2025-26ನೇ ಸಾಲಿನ ತಾಲೂಕ ಪಂಚಾಯತ ಅನಿಬರ್ಂಧಿತ ಅನುದಾನದಲ್ಲಿ ಶೇ.5 ರಷ್ಟು ಮೀಸಲಿರಿಸಿದ ಅನುದಾನದಲ್ಲಿ ವಿಕಲಚೇತನರಿಗೆ ಬ್ಯಾಟರಿ ಚಾಲಿತ ಮೋಟರ್ ಬೈಕ್‍ಗಳನ್ನು ಧಾರವಾಡ ತಾಲೂಕ ವ್ಯಾಪ್ತಿಯ 09 ಜನ ದೈಹಿಕ ನ್ಯೂನ್ಯತೆ ಹೊಂದಿದ ವಿಕಲಚೇತನರಿಗೆ ಕಾರ್ಮಿಕ ಸಚಿವರು ಹಾಗೂ ಧಾರವಾಡ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ವಿತರಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಎನ್‍ಎಚ್.ಕೋನರಡ್ಡಿ, ಜಿಲ್ಲಾಧಿಕಾರಿ ಸ್ನೇಹಲ್ ಆರ್., ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಹಾಗೂ ಧಾರವಾಡ ತಾ.ಪಂ ಆಡಳಿತಾಧಿಕಾರಿ ಮಲ್ಲಿಕಾರ್ಜುನ ತೊದಲಬಾಗಿ, ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ ಕಂದಕೂರ ಹಾಗೂ ಇತರ ಮುಖಂಡರು, ವಿವಿದ್ದೋದ್ದೇಶ ಪುರ್ನವಸತಿ ಕಾರ್ಯಕರ್ತ ಬಸವರಾಜ ಬೆಳಾರದ ಹಾಗೂ ಇತರರು ಉಪಸ್ಥಿತರಿದ್ದರು.