Home ಜಿಲ್ಲೆ ಬೆಂಗಳೂರು ರಕ್ತದಾನಕ್ಕಿಂತ ಮಿಗಿಲಾದ ದಾನವಿಲ್ಲ: ಗುರುಮಂಜುನಾಥ್

ರಕ್ತದಾನಕ್ಕಿಂತ ಮಿಗಿಲಾದ ದಾನವಿಲ್ಲ: ಗುರುಮಂಜುನಾಥ್

ವಿಜಯಪುರ.ಸೆ.೧೦ – ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ವಿಜಯಪುರ ಸಮುದಾಯ ಆರೋಗ್ಯ ಕೇಂದ್ರ, ಪ್ರಗತಿ ಸಮೂಹ ಶಿಕ್ಷಣ ಸಂಸ್ಥೆ, ರೋಟರಿ ಕ್ಲಬ್ ವಿಜಯಪುರ ಹಾಗೂ ವಿವಿಧ ಸಂಘ-ಸಂಸ್ಥೆಗಳು ಮತ್ತು ಸಾರ್ವಜನಿಕರ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಯಿತು.


ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಗುರುಮಂಜುನಾಥ್,ರಕ್ತದಾನವೇ ಜೀವದಾನ. ಜೀವಾಪಾಯದಲ್ಲಿರುವ ಹಾಗೂ ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಗಳಿಗೆ ಮತ್ತು ಅಪಘಾತ ಪೀಡಿತರಿಗೆ ನಾವು ನೀಡುವ ಒಂದು ಯೂನಿಟ್ ರಕ್ತವು ಹೊಸ ಜೀವವನ್ನು ನೀಡುತ್ತದೆ. ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ಕಾಲಕಾಲಕ್ಕೆ ರಕ್ತದಾನ ಮಾಡುವ ಮೂಲಕ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕುಎಂದು ಕರೆ ನೀಡಿದರು.


ರಕ್ತದಾನ ಶಿಬಿರದಲ್ಲಿ ಪ್ರಗತಿ ಪ್ರಥಮ ದರ್ಜೆ ಕಾಲೇಜು ಮತ್ತು ಐಟಿಐ ಕಾಲೇಜಿನ ಯುವ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರು ಅತ್ಯಂತ ಉತ್ಸಾಹದಿಂದ ಭಾಗವಹಿಸಿ ರಕ್ತದಾನ ಮಾಡಿದರು. ಒಟ್ಟಾರೆಯಾಗಿ ೨೯ ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.


ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಾಜು, ಆರೋಗ್ಯ ಸಹಾಯಕರಾದ ಕುಮಾರಿ, ಸರಸಮ್ಮ ಮತ್ತು ಲೀಲಾವತಿ, ಲಾಬ್ ಟೆಕ್ನಿಷಿಯನ್‌ಗಳಾದ ದಿವ್ಯ, ಮಂಜುನಾಥ್ ಹಾಗೂ ಫಾರ್ಮಸಿಸ್ಟ್‌ಗಳಾದ ಕುಮುದ, ಬಿಂದು, ಮತ್ತು ಎಕ್ಸ್-ರೇ ಟೆಕ್ನಿಷಿಯನ್ ರಾಜೇಶ್ವರಿ, ಐಸಿಟಿಸಿ ಕನ್ಸಲ್ಟೆಂಟ್ ಸುಮಾ ಪ್ರಗತಿ ಕಾಲೇಜಿನ ಶೆಟ್ಟಿ ನಾಂiiಕ್‌ಹಾಗೂ ಸಿಬ್ಬಂದಿ ವರ್ಗದವರಾದ ವೀರೇಶ್, ವರಲಕ್ಷ್ಮಿ, ಕಲಾವತಿ ಸೇರಿದಂತೆ ಪ್ರಗತಿ ಸಂಸ್ಥೆಯ ನಿಯೋಜಿತ ಅಧಿಕಾರಿಗಳು, ಶಿಕ್ಷಕ ವೃಂದದವರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು ಶಿಬಿರದ ಯಶಸ್ಸಿಗೆ ಸಹಕರಿಸಿದರು.