
ಕಲಬುರಗಿ,ಏ.28-ಕಲಬುರಗಿ ರಂಗಾಯಣವು ಏ.7 ರಿಂದ ಮೇ.8ರವರೆಗೆ ರಂಗಾಯಣ ಆವರಣದಲ್ಲಿ ಆಯೋಜಿಸಿರುವ ಮಕ್ಕಳ ಹಬ್ಬ-2026 ಮಕ್ಕಳ ಬೇಸಿಗೆ ರಂಗ ತರಬೇತಿ ಶಿಬಿರದಲ್ಲಿ ಒಟ್ಟು 78 ಜನ ಮಕ್ಕಳು ದಾಖಲಾತಿ ಪಡೆದಿದ್ದು, ಏ.7 ರಿಂದ ಶಿಬಿರ ಪ್ರಾರಂಭವಾಗಿದೆ. ಮಕ್ಕಳಿಗೆ ಸಂಗೀತ ,ನೃತ್ಯ , ಮೈಮು, ನಾಟಕ, ತರಬೇತಿಗಳು ನೀಡಲಾಗುತ್ತಿದೆ. ಅದರ ಜೊತೆಗೆ ಪ್ರತಿ ದಿನ ಒಂದೊಂದು ಕಲಾ ಪ್ರಕಾರವಾದ ಅಂದರೆ ಹೆಜ್ಜೆ ಮೇಳ, ಡೊಳ್ಳು ಕುಣಿತ, ಜಾನಪದ ಜಾದು, ಕುಂಬಾರನ ಕಲೆ ಪ್ರದರ್ಶನ, ಮಕ್ಕಳಿಂದ ಕೈಗೊಂಬೆ, ಚಿತ್ರಕಲೆ, ಕ್ಲೇಮಾಡಲಿಂಗ್, ವಿವಿಧ ಕ್ಷೇತ್ರದ ಸಾಧಕರೊಂದಿಗೆ ಸಂವಾದ, ಮಕ್ಕಳಿಗೆ ಕಥಾವಾಚನ, ಮಕ್ಕಳಿಂದ ಕಥೆ ಹೇಳಿಸುವುದು ಹೀಗೆ ಎಲ್ಲಾ ಪ್ರಕಾರದ ಪರಿಚಯವನ್ನು ಮಕ್ಕಳಿಗೆ ಮಾಡಿಕೊಡಲಾಗುತ್ತಿದೆ ಅಂಧ ವಿಕಲಚೇತನರಾದ ಬಸವರಾಜ ಅವರು ತಮ್ಮ ಅಗಾಧವಾದ ಪಾಂಡಿತ್ಯದಿಂದ ಮಕ್ಕಳಿಗೆ ಗಣಿತ ವಿಷಯದ ಕುರಿತು ಸರಳವಾದ ಸೂತ್ರಗಳನ್ನು ಹೇಳಿದರು ಅಲ್ಲದೆ ಕಬ್ಬಿಣದ ಕಡಲೆಯಂತೆ ಇರುವ ಗಣಿತವನ್ನು ಹೇಗೆ ಸರಳಿಕರಿಸಿಕೊಂಡು ಅರಿತುಕೊಳ್ಳುಬೇಕು ಎಂಬುದರ ಬಗ್ಗೆ ಮಕ್ಕಳಿಗೆ ಮನನ ಮಾಡಿಸಿದರು.
