Home ಜಿಲ್ಲೆ ದಯ, ಪ್ರೀತಿ, ವಿಶ್ವಾಸ ಯಾವ ಧರ್ಮದಲ್ಲಿರುತ್ತದೆ ಅದೇ ನಿಜವಾದ ಧರ್ಮ

ದಯ, ಪ್ರೀತಿ, ವಿಶ್ವಾಸ ಯಾವ ಧರ್ಮದಲ್ಲಿರುತ್ತದೆ ಅದೇ ನಿಜವಾದ ಧರ್ಮ


ಚನ್ನಮ್ಮನ ಕಿತ್ತೂರ,ನ.೨೯: ನಾವು ಕಲಿತದ್ದನ್ನು ಬೇರೊಬ್ಬರಿಗೆ ಕಲಿಸಬೇಕು. ಅಂದಾಗ ಮಾತ್ರ ನಾವು ಮಾಡುವ ಕೆಲಸ ಯಶಸ್ಸಾಗಲು ಸಾಧ್ಯವೆಂದು ನಿವೃತ್ತ ಸೈನಿಕ ಪಾದ್ರಿ ಚಾರ್ಲಿಸ್ ಮಾಳಗಿ ಅಭಿಪ್ರಾಯಪಟ್ಟರು.


ತಾಲೂಕಿನ ಫೌಜಿ ಪ್ಯಾಕ್ಟರಿ ಅಂಗಳದಲ್ಲಿ ಹಮ್ಮಿಕೊಂಡಿದ್ದ ಸರ್ವಧರ್ಮ ಸ್ಥಳದ ಕಟ್ಟಡ ಭೂಮಿಪೂಜೆ ಹಾಗೂ ಧರ್ಮಗುರುಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಮಾತನಾಡಿದರು. ಯಾವ ಧರ್ಮದಲ್ಲಿಯೂ ಯಾರನ್ನು ಹೀನವಾಗಿ ನೋಡಬೇಕೆನ್ನುವುದು ಕಲಿಸುವುದಿಲ್ಲ. ಭಾರತ ಸೇನೆಯಲ್ಲಿ ಕಾರ್ಯನಿರ್ವಹಿಸುವ ಸೈನಿಕರಲ್ಲಿ ಭೇದ-ಭಾವ ಇರುವುದಿಲ್ಲ. ನಾವೆಲ್ಲರು ಒಂದೇ ಎಂದು ನಡೆದಾಗ ಮಾತ್ರ ದೇಶ ರಕ್ಷಣೆಯಾಗುತ್ತದೆ. ಸಮಾಜದಲ್ಲಿ ಭೇದ-ಭಾವ ತೊಲಗದಿದ್ದರೆ ಈ ಸಮಾಜಕ್ಕೆ ಓಳ್ಳೆಯದಾಗಲು ಸಾಧ್ಯವಿಲ್ಲ. ಆದ್ದರಿಂದ ಇದು ತೊಲಗಬೇಕು ಅಂದಾಗ ಒಳ್ಳೆಯದ್ದಾಗುತ್ತದೆ ಎಂದರು.


ಮಾಜಿ ಸೈನಿಕ ಹಾಗೂ ಫೌಜಿ ಪ್ಯಾಕ್ಟರಿ ಸಂಸ್ಥಾಪಕ ಪರವೇಜ್ ಹವಾಲ್ದಾರ ಸಭೆಯ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ನುಡಿಯನ್ನಾಡಿ ಸಾನಿಧ್ಯವಹಿಸಿ ಆರ್ಶೀವಚನ ನೀಡಿದ ರಾಜಗುರು ಸಂಸ್ಥಾನ ಕಲ್ಮಠ ಶ್ರೀ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ ಮನಸ್ಸೊಂದಿದ್ದರೆ ಮಾರ್ಗವಿದೆ. ಜ್ಞಾನವಿಂದಿದ್ದರೆ ಸ್ವರ್ಗವಿದೆ. ನಂಬಿಕೆಯೊAದಿದ್ದರೆ ಜೀವನವಿದೆ ಎಂಬುವುದಕ್ಕೆ ಈ ಫೌಜಿ ಪ್ಯಾಕ್ಟರಿಯೇ ಸಾಕ್ಷಿ ಎಂದರು


ಸಭೆಯಲ್ಲಿ ಮಾಜಿ ತಾಪಂ ಸದಸ್ಯ ಅಶಪಾಕ ಹವಾಲ್ದಾರ, ಮಾಜಿ ಗ್ರಾಪಂ ಅಧ್ಯಕ್ಷ ಶಫೀಕ್ ಹವಾಲ್ದಾರ, ಪತ್ರಕರ್ತರಾದ ಪ್ರವೀಣ ಗಿರಿ, ಬಸವರಾಜ ಭೀಮರಾಣಿ, ಜಗದೀಶ ಕಡೋಲಿ, ಅಜೀಮ್ ಮೊಮಿನ ದೀಪಾ ಮಾಳಗಿ, ಹೊಳಿ ಹಕೀಬ್, ನಾಗಮ್ಮ ಸಿಬ್ಬಂದಿ ಸೇರಿ ಇತರರಿದ್ದರು.