
ಕೆಆರ್ ಪುರ, ಜೂ.೧೫- ಸರ್ಕಾರಿ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಅತ್ಯವಶ್ಯಕವಾಗಿದ್ದು,ಬಡಮಕ್ಕಳ ಸಾಧನೆಗೆ ಶಿಕ್ಷಕರು ಬೆನ್ನೆಲುಬಾಗಿ ನಿಲ್ಲಬೇಕು ಎಂದು ಬೆ.ಪೂರ್ವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಮೋಹನ್ ಅವರು ತಿಳಿಸಿದರು.
ಕ್ಷೇತ್ರದ ಕಲ್ಕೆರೆ ಸರ್ಕಾರಿ ಶಾಲೆಯ ಪ್ರಾಥಮಿಕ ಶಾಲಾ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ವಿತರಿಸಿ ಅವರು ಮಾತನಾಡಿದರು.
ಬಡತನದಿಂದ ಬಂದಿರುವ ಮಕ್ಕಳು ಹೆಚ್ಚಾಗಿ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವುದರಿಂದ ಅವರಿಗೆ ಅವಶ್ಯಕ ವಸ್ತುಗಳನ್ನು ಪೂರೈಸುವ ಕೆಲಸ ದಾನಿಗಳು ಮಾಡಬೇಕು ಎಂದು ಹೇಳಿದರು.
ಕಲ್ಕೆರೆ ಸರ್ಕಾರಿ ಶಾಲೆಗೆ ಚೇರು ಮತ್ತು ಟೇಬಲ್ ಗಳ ಅವಶ್ಯಕತೆ ಬಗ್ಗೆ ಶಿಕ್ಷಕರು ಮನವಿ ಮಾಡಿದ್ದು ಆದಷ್ಟು ಬೇಗ ಚೇರು ಹಾಗೂ ಟೇಬಲ್ ಗಳನ್ನು ನೀಡುತ್ತೇನೆ ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಸರ್ಕಾರ ವಿದ್ಯಾರ್ಥಿಗಳಿಗಾಗಿ ಹಲವು ಸೌಲಭ್ಯಗಳನ್ನು ನೀಡುತ್ತಿದ್ದು ಇದರ ಸದುಪಯೋಗ ಪಡೆಸಿಕೊಂಡು ಉನ್ನತ ವ್ಯಾಸಂಗ ಮಾಡಬೇಕು ಎಂದು ಪ್ರೇರೆಪಿಸಿದರು.
ಈ ಸಂದರ್ಭದಲ್ಲಿ ಎಸ್ ಡಿಎಂಸಿ ಅಧ್ಯಕ್ಷ ರಾಮ್ ಪ್ರಸಾದ್, ಬ್ಲಾಕ್ ಅಧ್ಯಕ್ಷ ಸಿ.ವೆಂಕಟೇಶ್, ಭೂ ನ್ಯಾಯ ಮಂಡಳಿ ಸದಸ್ಯ ಕಲ್ಕೆರೆ ಸುನೀಲ್, ವಾರ್ಡ್ ಅಧ್ಯಕ್ಷ ಸುಧನ್ವ, ಚನ್ನಸಂದ್ರ ವಾರ್ಡ್ ಆಕಾಂಕ್ಷಿ ರವಿ, ಮುಖಂಡರಾದ ಕಲ್ಕೆರೆ ನಾರಾಯಣಸ್ವಾಮಿ,ಕುಮಾರಣ್ಣ, ಅಗರ ಪ್ರಕಾಶ್, ಜಯಂತಿ ನಗರ ಮುನಿರಾಜು, ಪ್ರಸನ್ನ , ಸೋಮಶೇಖರ್, ಜ್ಯೋತಿನಗರ ಎಂ
ವೆಂಕಟೇಶ್, ಹೊರಮಾವು ಮಂಜುನಾಥ್, , ಕ್ಯಾಲಸನಹಳ್ಳಿ ಶ್ರೀನಿವಾದ್, ಮುಖ್ಯೋಪಧ್ಯಾಯರಾದ ರಿಯಾಜ್, ಉಮಾದೇವಿ, ಕನ್ಯಾಗಪ್ಪ ಹಾಗೂ ಶಿಕ್ಷಕರು ಇದ್ದರು..




























