Home ಜಿಲ್ಲೆ ಬೆಂಗಳೂರು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಸರ್ಮಪಕವಾಗಿ ಇಲ್ಲ ಔಷಿಧಿ ದಾಸ್ತಾನು

ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಸರ್ಮಪಕವಾಗಿ ಇಲ್ಲ ಔಷಿಧಿ ದಾಸ್ತಾನು

oplus_4194304

ಕೆಜಿಎಫ್:ಸೆ:೨: ಆಯುಶ್ಮನ ಭಾರತ್ ಯೋಜನೆಯಡಿ ರೋಗಿಗಳಿಗೆ ಅಪರೇಷನ್ ಮಾಡಿದ ವೈದ್ಯರಿಗೆ ನೀಡಲಾಗುವ ಗೌರವ ಧನವನ್ನು ವೈದ್ಯರಿಗೆ ನೀಡದೆ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಬೇರೆ ಕೆಲಸಗಳಿಗೆ ಬಳಕೆ ಮಾಡುತ್ತಿದ್ದಾರೆ ಎಂಬ ಅಸಮಾಧನವನ್ನು ಹೊರಗೆ ಹೇಳಲು ಇಚ್ಚಿಸದ ವೈದ್ಯರು ಅಳಲು ತೋಡಿಕೊಳ್ಳುತ್ತಿದ್ದಾರೆ ಇನ್ನು ರಾತ್ರಿ ಪಾಳಯದಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರಿಗೆ ಸಮರ್ಪಕವಾದ ಔಷದಿಗಳನ್ನು ನೀಡದಿರುವುದರಿಂದ ತುರ್ತುಗಿ ಚಿಕಿತ್ಸೆಗೆಂದು ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಪರದಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.


ರೋಗಿಗಳು ಹಗಲು ಹೋತ್ತಿನಲ್ಲಿ ಖಾಸಗಿ ನರ್ಸಿಂಗ್ ಹೋಮ್‌ಗಳಿಗೆ ತೆರಳಿ ಚಿಕಿತ್ಸೆ ಪಡೆಯುವ ಅವಕಾಶ ವಿದ್ದರು ರಾತ್ರಿ ೯ ಗಂಟೆ ನಂತರ ನಗರದ ಎಲ್ಲಾ ನರ್ಸಿಂಗ್ ಹೋಮ್ ಗಳನ್ನು ಮುಚ್ಚುವುದರಿಂದ ಅನಿವಾರ್‍ಯ ವಾಗಿ ನಗರ ಪ್ರಧೇಶ ಸೇರಿದಂತೆ ಕರ್ನಾಟಕ ಗಡಿ ಭಾಗದಲ್ಲಿ ವಾಸಿಸುವ ಜನರು ಅವಲಂಭಿಸಿದ್ದಾರೆ ಆದರೆ ರೋಗಿಗಳು ಬಂದ ವೇಳೆ ಸಮರ್ಪಕವಾಗಿ ಇಜೆಕ್ಷನ್ ಹಾಗೂ ಔಷಧಿಗಳು ಲಭ್ಯವಿಲ್ಲದಿರುವುದರಿಂದ ವೈದ್ಯರು ಚಿಕಿತ್ಸೆ ನೀಡಲು ಪರದಾಟ ನಡೆಸಬೇಕಾದ ಪರಿಸ್ಥಿತಿ ತಲೆ ದೊರಿದೆ.


ಆಯುಷ್ಮನ್ ಯೋಜನೆಯಡಿ ತುರ್ತು ಪರಿಸ್ಥಿತಿಯಲ್ಲಿ ರೋಗಿಗಳಿಗೆ ಚಿಕಿತ್ಸೆ ಮಾಡಿದ ಸಂದರ್ಭದಲ್ಲಿ ವೈದ್ಯರಿಗೆ ಗೌರವ ಧನವನ್ನು ನೀಡಲಾಗುತ್ತದೆ ಆದರೆ ಇಲ್ಲಿ ಗೌರವ ಧನವನ್ನು ನೀಡುತ್ತಿಲ್ಲ ಕೇಳಿದರೆ ನಿಮ್ಮ ಹಣವನ್ನು ಹಿಂದೆ ಸಾಲ ಮಾಡಿರುವುದಕ್ಕೆ ಬಳಸಲಾಗುತ್ತಿದೆ ಎಂಬ ಮಾತುಗಳನ್ನು ಆಡಳಿತಾಧಿಕಾರಿಗಳು ಹೇಳುತ್ತಿದ್ದಾರೆ ಎಂಬ ಅಳಲನ್ನು ಹೆಸರು ಹೇಳಲು ಇಚ್ಚಿಸದ ಕೆಲವು ವೈದ್ಯರು ಖಾಸಗಿಯಾಗಿ ತೊಡಿಕೊಳ್ಳುತ್ತಿದ್ದಾರೆ ವೈಧ್ಯರಿಗೆ ನೀಡಬೇಕಾದ ಗೌರವ ಧನವನ್ನು ನೀಡಲು ಏಕೆ ಆಡಳಿತಾಧಿಕಾರಿ ಡಾ:ಸುರೇಶ್‌ಕುಮಾರ್ ರವರಿಗೆ ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.


ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯನ್ನು ಅಭಿವೃದ್ಧಿಪಡಿಸುವತ್ತ ಹೆಚ್ಚಿನ ಕಾಳಜಿವಹಿಸಿ ಕೋಟ್ಯಾಂತರ ಅನುದಾನವನ್ನು ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಆದರೆ ಆಸ್ಪತ್ರೆ ಒಳಗೆ ನಡೆಯುತ್ತಿರುವ ಘಟನೆಗಳನ್ನು ಸಹ ತಿಳಿದುಕೊಂಡು ಮದ್ದು ಅರಿಯಬೇಕಿದೆ.


ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ವೇಳೆ ಹೊಸ ದ್ವಜ ಸ್ಥಂಭಕ್ಕಾಗಿ ಹಣವನ್ನು ವೆಚ್ಚ ಮಾಡಿ ತಯಾರು ಮಾಡಿದರು ಸಹ ದ್ವಜ ಸ್ಥಂಭವನ್ನು ಬಳಕೆ ಮಾಡಲಿಲ್ಲ ಆದರು ದ್ವಜ ಸ್ಥಂಭಕ್ಕೆ ತಗುಲಿದ ವೆಚ್ಚವನ್ನು ಡ್ರಾ ಮಾಡಲು ತಂತ್ರವನ್ನು ರೂಪಿಸಲಾಗುತ್ತಿದೆ ಎನ್ನಲಾಗುತ್ತಿದೆ ಆದ್ದರಿಂದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಅಭಿವೃದ್ಧಿಗೆ ಪ್ರತಿ ತಿಂಗಳು ಬರುವ ಅನುದಾನ ಎಷ್ಟು ವಿನಿಯೋಗವಾಗುವ ಹಣ ಎಷ್ಟು ಎಂಬುದನ್ನು ಅಧಿಕಾರಿಗಳು ತನಿಖೆ ನಡೆಸಬೇಕಿದೆ.