
ಕೆಜಿಎಫ್:ಜೂ:೩: ಕಳೆದ ೧ ವರ್ಷದಿಂದ ಬಿಜಿಎಂಎಲ್ ಭಾಗದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು ನಮ್ಮ ಹಿರಿಯರು ಬಿಟ್ಟುಹೊಗಿರುವ ಆಸ್ತಿಗಳನ್ನು ಕಾಪಾಡಿಕೊಂಡು ಹೋಗಬೇಕು ಎಂಬ ದೃಷ್ಠಿಯಿಂದ ಸೇವ್ ಕೆಜಿಎಫ್ ಸಮಿತಿ ಕೆಲಸ ಮಾಡುತ್ತಿದೆ ಹೋರತು ಯಾವುದೇ ಪ್ರತಿಫಲವನ್ನು ಅಪೇಕ್ಷೆ ಪಡುವುದಿಲ್ಲ ಎಂದು ವಕೀಲ ಸಿಪಿಐ ಪಕ್ಷದ ಮುಖಂಡ ಜ್ಯೊತಿಬಸು ಹೇಳಿದರು.
ವಕೀಲ ಸೇವ್ ಕೆಜಿಎಫ್ ಸಮಿತಿ ಅಧ್ಯಕ್ಷ ಜ್ಯೊತಿಬಸು ರವರ ತಂದೆ ರಾಮಸ್ವಾಮಿ ರವರ ೫ ನೇ ವರ್ಷದ ಪುಣ್ಯಸ್ಮರಣೆ ದಿನದ ಕಾರ್ಯಕ್ರಮದಲ್ಲಿ ಬಿಜಿಎಂಎಲ್ ಕಾರ್ಮಿಕ ಹೋರಾಟಗಾರ ರಾಮಸ್ವಾಮಿ ರವರ ಭಾವಚಿತ್ರವನ್ನು ಅನಾವರಣಗೊಳಿಸಿ ಮಾತನಾಡಿದ ವಕೀಲ ಸೇವ್ ಕೆಜಿಎಫ್ ಸಮಿತಿ ಅಧ್ಯಕ್ಷ ಜ್ಯೋತಿ ಬಸು ಬಿಜಿಎಂಎಲ್ ಕಾರ್ಖಾನೆ ಉತ್ತಮವಾಗಿ ನಡೆಯುತ್ತಿದ್ದ ಸಂದರ್ಭದಲ್ಲಿ ಮಾರಿಕುಪ್ಪಂ ಭಾಗದಲ್ಲಿ ಮೂಲಭೂತ ಸಮಸ್ಯೆಗಳಿಗೆ ಕೊರತೆ ಕಂಡು ಬಂದಿರಲಿಲ್ಲ ಆದರೆ ಬಿಜಿಎಂಎಲ್ ಕಾರ್ಖಾನೆ ನಷ್ಟದ ಕಾರಣವನ್ನು ನೀಡಿ ಬೀಗ ಹಾಕಿದ ನಂತರ ಬಿಜಿಎಂಎಲ್ ಭಾಗದಲ್ಲಿ ಮೂಲಭೂತ ಸೌಕರ್ಯಗಳ ಕೋರತೆ ಕಾಡುತ್ತಿದೆ ನಗರಸಭೆಯಿಂದ ಕೈಗೊಳ್ಳಬೇಕಾದ ಅಭಿವೃದ್ಧಿ ಕೆಲಸಗಳು ನೆನೆಗುದಿಗೆ ಬಿದ್ದಿರುವುದರಿಂದ ಬಿಜಿಎಂಎಲ್ ಭಾಗದ ವಾರ್ಡ್‌ಗಳಲ್ಲಿ ಕಳ್ಳಿ ಗಿಡಗಳು ಬೆಳೆದು ನಿಂತಿದ್ದು ಹಾವು ಚೇಳುಗಳ ಕಾಟದಿಂದ ಜನರು ಬೇಸೆತ್ತು ಹೋಗಿದ್ದಾರೆ ಆದ್ದರಿಂದ ನಗರಸಭೆ ಅಧಿಕಾರಿಗಳು ಬಿಜಿಎಂಎಲ್ ಭಾಗದಲ್ಲಿ ಕಸಗಳನ್ನು ತೆರವುಗೊಳಿಸಲು ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಬಿಜಿಎಂಎಲ್ ಭಾಗ ಸೇರಿದಂತೆ ಕ್ಷೇತ್ರದಲ್ಲಿನ ಹಲವು ಕೆಲಸಗಳನ್ನು ತ್ವರಿತವಾಗಿ ಕೈಗೊಳ್ಳುವ ಮೂಲಕ ಕ್ಷೇತ್ರವನ್ನು ಅಭಿವೃದ್ಧಿಪಥದತ್ತ ಮುನ್ನೆಡೆಸುವ ನಿಟ್ಟಿನಲ್ಲಿ ಸೇವ್ ಕೆಜಿಎಫ್ ಸಮಿತಿ ರಚನೆಯಾಗಿದ್ದು ನಮ್ಮ ಹೋರಾಟದ ಫಲವಾಗಿ ಕೋಲಾರ ಸಂಸದ ಮಲ್ಲೇಶಬಾಬು ಉರಿಗಾಂ ಜಿಮ್ಕಾನ ಮೈದಾನವನ್ನು ಕ್ರೀನ್ ಮಾಡುವ ಕೆಲಸ ಮಾಡಲಾಗುತ್ತಿದೆ ನಂತರ ಬಾಂಬೆ ಮೈಧಾನ ಸಹ ಕ್ರೀನ್ ಮಾಡಲಾಗುವುದು ಎಂಬ ಆಶ್ವಾಸನೆಯನ್ನು ಸಂಸದರು ನೀಡಿದ್ದಾರೆ ಎಂದು ಹೇಳಿದರು.





























