
ಕಲಬುರಗಿ: ನಗರದ ಪೊಲೀಸ್ ಆಯುಕ್ತಾಲಯ ಆವರಣದಲ್ಲಿಂದು ಕೆಕೆಆರ್‍ಡಿಬಿ ಅನುದಾನದಲ್ಲಿ ಪೊಲೀಸ್ ಇಲಾಖೆಗೆ ನೀಡಲಾದ ವಾಹನಗಳಿಗೆ ಗೃಹಸಚಿವ ಜಿ.ಪರಮೇಶ್ವರ ಅವರು ಹಸಿರು ನಿಶಾನೆ ತೋರಿಸಿದರು.ಡಾ.ಶರಣಪ್ರಕಾಶ ಪಾಟೀಲ,ಬಿ.ಆರ್ ಪಾಟೀಲ, ಅಲ್ಲಮಪ್ರಭು ಪಾಟೀಲ,ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ,ಕನೀಜ್ ಫಾತಿಮಾ,ಮಜರ್ ಆಲಂ ಖಾನ್ ಅವರು ಸೇರಿದಂತೆ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.






















