
ನವದೆಹಲಿ.ಏ. ೨೮- ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಇರಾನ್ ನೀಡಿರುವ ಹೊಸ ಶಾಂತಿ ಪ್ರಸ್ತಾವನೆಗೆ ಅಸಮಾಧಾನ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ. ಎರಡು ತಿಂಗಳಿಂದ ಮುಂದುವರಿದಿರುವ ಪಶ್ಚಿಮ ಏಷ್ಯಾ ಯುದ್ಧಕ್ಕೆ ಅಂತ್ಯಕಾಣಿಸುವ ಉದ್ದೇಶದಿಂದ ಇರಾನ್ ಈ ಪ್ರಸ್ತಾವನೆ ನೀಡಿದರೂ, ಅದರಲ್ಲಿ ಪರಮಾಣು ಕಾರ್ಯಕ್ರಮವನ್ನು ನಂತರ ಚರ್ಚಿಸುವುದಾಗಿ ಸೂಚಿಸಿರುವುದು ಅಮೆರಿಕಾಗೆ ಒಪ್ಪಲಾಗದ ವಿಷಯವಾಗಿದೆ.
ಇರಾನ್ ನೀಡಿರುವ ಪ್ರಸ್ತಾವನೆಯ ಪ್ರಮುಖ ಅಂಶಗಳು
ಅಮೆರಿಕ-ಇಸ್ರೇಲ್ ದಾಳಿಗಳನ್ನು ನಿಲ್ಲಿಸಿ, ಭವಿಷ್ಯದಲ್ಲಿ ಮತ್ತೆ ದಾಳಿ ನಡೆಯದಂತೆ ಭದ್ರತಾ ಭರವಸೆ. ಹೊರ್ಮುಜ್ ಜಲಸಂಧಿ ತೆರೆಯುವುದು, ಹಾರ್ಮುಜ್ ಜಲಸಂಧಿ ಮೂಲಕ ಸಾಗುವ ಹಡಗುಗಳಿಗೆ ನಿರ್ಬಂಧ ತೆರವುಗೊಳಿಸಿ, ಸಮುದ್ರ ಮಾರ್ಗ ಸುರಕ್ಷತೆ.
ಸೇರಿದಂತೆ ಯುರೇನಿಯಂ ಸಂವರ್ಧನೆ ಸೇರಿದಂತೆ ಪರಮಾಣು ಕಾರ್ಯಕ್ರಮದ ಬಗ್ಗೆ ಮಾತುಕತೆ ನಂತರ ಹಂತದಲ್ಲಿ ನಡೆಸುವುದು. ವಿಷಯಕ್ಕೆ ಸಂಬಂಧಿಸಿದಂತೆ ಅಮೆರಿಕ ತೀವ್ರ ವಿರೋಧ ವ್ಯಕ್ತಪಡಿಸಿದೆ.ಅಮೆರಿಕ ಆಡಳಿತದ ಪ್ರಕಾರ, ಪರಮಾಣು ವಿಷಯವನ್ನು ಮುಂದೂಡುವುದು ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಅಧ್ಯಕ್ಷ ಡೊನಾಲ್ಡ್ ಸ್ಪಷ್ಟಪಡಿಸಿ “ಮೊದಲು ಪರಮಾಣು ಅಪಾಯ ನಿವಾರಣೆ ಆಗಬೇಕು” ಎಂದು ಹೇಳಿದ್ದಾರೆ.
ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕ್ ರುಬೀ ಯೋ ಕೂಡ ಇದೇ ನಿಲುವು ವ್ಯಕ್ತಪಡಿಸಿ“ಇರಾನ್ ಯಾವುದೇ ಸಂದರ್ಭದಲ್ಲಿ ಪರಮಾಣು ಶಸ್ತ್ರಾಸ್ತ್ರ ಅಭಿವೃದ್ಧಿಪಡಿಸಲು ಸಾಧ್ಯವಾಗದಂತೆ ಒಪ್ಪಂದ ಇರಬೇಕು” ಎಂದು ಹೇಳಿದರು.
ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿದ್ದ ಶಾಂತಿ ಮಾತುಕತೆಗಳನ್ನು ಅಮೆರಿಕ ರದ್ದುಗೊಳಿಸಿದೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅಘಾರ್‍ಚಿ ಪಾಕಿಸ್ತಾನ, ಓಮನ್ ಮತ್ತು ರಷ್ಯಾ ದೇಶಗಳಿಗೆ ಭೇಟಿ ನೀಡಿ ಬೆಂಬಲ ಕೋರಿದ್ದಾರೆ. ರಷ್ಯಾ ಅಧ್ಯಕ್ಷರೊಂದಿಗೆ ನಡೆದ ಮಾತುಕತೆಗಳಿಂದ ಹೊಸ ರಾಜತಾಂತ್ರಿಕ ಚಟುವಟಿಕೆಗಳು ಜೋರಾಗಿವೆ.ಸಂಯುಕ್ತ ರಾಷ್ಟ್ರಗಳ ಸಭೆಯಲ್ಲಿ ಕೂಡ ಅಮೆರಿಕ-ಇರಾನ್ ನಡುವಿನ ತೀವ್ರ ವಾಗ್ವಾದ ಕಂಡುಬಂದಿದೆ.ಇರಾನ್ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವುದನ್ನು ಅಮೆರಿಕ ವಿರೋಧಿಸಿದ್ದು, ರಷ್ಯಾ ಇರಾನ್ ಪರ ನಿಂತಿದೆ.
ಹೋರ್ಮುಜ್ ಜಲಸಂಧಿ ಮೂಲಕ ವಿಶ್ವದ ಸುಮಾರು ೨೦% ತೈಲ ಸಾಗಣೆ ನಡೆಯುತ್ತದೆ. ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಿದ ಹಿನ್ನೆಲೆಯಲ್ಲಿ ತೈಲ ಬೆಲೆಗಳಲ್ಲಿ ಭಾರೀ ಏರಿಕೆ, ಹಡಗು ಸಂಚಾರದಲ್ಲಿ ತೀವ್ರ ಕುಸಿತ ಜಾಗತಿಕ ತೈಲ ಸಾಗಾಣಿಕೆ ಏರಿಕೆಯಾಗಿದ್ದು,ಈಗ ದಿನಕ್ಕೆ ೧೦೦ಕ್ಕೂ ಹೆಚ್ಚು ಹಡಗುಗಳು ಸಾಗುತ್ತಿದ್ದ ಜಾಗದಲ್ಲಿ ಕೆಲವೇ ಹಡಗುಗಳು ಮಾತ್ರ ಸಂಚರಿಸುತ್ತಿವೆ.
ಈ ಹೊಸ ತಕರಾರು ಹಿನ್ನೆಲೆಯಲ್ಲಿ ಶಾಂತಿ ಮಾತುಕತೆಗಳ ಭವಿಷ್ಯ ಇನ್ನಷ್ಟು ಅನುಮಾನಾಸ್ಪದವಾಗಿದೆ. ಪರಮಾಣು ವಿಷಯವನ್ನು ಮೊದಲೇ ಪರಿಹರಿಸಬೇಕೆಂಬ ಅಮೆರಿಕಾ ನಿಲುವು ಮತ್ತು ಹಂತ ಹಂತವಾಗಿ ಪರಿಹಾರ ಬೇಕೆಂಬ ಇರಾನ್ ನಿಲುವು ನಡುವಿನ ಭಿನ್ನಾಭಿಪ್ರಾಯದಿಂದ ತಕ್ಷಣದ ಶಾಂತಿ ಸಾಧ್ಯತೆ ಕ್ಷೀಣವಾಗಿದೆ.ಇರಾನ್ ನೀಡಿದ ಹೊಸ ಶಾಂತಿ ಯೋಜನೆಗೆ ಅಮೆರಿಕಾ ವಿರೋಧ ವ್ಯಕ್ತಪಡಿಸಿದ್ದು, ಪರಮಾಣು ವಿಚಾರವೇ ಪ್ರಮುಖ ಅಡ್ಡಿಯಾಗಿದ್ದು, ಪಶ್ಚಿಮ ಏಷ್ಯಾದ ಉದ್ವಿಗ್ನತೆ ಮುಂದುವರಿಯುವ ಸೂಚನೆಗಳು ಸ್ಪಷ್ಟವಾಗಿವೆ.

























