Home ಜಿಲ್ಲೆ ವನ ಮಹೋತ್ಸವ ಪರಿಸರ ಸಂರಕ್ಷಣೆಗೆ ಸಹಾಯ: ಶೈಲೇಂದ್ರ ಕಾವಡಿ

ವನ ಮಹೋತ್ಸವ ಪರಿಸರ ಸಂರಕ್ಷಣೆಗೆ ಸಹಾಯ: ಶೈಲೇಂದ್ರ ಕಾವಡಿ

ಹುಮನಾಬಾದ್: ಜು.೨:ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜ ಬಾಲಕರ ಪ್ರೌಢಶಾಲೆ ವಿಭಾಗದಲ್ಲಿ ರಾಷ್ಟ್ರೀಯ ಹಸಿರು ಪಡೆ ಯೋಜನೆಯಡಿಯಲ್ಲಿ ಪರಿಸರ ಸಂರಕ್ಷಣೆ ಜನಜಾಗೃತಿ ಕಾರ್ಯಕ್ರಮ ಹಾಗೂ ವನಮೋತ್ಸವ ಕಾರ್ಯಕ್ರಮ ಪರಿಸರವಾದಿ ಶೈಲೇಂದ್ರ ಕಾವಾಡಿ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿ, ವನಮೋತ್ಸವ ಕಾರ್ಯಕ್ರಮ ಪರಿಸರ ಸಂರಕ್ಷಣೆಗೆ ತುಂಬಾ ಸಹಾಯವಾಗಲಿದೆ ಎಂದರು. ೧೯೫೦ ರಿಂದ ಅಂದಿನ ಕೃಷಿ ಸಚಿವರಾದ ದಿವಂಗತ ಕೆ.ಎಂ. ಮುನಿಷಿಯವರು ಈ ಕಾರ್ಯಕ್ರಮ ಆರಂಭಿಸಿದ್ದಾರೆAದು ಸ್ಮರಿಸಿದರು. ೨೦೨೪ ರಿಂದ ತಾಯಿ ಹೆಸರಿನ ಮೇಲೆ ಸಸಿ ನೆಡುವ ಕಾರ್ಯಕ್ರಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಭಿಸಿದ್ದಾರೆ ಎಂದರು. ಸಾರ್ವಜನಿಕರಲ್ಲಿ ವಿದ್ಯಾರ್ಥಿಗಳಲ್ಲಿ ವನಮೋತ್ಸವ ಮರ ಗಿಡಗಳ ಬಗ್ಗೆ ಜಾಗೃತಿ ಒಡ ಮೂಡಿಸುವುದು ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಒಡ ಮೂಡಿಸಲು ಈ ಉತ್ಸವ ತುಂಬಾ ಸಹಾಯವಾಗಿದೆ ಎಂದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಗುರುಗಳಾದ ಸಂತ ದೇವೇಂದ್ರ ರವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರು ಕಡ್ಡಾಯವಾಗಿ ಮರಗಿಡ ಬೆಳೆಸಿ ಪರಿಸರ ಸಂರಕ್ಷಣೆಗೆ ಸಹಾಯ ಮಾಡಬೇಕು ಎಂದು ತಿಳಿಸಿದರು. ವಿದ್ಯಾರ್ಥಿಗಳು ಕೂಡ ಮರ ಗಿಡ ಬೆಳೆಸುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು. ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶೇಕ್ ಮಹಿಬೂಬ್ ಪಟೇಲ್. ಶಾಲಾ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ವೀರಂತ್ ರೆಡ್ಡಿ ಜಂಪಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.