ಕಲಬುರಗಿ: ಅಂತರಾಷ್ಟ್ರೀಯ ಮಾದಕ ದ್ಯವ್ಯ ದುರುಪಯೋಗ ಮತ್ತು ಅಕ್ರಮ ಮಾದಕ ವಸ್ತು ಕಳ್ಳ ಸಾಗಾಣಿಕೆ ವಿರೋಧಿ ದಿನದ ಅಂಗವಾಗಿ ಕಲಬುರಗಿ ನಗರ ಪೊಲೀಸ್ ವತಿಯಿಂದ ಇಂದು ಬೆಳಿಗ್ಗೆ ನಗರದ ಜಗತ್ ವೃತ್ತದಿಂದ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದವರೆಗೆ ಜಾಗೃತಿ ವಾಕ್‍ಥಾನ್ ಹಮ್ಮಿಕೊಳ್ಳಲಾಯಿತು. ಪೊಲೀಸ್ ಕಮಿಷನರ್ ಡಾ ಶರಣಪ್ಪ ಎಸ್.ಡಿ,ಎಸ್ಪಿ ಅಡ್ಡೂರು ಶ್ರೀನಿವಾಸಲು, ಡಿಸಿಪಿ ಶಾಲೂ ಅವರು ಸೇರಿದಂತೆ ಪೊಲೀಸ್ ಅಧಿಕಾರಿಗಳು, ವೈದ್ಯರು,ವಿದ್ಯಾರ್ಥಿಗಳು ಭಾಗವಹಿಸಿದರು.