Home ಜಿಲ್ಲೆ ವಾಣಿಜ್ಯ ರತ್ನ’ ಪ್ರಶಸ್ತಿ

ವಾಣಿಜ್ಯ ರತ್ನ’ ಪ್ರಶಸ್ತಿ

ಬಾದಾಮಿ, ಜು.೩೦:ಬಾದಾಮಿ ತಾಲೂಕಿನ ನಂದಿಕೇಶ್ವರ ಗ್ರಾಮದ ಖ್ಯಾತ ಉದ್ಯಮಿ ಹಾಗೂ ಕುಮಾರೇಶ್ವರ ಆಯಿಲ್ ಇಂಡಸ್ಟಿçÃಸ್ ಸಂಸ್ಥೆಯ ಮುಖ್ಯಸ್ಥ ಎಂ.ಬಿ. ಹಂಗರಗಿ ಅವರು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಹುಬ್ಬಳ್ಳಿ ವತಿಯಿಂದ ಪ್ರದಾನ ಮಾಡುವ ಪ್ರತಿಷ್ಠಿತವಾಣಿಜ್ಯ ರತ್ನ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.


ವಾಣಿಜ್ಯೋದ್ಯಮ ಕ್ಷೇತ್ರದಲ್ಲಿ ಸಾಧಿಸಿರುವ ಗಮನಾರ್ಹ ಯಶಸ್ಸು ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಈ ಗೌರವ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯು ತನ್ನ ೯೭ನೇ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಆಗಸ್ಟ್ ೧ರಂದು ಸಂಜೆ ೪ ಗಂಟೆಗೆ ಹುಬ್ಬಳ್ಳಿಯ ಸಂಸ್ಥೆಯ ಚಂದ್ರವದನ ದೇಸಾಯಿ ಸಭಾಗೃಹದಲ್ಲಿ ವಿಶೇಷ ಸಮಾರಂಭವನ್ನು ಆಯೋಜಿಸಿದ್ದು, ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದ ಉದ್ಯಮಿಗಳಿಗೆ `ವಾಣಿಜ್ಯ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.