
ಅಫಜಲಪುರ,ಜು 6 ; ದೇವಲ ಗಾಣಗಾಪುರ ಪೆÇಲೀಸ್‍ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ 2 ಪ್ರತ್ಯೇಕ
ಸರಗಳ್ಳತನ ಪ್ರಕರಣಗಳನ್ನು ಪೆÇಲೀಸರು ಬೇಧಿಸಿದ್ದು, ಮೂವರು ಅಂತರರಾಜ್ಯ ಕಳ್ಳರನ್ನು ಬಂಧಿಸಿ 40 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಸೋಲಾಪುರ ರಸ್ತೆಯ ಜೋಪಡಿ ಪಟ್ಟಿ ನಿವಾಸಿಗಳಾದ ಭಗತ್ ಸಿಂಗ್ ಅಶೋಕ ಸಾಳುಂಕೆ, ಬಾದಲ್ ಅಶೋಕ
ಸಾಳುಂಕೆ ಹಾಗೂ ಅಭಿಮನ್ಯು ಅರ್ಜುನ ಡಾಂಗೆಯನ್ನು ಬಂಧಿಸಲಾಗಿದೆ ಎಂದು ಪೆÇಲೀಸ್ ಇಲಾಖೆ ಪ್ರಕಟಣೆಯಲ್ಲಿತಿಳಿಸಿದೆ.2025ರ ನವೆಂಬರ್ 5 ರಂದು ದೇವಲಗಾಣಗಾಪುರ ಬಸ್ ನಿಲ್ದಾಣದಲ್ಲಿ ಅಶ್ವಿನಿ ಎಂಬ ಮಹಿಳೆಯ 20 ಗ್ರಾಂ ತೂಕದ ಬಂಗಾರದ ತಾಳಿ ಸರ ಕಳ್ಳತನವಾಗಿತ್ತು. 2026ರ ಫೆಬ್ರವರಿ 16 ರಂದು
ದೇವಲ ಗಾಣಗಾಪುರ ಗ್ರಾಮದ ಸಂಗಮದ ಭೀಮಾನದಿ ದಂಡೆಯ ಮೇಲೆ ಕಲ್ಯಾಣಕ್ಕೆ ಬಂದಿದ್ದ ಕಲಾವತಿ
ಎಂಬುವವರ 20 ಗ್ರಾಂ ಚಿನ್ನದ ತಾಳಿ ಸರ, 10 ಗ್ರಾಂ ತಾಳೆಗುಂಡು ಹಾಗೂ 10 ಗ್ರಾಂ ಜೋರಮಾಳ ಸೇರಿ ಒಟ್ಟು 40 ಗ್ರಾಂ ಚಿನ್ನಾಭರಣವನ್ನು ಕಳ್ಳರು ದೋಚಿ ಪರಾರಿಯಾಗಿದ್ದರು.
ಸತತವಾಗಿ ನಡೆಯುತ್ತಿದ್ದ ಕಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಅಡ್ಡೂರು
ಶ್ರೀನಿವಾಸುಲು ಹಾಗೂ ಎಎಸ್ಪಿ ಮಹೇಶ ಮೇಘಣ್ಣವರ ವಿಶೇಷ ತಂಡ ರಚಿಸಲಾಗಿತ್ತು. ಡಿವೈಎಸ್ಪಿ ತಮ್ಮರಾಯ ಪಾಟೀಲ್ ಹಾಗೂ ಸಿಪಿಐ ಲಖನ್ ಮಸಗುಪ್ಪಿನೇತೃತ್ವದಲ್ಲಿ ದೇವಲ ಗಾಣಗಾಪುರ ಠಾಣೆಯ ಪಿಎಸ್‍ಐ ಸಂಗೀತಾ ಸಿಂಧೆ ಹಾಗೂ ಸಿಬ್ಬಂದಿ ರವೀಂದ್ರ, ಸಂಗಣ್ಣಮಕ್ತುಂ ಪಟೇಲ್, ಶಿವಯ್ಯ, ಅಣ್ಣಪ್ಪ, ಚಿದಾನಂದ, ಆನಂದ,
ಯಲ್ಲಪ್ಪ, ಚಿದಾನಂದ, ಸಂತೋಷ, ಭಾಗಣ್ಣ ಒಳಗೊಂಡತಂಡವು ತನಿಖೆ ಕೈಗೊಂಡು ಮೂವರುಕಳ್ಳರನ್ನು ಬಂಧಿಸಿದ್ದಾರೆ.





























