
ಕಲಬುರಗಿ: ದೇವದಾಸಿ ಮಹಿಳೆಯರಿಗೆ ಮಾಸಿಕ 6 ಸಾವಿರ ರೂ ಪಿಂಚಣಿ ,ಅವರ ಕುಟುಂಬಕ್ಕೆ 5 ಎಕರೆ ನೀರಾವರಿ ಜಮೀನು ನೀಡುವದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಇಂದು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಜಿಲ್ಲಾ ಸಮಿತಿಯಿಂದ ನಿರಂತರ ಧರಣಿ ಆರಂಭಿಸಲಾಯಿತು.ಚಂದಮ್ಮ ಗೋಳಾ,ಸುಧಾಮ ಧನ್ನಿ, ಯಲ್ಲಮ್ಮ ನೀಲೂರ,ಬಿ.ಮಾಳಮ್ಮ ಅವರು ಸೇರಿದಂತೆ ಹಲವರು ಪಾಲ್ಗೊಂಡರು.




