ನಾಗನಾಥ ಯಾದಗಿರ ಅವರು ಮಕ್ಕಳಿಗೆ ಸ್ಥಳೀಯ ಪಕ್ಷಿಗಳು ಹಾಗೂ ಕಲಬುರಗಿಗೆ ಬರುವ ಬೇರೆ ಬೇರೆ ರಾಜ್ಯಗಳಿಂದ, ಬೇರೆ ಬೇರೆ ದೇಶಗಳಿಂದ, ಬೇರೆ ಬೇರೆ ಖಂಡಗಳಿಂದ ಬರುವ ಪಕ್ಷಿಗಳ ಪರಿಚಯ ಮಾಡಿಕೊಟ್ಟರು. ಪಕ್ಷಿ ಪ್ರಪಂಚದ ವಿಚಿತ್ರ ಸಂಗತಿಗಳನ್ನು ಮಕ್ಕಳಿಗೆ ಪರಿಚಯಿಸಿದರು. ಅಗ್ನಿ ಶಾಮಕದಳದವರನ್ನು ಕರೆಯಿಸಿ ಅಗ್ನಿ ದುರಂತ ನಡೆದರೆ ಮೊದಲು ಏನು ಮುನ್ನೆಚ್ಚರಿಕೆ ತಗೆದುಕೊಳ್ಳಬೇಕು, ಬೆಂಕಿಯನ್ನು ಯಾವರೀತಿ ನಂದಿಸಬೇಕು ಎಂದು ಪ್ರಾತ್ಯಕ್ಷತೆ ನೀಡಿ ಮಕ್ಕಳಿಗೆ ಅರಿವು ನೀಡಿದರು ಮತ್ತು ಈiಡಿe ಇಟಿgiಟಿe ನಲ್ಲಿ ಇರುವ ನೀರನ್ನು ಕಾರಂಜಿ ತರ ನೀರು ಬಿಟ್ಟು ಅದರಲ್ಲಿ ಮಕ್ಕಳು ಬಣ್ಣದ ಆಡವಾಡಿ
ಸಂಭ್ರಮಿಸಿದರು. ಮಕ್ಕಳಿಗೆ ಸ್ಥಳಿಯ ಪ್ರೇಕ್ಷಣಿಯ ಮತ್ತು ಐತಿಹಾಸಿಕ ಸ್ಥಳಗಳ ಕಿರುಚಿತ್ರ ಮತ್ತು ಮಕ್ಕಳಿಗಾಗಿಯೆ ಸಿದ್ದಪಡಿಸಿದ ಕೆಲವು ಅಪರೂಪದ ಕಿರುಚಿತ್ರಗಳನ್ನು ಪ್ರದರ್ಶಿಸಲಾಯಿತು. ಈ ಮೊದಲು ಎಲ್ಲಾ ಹಳ್ಳಿಗಳಲ್ಲಿ ಮಣ್ಣಿನ ಗಡುಗಿಯಲ್ಲಿ ಆಹಾರ ತಯಾರಿಸಲಾಗುತ್ತಿತ್ತು ಕ್ರಮೇಣವಾಗಿ ಮಣ್ಣಿನ ಮಡಿಕೆಗಳ ಬದಲು ಜರ್ಮನ್, ಸ್ಟೀಲ್ ಪಾತ್ರಗಳು ಬಂದವು ಆದ್ದರಿಂದ ಮಕ್ಕಳಿಗೆ ಮಣ್ಣಿನ ಗಡುಗಿಗಳ ಮಹತ್ವವನ್ನು ತಿಳಿಸಲು ಮಣ್ಣಿನ ಗಡುಗೆಯಲ್ಲಿ ಅಡುಗೆಯ ರೂಪದಲ್ಲಿ ಮಕ್ಕಳಿಂದ ಮಣ್ಣಿನ ಗಡುಗೆಯಲ್ಲಿ ವಿವಿಧ ತರಹದ ಅಂದರೆ ಪಲಾವ್, ಸುಸಲಾ, ಅವಲಕ್ಕಿ, ಚಿತ್ರಾನ್ನ , ಮ್ಯಾಗಿ, ಮಾಲ್ದಿ, ಹಪ್ಪಳ, ಆಲೂಬಾತ್, ಟಮೊಟ ಬಾಥ್,
ಚೂಡಾ, ಮಜ್ಜಿಗೆ ಮತ್ತು ಪಾಯಸ, ಸೀರಾ, ನಿಂಬೆಹಣ್ಣ ಪಾನಕ, ಲಸ್ಸಿ, ಮೊಸರನ್ನ, ಮಾವಿನ ಹಣ್ಣಿನ ಜ್ಯೂಸ ಅನೇಕ ರೀತಿಯ ತಿಂಡಿ ತಿನಿಸುಗಳನ್ನು ಅಡುಗೆ ಮಾಡಿದ ರುಚಿಕರ ಆಹಾರವನ್ನು ಬಂದ ಸಾರ್ವಜನಿಕರು, ಮಕ್ಕಳ ಪಾಲಕರು, ಇಲಾಖೆಯ ಜಂಟಿ ನಿರ್ದೇಶಕರು, ರಂಗಾಯಣದ ನಿರ್ದೇಶಕರು, ರಂಗಾಯಣದ ಆಡಳಿತಾಧಿಕಾರಿಗಳು, ಶಿಬಿರದ ಸಂಪನ್ಮೂಲ ವ್ಯಕ್ತಿಗಳು ಮತ್ತು ಸಿಬ್ಬಂದಿಗಳು ಮಕ್ಕಳಿಂದ ಸಿದ್ದವಾದ ಆಹಾರ ಸವಿದು ಮಕ್ಕಳೊಂದಿಗೆ ಸಂಭ್ರಮಿಸಿದರು.
