸ್‌ಎಸ್ ತಂತ್ರಾAಶದ ಮೂಲಕ ಎರಡು ಬಾರಿ ಹಾಜರಾತಿ, ಅಳತೆಗೆ ಅನುಸಾರ ಕೂಲಿ ಪಾವತಿ ಮಾಡಲಾಗುತ್ತದೆ.
ಕೂಲಿ ಪಾವತಿಯಲ್ಲಿ ಗಂಡು- ಹೆಣ್ಣು ಎಂಬ ವ್ಯತ್ಯಾಸವಿಲ್ಲದೆ ವೇತನ ನೀಡಲಾಗುತ್ತದೆ. ಗ್ರಾಮಸ್ಥರು ಇದರ ಸದಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.


ಸಹಾಯಕ ನಿರ್ದೇಶಕರು (ಪಂರಾ) ಶಿವಕುಮಾರ ವಾಲಿ ಅವರು ಮಾತನಾಡಿ, ವಿಬಿಜಿ ರಾಮ್‌ಜಿ ಯೋಜನೆ ಗ್ರಾಮೀಣ ಪ್ರದೇಶದ ಬಡ ಅಕುಶಲ ಕೂಲಿ ಕಾರ್ಮಿಕರಿಗೆ ಸ್ಥಳೀಯವಾಗಿಯೇ ಉದ್ಯೋಗ ಒದಗಿಸಲಾಗುತ್ತಿದೆ ಎಂದರು. ಗ್ರಾಮೀಣ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿದೆ. ಎನ್‌ಎಂಎAಎಸ್ ತಂತ್ರಾAಶದಲ್ಲಿ ಪ್ರತಿದಿನ ಎರಡು ಬಾರಿ ಹಾಜರಾತಿ ಅಳವಡಿಸಬೇಕು ಎಂದು ತಿಳಿಸಿದರು.
ಅಂತೂರ- ಬೆಂತೂರ ಗ್ರಾಮದ ಬೂದೀಶ್ವರ ಸಂಸ್ಥಾನ ಮಠದ ಡಾ. ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು ಭೂಮಿ ಪೂಜೆ ನೆರವೇರಿಸಿ ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿದರು.
ಗ್ರಾಪಂ ಮಾಜಿ ಅಧ್ಯಕ್ಷ ಪ್ರಕಾಶಗೌಡ ಪಾಟೀಲ, ಕಾರ್ಯದರ್ಶಿ ಶಾಂತಯ್ಯ ಪ್ರಭಯ್ಯನಮಠ, ಟಿಎಇ ಪ್ರದೀಪ್ ನರೇಗಲ್ಲ, ಗ್ರಾಪಂ ಸಿಬ್ಬಂದಿಯಾದ ಮಹಾತೇಶ ಮಜ್ಜಿಗುಡ್ಡ, ಅಶೋಕ ಜಿನಗಿ, ಬಿಎಫ್‌ಟಿ ದಾವಲಸಾಬ್ ಚಲ್ಲಮರದ, ಕಾಯಕ ಬಂಧುಗಳು, ಕೂಲಿಕಾರರು ಇತರರಿದ್ದರು.