Home ಜಿಲ್ಲೆ ಕಲಬುರಗಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರೈತರಿಗೆ ತರಬೇತಿ

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರೈತರಿಗೆ ತರಬೇತಿ

ಕಲಬುರಗಿ,ಆ.13:2026-27ನೇ ಸಾಲಿನಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಕಲಬುರಗಿ ಕೋಟನೂರ(ಡಿ) ಜಿಲ್ಲಾ ಕೃಷಿ ತರಬೇತಿ ಕೇಂದ್ರ ಹಾಗೂ ಕಲಬುರಗಿ ಕೃಷಿ ತಂತ್ರಜ್ಞರ ಸಂಸ್ಥೆ ಇವುಗಳ ಸಹಯೋಗದೊಂದಿಗೆ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಇತ್ತೀಚೆಗೆ ರೈತರಿಗೆ ಹಮ್ಮಿಕೊಳ್ಳಲಾಗಿದ್ದ ಮೂರು ದಿನದ ತರಬೇತಿ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.
ಸೇಡಂ ಉಪ ಕೃಷಿ ನಿರ್ದೇಶಕರು-2 ರಾದ ಅನಸೂಯ ಹೂಗಾರ ಅವರು ಈ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕಲಬುರಗಿ ಐ.ಎ.ಟಿ ಸಲಹೆಗಾರರು ಹಾಗೂ ವಲಯ ಕೃಷಿ ಸಂಶೋಧನಾ ಕೇಂದ್ರದ ನಿವೃತ್ತ ವಿಜ್ಞಾನಿಗಳಾದ ಆರ್.ಸಿ. ಗುಂಡಪ್ಪಗೋಳ ಹಾಗೂ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರು ಮತ್ತು ಮುಖ್ಯಸ್ಥರಾದ ಅನಿಲಕುಮಾರ ರಾಠೋಡ ಅವರು. ಈ 3 ದಿನಗಳ ತರಬೇತಿಯಲ್ಲಿ ಅಣಬೆ ಕೃಷಿಯ ಪರಿಚಯ, ಪ್ರಾಮುಖ್ಯತೆ, ಬೇಸಾಯ ಪದ್ಧತಿ, ಅಣಬೆ ಮೌಲ್ಯವರ್ಧನೆ, ಮಾರಾಟ ವ್ಯವಸ್ಥೆ ಮತ್ತು ಇತರೆ ವಿಷಯಗಳ ಬಗ್ಗೆ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ಇಬ್ಬನಿ ಆರ್ಗಾನಿಕ ಮಶ್ರೂಮ್ಸನ್ ರೋಶನಕುಮಾರ, ಅರುಣಕುಮಾರ, ನವ ಭಾರತ ಫಾರಂನ ಅರವಿಂದ.ಎಸ್.ಮೆಂತ್ರೆ, ಮೈರಾಡ್ ಆರ್ಗನೈಜೇಶನ್‍ನ ಸಿನಿಯರ್ ಮ್ಯಾನೇಜರ್ ತಾಜುದ್ಧೀನ್, ಕಮಲಾಪೂರ ಪ್ರಗತಿಪರ ರೈತ ಮಹಾದೇವ ಓಕಳಿ, ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕೇಸರಕೊಪ್ಪನ ಮೈಕೋ ಮ್ಯಾಜಿಕ್ ಮಶ್ರೂಮ್ ಫಾರ್ಮ್‍ನ ರಾಕೇಶ.ಬಿ.ಕಂಬಾರ, ಕೃಷಿ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ಭವಾನಿ, ಪ್ರಗತಿಪರ ರೈತ ಶರಣಬಸಪ್ಪ ಪಾಟೀಲ್, ಸೇರಿದಂತೆ ಮತ್ತಿತರ ಅಣಬೆ ಬೆಳೆಗಾರರು ತರಬೇತಿ ನೀಡಿದರು. ರೈತರು ತರಬೇತಿಯ ಲಾಭ ಪಡೆದುಕೊಂಡರು.
ಸಹಾಯಕ ಕೃಷಿ ನಿರ್ದೇಶಕರು (ರೈ.ಮ) ನೀಲಕ್ಕಾ.ಎನ್ ನರಸಲಗಿ ಸ್ವಾಗತಿಸಿದರು. ಕೃಷಿ ಅಧಿಕಾರಿ ಪ್ರಿಯಾಂಕ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಕೃಷಿ ಅಧಿಕಾರಿ ಯಾಸ್ಮೀನ್ ವಂದಿಸಿದರು.