Home ಜಿಲ್ಲೆ ಬೆಂಗಳೂರು ವಕ್ಕಲೇರಿ ಹೋಬಳಿ ಮಟ್ಟದ ಕ್ರೀಡಾಕೂಟ- ಅವ್ಯವಸ್ಥೆಯ ಆಗರ

ವಕ್ಕಲೇರಿ ಹೋಬಳಿ ಮಟ್ಟದ ಕ್ರೀಡಾಕೂಟ- ಅವ್ಯವಸ್ಥೆಯ ಆಗರ

filter: 0; fileterIntensity: 0.000000; filterMask: 0; captureOrientation: 0; hdrForward: 6; shaking: 0.072767; highlight: 1; algolist: 0; multi-frame: 1; brp_mask: 8; brp_del_th: 0.0173,0.0000; brp_del_sen: 0.1300,0.0000; delta:1; bokeh:1; ispap:1; papproctime: 2026:09:08 16:43:12; module: photo;hw-remosaic: false;touch: (-1.0, -1.0);sceneMode: 7864320;cct_value: 0;AI_Scene: (200, 0);aec_lux: 139.0;aec_lux_index: 0;albedo: ;confidence: ;motionLevel: 0;weatherinfo: null;temperature: 39;zeissColor: bright;

ಕೋಲಾರ ,ಸೆ,೯- ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಮಂಗಳವಾರ ನಡೆದ ವಕ್ಕಲೇರಿ ಹೋಬಳಿ ಮಟ್ಟದ ಅಂತರ ಶಾಲಾ ಕ್ರಡಾಕೂಟದಲ್ಲಿ ಅವ್ಯವಸ್ಥೆಯ ಆಗರವಾಗಿತ್ತು.


ದೂರದ ಹಳ್ಳಿಗಳಿಂದ ಸುಮಾರು ೮೦೦ ವಿದ್ಯಾರ್ಥಿಗಳು ಬಂದಿದ್ದು, ಕುಡಿಯುವ ನೀರು ಸೇರಿದಂತೆ ಕೆಲ ಮೂಲಸೌಕರ್ಯ ವ್ಯವಸ್ಥೆ ಇರಲಿಲ್ಲ. ಈ ಮೈದಾನದ ಮಧ್ಯದಲ್ಲಿಯೇ ನಗರಸಭಯಿಂದ ಗಣೇಶ ಮೂರ್ತಿಗಳನ್ನು ಇಟ್ಟು ಮಾರಾಟ ಮಾಡಲು ಅನುಮತಿ ನೀಡಿದ್ದು, ಈಗಾಗಲೇ ಒಂದು ಭಾಗದಲ್ಲಿ ಮಾರಾಟ ನಡೆಯುತ್ತಿದೆ. ಅದರ ಪಕ್ಕದಲ್ಲೇ ವಾಲಿವಾಲ್ ಕಬಡ್ಡಿ, ಕೊಕ್ಕೊ, ಥ್ರೋಬಾಲ್? ಸೇರಿದಂತೆ ವಿವಿಧ ಕಿಡಾ ಸ್ಪರ್ಧೆಗಳು ನಡೆದವು.


ಬಿಸಿಲ ಧಗ ಹೆಚ್ಚಿದ್ದು, ಮಕ್ಕಳು ಕುಳಿತುಕೊಳ್ಳಲು ಶಾಮಿಯಾನವನ್ನೂ ಹಾಕಿರಲಿಲ್ಲ, ಕುರ್ಚಿಗಳಂತೂ ಮೊದಲೇ ಇರಲಿಲ್ಲ. ಮರದ ನೆರಳಿನ ಮೊರ ಹೋದ ವಿದ್ಯಾರ್ಥಿಗಳು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದದ್ದು ಕಂಡುಬಂತು. ಪ್ರಥಮ ಚಿಕಿತ್ಸ ಕಿಟ್ ಇತ್ತಾದರೂ ನರ್ಸ್ ನಿಯೋಜಿಸಿರಲಿಲ್ಲ.


ಈ ಬಗ್ಗೆ ಸಂಘಟಕರನ್ನು ಕೇಳಿದರ, ಶಾಮಿಯಾನ ಕುರ್ಚಿ ತರಿಸಲು ಅನುದಾನದ ಕೊರತೆ ಇದೆ. ಇರುವ ಹಣದಲ್ಲೇ ಕಿಡಾಕೂಟ ನಡೆಸಬೇಕು. ಸುಮಾರು ೮೦೦ ವಿದ್ಯಾರ್ಥಿಗಳು ಬಂದಿದ್ದು, ಪತ್ರಕರ್ತರಿಂದ ಮಾಹಿತಿ ಗೊತ್ತಾದ ಮೇಲೆ ಕುಡಿಯುವ ನೀರು ವ್ಯವಸ್ಥೆ ಮಾಡಿದೆವು. ದಾನಿಗಳಿಂದ ಊಟ ವ್ಯವಸ್ಥೆ ಮಾಡಿದ್ದು, ಪದಕ ಹಾಗೂ ಪ್ರಮಾಣಪತ್ರವನ್ನು ಇಲಾಖೆಯಿಂದ ನೀಡಿದೆವು. ಮುಂದೆ ಕಿಡಾಕೂಟ ನಡೆಸುವಾಗ ನರ್ಸ್ ನಿಯೋಜನೆ ಮಾಡುತ್ತೇವೆ ಎಂದರು.


ಕ್ರೀಡಾ ಇಲಾಖೆ ಅಧಿಕಾರಿಗಳನ್ನು ಕೇಳಿದರ, ಹೋಬಳಿ ಮಟ್ಟದ ಕ್ರಿಡಾಕೂಟ ನಮ್ಮ ವ್ಯಾಪ್ತಿಗ ಬರುವುದಿಲ್ಲ. ಶಾಲಾ ಶಿಕ್ಷಣ ಇಲಾಖೆಯಿಂದಲೇ ನಡೆಸುತ್ತಾರ ಎಂದು ಉತ್ತರಿಸಿದರು.