
ಕೋಲಾರ,ಜೂ,೧೫-ಶ್ರೀನಿವಾಸಪುರ ಪಟ್ಟಣದಲ್ಲಿ ಹಾಡು ಹಗಲೇ ಮನೆಗೆ ನುಗ್ಗಿ ಮಹಿಳೆಯೊಬ್ಬರ ಧರಿಸಿದ್ದ ಚಿನ್ನಾಭರಣಗಳನ್ನು ಕಸಿದು ಕೊಂಡು ಮನೆಯ ಬಳಿ ಇದ್ದ ಕಾರನ್ನು ಅಪಹರಿಸಿ ಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಅರೋಪಿಗಳನ್ನು ಶ್ರೀನಿವಾಸಪುರ ಇಂದಿರ ನಗರದ ಸೈಯದ್ ಸುಲ್ತಾನ್ ಅಲಿಯಾಸ್ ಸುಲ್ತಾನ್ ಬಿನ್ ಸಥಯದ್ ಸರ್ದಾರ್ (೨೪) ಮತ್ತೊರ್ವ ಮೂಲತಹ ಮುಳಬಾಗಿಲು ಜಹಾಂಗೀಲ್ ಮೊಹಲ್ಲಾ ನಿವಾಸಿ ಹಾಲಿ ಹೊಸಕೋಟೆ ಗಂಗಮ್ಮ ಗುಡಿ ಸರ್ಕಲ್ ವಾಸಿ ಸಾಹೀಲ್ ಖಾನ್ ಅಲಿಯಾಸ್ ಸಾಹಿಲ್ ಬಿನ್ ದಿಲ್ ಬಹದ್ದೂರ್ (೨೪) ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ೪.೬ ಗ್ರಾಮ ತೊಕದ ಬಂಗಾರದ ಅಭರಣಗಳು ಒಂದು ಮೊಬೈಲ್ ಮತ್ತು ಮಾರುತಿ ಸುಜುಕಿ ಒಮ್ಮಿ ಕಾರು ಸೇರಿದಂತೆ ಒಟ್ಟು ೨,೬೫ ಲಕ್ಷರೂ ಮೌಲ್ಯದ ವಸ್ತುಗಳೆಂದು ಅಂದಾಜಿಸಿದೆ.
ಶ್ರೀನಿವಾಸಪುರದ ಪಟ್ಟಣದ ರಾಮಕೃಷ್ಣ ಪಾಲಿಟೆಕ್ನಿಕ್ ಬಳಿ ವಾಸವಿರುವ ಶ್ಯಾಮಲ ಕೋಂ ಸಿದ್ದಾರೆಡ್ಡಿ ಎಂಬುವರು ಮೇ ೧೯ ರಂದು ಬೆಳಿಗ್ಗೆ ೧೧.೩೦ರಲ್ಲಿ ಮನೆಯ ಮುಂದಿನ ಬೋರ್‌ವೆಲ್‌ನಲ್ಲಿ ನೀರು ಹಿಡಿಯುತ್ತಿದ್ದಾ ಮನೆಯ ನಾಯಿ ಬೊಗಳುತ್ತಿದ್ದನ್ನು ಕೇಳಿಸಿ ಕೊಂಡು ಮನೆ ಬಳಿ ಬಂದಾಗ ಅಪರಿಚಿತ ೩ ಮಂದಿ ದುಷ್ಕರ್ಮಿಗಲು ಮನೆಗೆ ನುಗ್ಗಿ ಬೀರುವನ್ನು ಜಖಂಗೊಳಿಸಿ ಹುಡುಕಾಟ ನಡೆಸುತ್ತಿದ್ದನ್ನು ಕಂಡು ಜೋರಾಗಿ ಕಿರುಚಾಡಿದಾಗ ದುಷ್ಕರ್ಮಿಗಳು ಶ್ಯಾಮಲದ ಎರಡು ಕಿವಿಯೊಲೆ ಹಾಗು ಮಾಟೆ ಹಾಗೂ ಕತ್ತಿನಲ್ಲಿದ್ದ ಬಂಗಾರದ ಗುಂಡುಗಳನ್ನು ಕಸಿದು ಕೊಂಡು ಮನೆ ಮುಂದೆ ನಿಲ್ಲಿಸಿದ್ದ ಕಾರನ್ನು ಅಪಹರಿಸಿ ಕೊಂಡು ಪರಾರಿಯಾಗಿದ್ದರು. ಈ ಸಂಬಂಧವಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮುಳಬಾಗಿಲು ಉಪವಿಭಾಗದ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಮನೀಷ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಬಿ.ಶಂಕರಾಚಾರಿ, ಪಿ.ಎಸ್.ಐ. ಜಯರಾಮ್ ಸತೀಶ್, ವಿದ್ಯಾಶೀ ಎಂ. ಬಳಿಗಾರ್ ಚಂದ್ರಕಲಾ,ದೇವರಾಜ್ ಹಾಗೂ ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.




























