Home ಜಿಲ್ಲೆ ಕಲಬುರಗಿ ನಾಳೆಯಿಂದ ಮಹಾದೇವಿಯಕ್ಕಗಳ ಸಮ್ಮೇಳನ

ನಾಳೆಯಿಂದ ಮಹಾದೇವಿಯಕ್ಕಗಳ ಸಮ್ಮೇಳನ

ಕಲಬುರಗಿ,ಜೂ 26: ಬಸವ ಸಮಿತಿಯ ಅಕ್ಕನ ಬಳಗವು ಆಯೋಜಿಸಿದ ಎರಡು ದಿನಗಳ 16 ನೆಯ ಮಹಾದೇವಿಯಕ್ಕಗಳ ಸಮ್ಮೇಳನ ನಾಳೆ ( ಜೂನ್. 27) ಮತ್ತು 28 ರಂದು ಕಲಬುರಗಿ ಜಯನಗರದಲ್ಲಿರುವ ಅನುಭವ ಮಂಟಪದಲ್ಲಿ ಜರುಗಲಿದೆ.
ಸಮ್ಮೇಳನದ ಅಧ್ಯಕ್ಷರಾಗಿ ಲೇಖಕಿ ಮತ್ತು ವಿಶ್ರಾಂತ ಪ್ರಾಧ್ಯಾಪಕಿ ಡಾ.ನೀಲಮ್ಮಕತ್ನಳ್ಳಿ ಅವರು ಆಯ್ಕೆಯಾಗಿದ್ದಾರೆ. “ಡಾ. ಬಿ.ಡಿ. ಜತ್ತಿ ವೈರಾಗ್ಯನಿಧಿ ಅಕ್ಕ ಪ್ರಶಸ್ತಿ-2026 ಪ್ರಶಸ್ತಿಯನ್ನು ಮತ್ತೊಬ್ಬ ಲೇಖಕಿ ಪೆÇ್ರ.ಗಂಗಮ್ಮ ಸತ್ಯಂಪೇಟೆ ಅವರಿಗೆ ಪ್ರದಾನ ಮಾಡಲಾಗುತ್ತಿದೆ.
ಇದೇ ಸಂದರ್ಭದಲ್ಲಿ ಸ್ಥಳೀಯ ಶಾಲೆಗಳಲ್ಲಿ 35 ರಿಂದ 50 ವರ್ಷಶಿಕ್ಷಕರಾಗಿ, ಆಡಳಿತಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವ ಶಾರದಾ ರಾಂಪೂರೆ, ಶಶಿಕಲಾ ಸಾಲೋಕ್ಯ, ಶಾಂತಾ ಪಾಟೀಲ, ಉಮಾ ಪಾಟೀಲ, ನಂದಾ ಪಾಟೀಲ ಅವರೆಲ್ಲರಿಗೆ ಗೌರವ ಸನ್ಮಾನ ಮಾಡಲಾಗುತ್ತಿದೆ.
ಈ ಸಮ್ಮೇಳನದ ವಿಶೇಷವೆಂದರೆ ಸುಮಾರು 200 ಜನ ಮಹಿಳೆಯರು, ವಿದ್ಯಾರ್ಥಿನಿಯರು ವೇದಿಕೆಯಲ್ಲಿತಮ್ಮ ಅನುಭವ ಮತ್ತು ಪ್ರತಿಭೆಯನ್ನುವ್ಯಕ್ತಿಪಡಿಸುತ್ತಾರೆ.ಜೂ 27 ರಂದು ಬೆಳಗ್ಗೆ ಈ ಸಮ್ಮೇಳನವನ್ನು ಭಾಲ್ಕಿಯ ಡಾ.ಗೀತಾಖಂಡ್ರೆ ಅವರು ಉದ್ಘಾಟಿಸುವರು. ಸಮ್ಮೇಳನದಲ್ಲಿ 5 ಸಾಹಿತ್ಯಿಕ ಗೋಷ್ಠಿಗಳುಜರುಗಲಿವೆ. ಎರಡು ವಿಶೇಷ ಉಪನ್ಯಾಸಗಳಿರುತ್ತವೆ. ಏಳುಭಾಗಗಳಲ್ಲಿ ಬಗೆಬಗೆಯ ಸಾಂಸ್ಕøತಿಕ ಕಾರ್ಯಕ್ರಮಗಳಿರುತ್ತವೆ.
ಕಲಬುರಗಿಯ ನಾಗರಿಕರು ಈ ಸಮ್ಮೇಳನಕ್ಕೆ ಪ್ರೇಕ್ಷಕರಾಗಿ ಆಗಮಿಸಿ, ಪ್ರೋತ್ಸಾಹಿಸಬೇಕೆಂದು ಬಸವ ಸಮಿತಿಯ ಅಧ್ಯಕ್ಷರಾದ ಡಾ. ವಿಲಾಸವತಿ ಖೂಬಾ, ಸಮ್ಮೇಳನದ ಸ್ವಾಗತ ಸಮಿತಿಯ ಗೌರವ ಅಧ್ಯಕ್ಷರಾದ ಶರಣಮ್ಮ ಕಲಬುರಗಿ, ಕಾರ್ಯದರ್ಶಿ ಅನಸೂಯಾ ನಡಕಟ್ಟಿ,ಕಾರ್ಯಾಧ್ಯಕ್ಷರು, ಸಂಚಾಲಕರೂ ಆದ ಡಾ.ಜಯಶ್ರೀದಂಡೆ ಅವರು ವಿನಂತಿಸಿಕೊಂಡಿದ್ದಾರೆ.