ಮಕ್ಕಳ ವ್ಯವಹಾರಿಕ ಜ್ಞಾನ ವೃದ್ಧಿಯಾಗಲು ಮಕ್ಕಳಿಂದ ಸಂತೆ ಆಯೋಜಿಸಿ ಆ ಸಂತೆಯಲ್ಲಿ ಅವರು ವಿವಿಧ ಸಾಮಾಗ್ರಿ ಅಂದರೆ ಹಣ್ಣು, ತರಕಾರಿ, ಪಾನಿಪೂರಿ, ಮಜ್ಜಿಗೆ, ಜೂಸ್, ಕಿರಾಣಿ ಸಾಮಾಗ್ರಿ, ಸ್ಟೇಷನರಿ ಸಾಮಾಗ್ರಿ, ಪುಸ್ತಕಗಳು ಮತ್ತು ಇತ್ಯಾದಿ ಸಾಮಾಗ್ರಿಗಳ ಮಾರಾಟ ಮಾಡುವುದು. ಅಲ್ಲಿ ಬಂದ ಸಾರ್ವಜನಿಕರು, ಪಾಲಕರು ಮಕ್ಕಳಿಂದ ವಿವಿಧ ರೀತಿಯ ಸಾಮಗ್ರಿಗಳನ್ನು ಖರೀದಿಸುವುದಾಗಿದೆ. ಈ ಸಂತೆಯಲ್ಲಿ ಸಂಪನ್ಮೂಲ ವ್ಯಕ್ತಿಗಳು ವಿವಿಧ ವೇಷಭೂಷಣಗಳನ್ನು ಹಾಕಿಕೊಂಡು ಸಂತೆಯಲ್ಲಿ ಅವರ ಅಭಿನಯದೊಂದಿಗೆ ಅಲ್ಲಿ ಬಂದ ಜನರಿಗೆ ಮತ್ತು ಮಕ್ಕಳಿಗೆ ಮನೋರಂಜನೆ ಮಾಡಲಾಗಿದೆ ಕೊನೆಯಲ್ಲಿ ಮಕ್ಕಳಿಂದ ಸಿದ್ದವಾಗುವ 5 ನಾಟಕಗಳು ಮತ್ತು ಒಂದು ಬಯಲಾಟ ಹಾಗೂ ಸಂಗೀತ, ನೃತ್ಯಗಳನ್ನು ಶಿಬಿರದ ಸಮಾರೋಪ ಸಮಾರಂಭದಲ್ಲಿ ಪ್ರದರ್ಶಿಸಲಾಗುತ್ತದೆ. ಈ ಎಲ್ಲಾ ಚಟುವಟಿಕೆಗಳು ಮಾನ್ಯ ನಿರ್ದೆಶಕರಾದ ಡಾ.ಸುಜಾತಾ ಜಂಗಮಶೆಟ್ಟಿ, ಕಲಬುರಗಿ ವಲಯ ಜಂಟಿ ನಿರ್ದೇಶಕರಾದ ಬಸವರಾಜ ಹೂಗಾರ ಹಾಗೂ ಆಡಳಿತಾಧಿಕಾರಿಗಳಾದ ಸಿದ್ರಾಮ ಸಿಂಧೆ ಅವರ ಮಾರ್ಗದರ್ಶನದಲ್ಲಿ ಹಾಗೂ ರಾಜಕುಮಾರ ಎಸ್.ಕೆ ಸಂಚಾಲಕತ್ವದಲ್ಲಿ ರೆಪರ್ಟರಿ ಕಲಾವಿದರು ಶ್ರದ್ಧೆಯಿಂದ ಮಕ್ಕಳಿಗೆ ತರಬೇತಿ ನೀಡಿರುವುದರಿಂದ ಈ ತರಬೇತಿ ಯಶಸ್ವಿಯಾಗಿ ಮುಕ್ತಾಯಗೊಳ್ಳುತ್ತಿದೆ ಕೆಲವೆ ದಿನಗಳಲ್ಲಿ ಸಮಾರೋಪ ಸಮಾರಂಭ ಜರುಗಲಿದೆ.






















