
ಕಲಬುರಗಿ,ಆ.13-ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸೇಡಂ ರಸ್ತೆಯ ದಾರಾನಾಯಕ ತಾಂಡಾ ಕ್ರಾಸ್ ಹತ್ತಿರ ಮಂಗಳವಾರ ರಾತ್ರಿ ನಡೆದಿದೆ.
ಮೃತನನ್ನು ವಿಠ್ಠಲ ನಗರ ನಿವಾಸಿ ಶಾಂತಗೌಡ ತಂದೆ ಸುಭಾಶ್ಚಂದ್ರ ಪಾಟೀಲ ಎಂದು ಗುರುತಿಸಲಾಗಿದೆ. ಇವರು ಎಲ್‍ಐಸಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಈ ಸಂಬಂಧ ಶಾಂತಗೌಡ ಅವರ ಸಹೋದರ ಮಹಾಂತೇಶ್ ಪಾಟೀಲ ಅವರು ಸಂಚಾರಿ ಪೊಲೀಸ್ ಠಾಣೆ-2ರಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.






























