
ಚನ್ನಮ್ಮನ ಕಿತ್ತೂರ,ಜೂ೧: ಸಮೀಪದ ಕಕ್ಕೇರಿ, ಲಿಂಗನಮಠ, ಗೋಧೋಳಿ, ಭೂರಣಕಿ, ಮಸ್ಕಿನಟ್ಟಿ, ಬೀಡಿ, ಚುಂಚುವಾಡ, ಬೀಡಿ, ಗ್ರಾಮಗಳಲ್ಲಿ ಕಾರ ಹುಣ್ಣಿಮೆ ದಂದು ವಿಜೃಂಭಣೆ ಹಾಗೂ ಅದ್ದೂರಿಯಿಂದ ವಟ ಸಾವಿತ್ರಿ ಹಬ್ಬವನ್ನು ಆಚರಿಸಲಾಯಿತು.
ಮುತ್ತೆöÊದರು ಅರಳಿ ಹಾಗೂ ಆಲದಟೊಂಗಿ ತಂದು ಮನೆಯಲ್ಲಿ ಪೂಜೆ ಮಾಡುತ್ತಾರೆ. ಕೆಲವರು ಗ್ರಾಮದ ಅರಳಿಮರ ಹಾಗೂ ಆಲದ ಮರಕ್ಕೆ ಐದು ಸುತ್ತುದಾರ ಸುತ್ತಿ. ಅರಿಶಿನ ಕುಂಕುಮ ಹಚ್ಚಿ ಹೂಮಾಲೆ ಹಾಕಿ, ವಿದ್ಯುತ್ ದೀಪಗಳಿಂದ ಮಾವಿನ ತೋರಣದಿಂದ ಅಲಂಕರಿಸಿ, ಆರತಿ ಮಾಡಿ ಪೂಜೆ ಸಲ್ಲಿಸಿದರು.
ಬಾಳೆಹಣ್ಣು, ಹಲಸಿನ ಹಣ್ಣು, ಮಾವಿನ ಹಣ್ಣು, ಪೇರಲ್ ಹಣ್ಣು, ದಾಳಂಬರಿ ಹಣ್ಣು, ನೀರಲ ಹಣ್ಣು, ಕವಳಿಹಣ್ಣು, ಉತ್ತತ್ತಿ , ಕರಿಮಣಿ, ಎಲೆ ಅಡಿಕೆ, ಸೇರಿಸಿ ಉಡಿ ತುಂಬಿದರು. ಈ ಸಂದರ್ಭದಲ್ಲಿ ಭಾರತಿ ಮಿಠಾರಿ, ಸುಚಿತ್ರಾ ಮಿಠಾರಿ, ಶೀಲಾ ಮಿಠಾರಿ,ಜ್ಯೋತಿ ಕುಡುತುರಕರ, ಶಾಲನ ಕುಡುತುರಕರ,ಪೂಜಾ ಕುಡುತುರಕರ, ಲಕ್ಷಿ÷್ಮ ಪಾನೇರಿ, ಸಂಧ್ಯಾ ಪಾನೇರಿ, ವಾಣಿ ಪಾನೇರಿ, ಸೋನಾಲಿ ಪಾನೇರಿ , ರೂಪ ಪಾನೇರಿ, ಅಮೃತ ಕುಡುತುರಕರ, ಸ್ನೇಹ ಮುರಗೋಡ, ಇತರರು ಇದ್ದರು.































