Home ಜಿಲ್ಲೆ ಕಲಬುರಗಿ ಹಿಂದುಳಿದವರ, ಮಹಿಳೆಯರ ಹಕ್ಕುಗಳಿಗಾಗಿ ಶ್ರಮಿಸಿದ ನಾರಾಯಣ ಗುರುಗಳ ಚಿಂತನೆ ಸಮಾಜಕ್ಕೆ ದಾರಿ:ಸಚಿವ ಪ್ರಿಯಾಂಕಾ ಖರ್ಗೆ

ಹಿಂದುಳಿದವರ, ಮಹಿಳೆಯರ ಹಕ್ಕುಗಳಿಗಾಗಿ ಶ್ರಮಿಸಿದ ನಾರಾಯಣ ಗುರುಗಳ ಚಿಂತನೆ ಸಮಾಜಕ್ಕೆ ದಾರಿ:ಸಚಿವ ಪ್ರಿಯಾಂಕಾ ಖರ್ಗೆ

ಕಲಬುರಗಿ, ಸೆ.02: ಹಿಂದುಳಿದ ವರ್ಗಗಳು, ದಲಿತರು ಹಾಗೂ ಮಹಿಳೆಯರ ಸಾಮಾಜಿಕ ಮತ್ತು ಶೈಕ್ಷಣಿಕ ಹಕ್ಕುಗಳಿಗಾಗಿ ಶ್ರಮಿಸಿದ ಶ್ರೀ ನಾರಾಯಣ ಗುರುಗಳ ಕ್ರಾಂತಿಕಾರಿ ಚಿಂತನೆಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಿವೆ ಎಂದು ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ಇ-ಆಡಳಿತ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕಾ ಖರ್ಗೆ ಹೇಳಿದರು.

ಮಂಗಳವಾರ ನಗರದ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಇವರುಗಳ ಸಂಯುಕ್ತಾಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬುದ್ಧ, ಬಸವಣ್ಣ, ನಾರಾಯಣ ಗುರು ಮತ್ತು ಅಂಬೇಡ್ಕರ್ ಅವರ ಆಶಯಗಳು ಒಂದೇ. ಈ ಮಹಾಪುರುಷರ ತತ್ವಗಳು ಕೇವಲ ಜಯಂತಿ ಮತ್ತು ಭಾಷಣಗಳಿಗೆ ಸೀಮಿತವಾಗದೆ ಪ್ರತಿಯೊಬ್ಬರ ಜೀವನದಲ್ಲಿ ಅನುμÁ್ಠನಗೊಳ್ಳಬೇಕು ಎಂದರು.
ಯುವ ಪೀಳಿಗೆ ಸೋಶಿಯಲ್ ಮೀಡಿಯಾದಲ್ಲಿ ಕಾಲ ಕಳೆಯದೆ ಮಹಾಪುರುಷರ ತತ್ವಗಳನ್ನು ಓದಿ ಸಮಾಜದ ಪ್ರಗತಿಗೆ ಶ್ರಮಿಸಬೇಕು. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಎಲ್ಲರಿಗೂ ಸಮಬಾಳು-ಸಮಪಾಲು ನೀಡುವ ನಿಟ್ಟಿನಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಸ್ಥಿರತೆ ತರುತ್ತಿವೆ. ಕಲಬುರಗಿಯಲ್ಲಿ ನಾರಾಯಣ ಗುರು ಭವನ ನಿರ್ಮಾಣಕ್ಕೆ ಹಾಗೂ ಸಮಾಜದ ಭವನಕ್ಕೆ ಅಗತ್ಯವಿರುವ 1-2 ಎಕರೆ ಜಮೀನು ಒದಗಿಸಲು ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಜಯ್ ಕುಮಾರ್ ಲಲ್ಲೂಜಿ ಅವರು ಮಾತನಾಡಿ, ಬ್ರಹ್ಮರ್ಷಿ ನಾರಾಯಣ ಗುರುಗಳು ಸಮಾಜದಲ್ಲಿದ್ದ ಅಸ್ಪೃಶ್ಯತೆ ಹಾಗೂ ತಾರತಮ್ಯದ ವಿರುದ್ಧ ಹೋರಾಡಿದ ಸಾಮಾಜಿಕ ಕ್ರಾಂತಿಯ ಹರಿಕಾರರಾಗಿದ್ದರು. ಸ್ವಾತಂತ್ರ್ಯಕ್ಕೂ ಮುನ್ನವೇ ಮೂಢನಂಬಿಕೆಗಳನ್ನು ತೊಡೆದುಹಾಕಲು ನಾರಾಯಣ ಗುರುಗಳು 60ಕ್ಕೂ ಹೆಚ್ಚು ದೇವಾಲಯಗಳನ್ನು ಸ್ಥಾಪಿಸಿ, ಅವುಗಳೊಂದಿಗೆ ಶಾಲೆಗಳನ್ನು ತೆರೆದು ಶಿಕ್ಷಣಕ್ಕೆ ಒತ್ತು ನೀಡಿದರು. ಕೇರಳದ ಶೈಕ್ಷಣಿಕ ಜಾಗೃತಿಗೆ ಅವರ ಕ್ರಾಂತಿಕಾರಿ ಚಿಂತನೆಗಳೇ ಕಾರಣ. 1925ರ ವೈಕಂ ಸತ್ಯಾಗ್ರಹದ ವೇಳೆ ಮಹಾತ್ಮ ಗಾಂಧೀಜಿಯವರೂ ಗುರುಗಳ ಆಶ್ರಮಕ್ಕೆ ಭೇಟಿ ನೀಡಿ ಪ್ರೇರಿತರಾಗಿದ್ದರು ಎಂದು ತಿಳಿಸಿದರು.
ಶ್ರೀ ನಾರಾಯಣ ಗುರು ಮಹಾಸಂಸ್ಥಾನ ನಿಟ್ಟೂರು ಪೀಠಾಧಿಪತಿ ಶ್ರೀ ರೇಣುಕಾನಂದ ಸ್ವಾಮಿ ಅವರು ಮಾತನಾಡಿ, ನಾರಾಯಣ ಗುರುಗಳ ಶಿಕ್ಷಣ ಮತ್ತು ಸಂಘಟನೆಯ ತತ್ವಗಳನ್ನು ಸಮಾಜದಲ್ಲಿ ಸಕ್ರಿಯವಾಗಿ ಅನುμÁ್ಠನಗೊಳಿಸಬೇಕೆಂದು ಕರೆ ನೀಡಿದರು. ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಹಾಗೂ ಶಾಸಕ ಜಗದೇವ್ ಗುತ್ತೇದಾರ್ ಅವರ ನೇತೃತ್ವದಲ್ಲಿ ಸಮಾಜದ ಅಭಿವೃದ್ಧಿ ಹಾಗೂ ಶೈಕ್ಷಣಿಕ ಪ್ರಗತಿಗೆ ನಿರಂತರ ಶ್ರಮಿಸಲಾಗುತ್ತಿದೆ ಎಂದರು.
ಜಿಲ್ಲಾಧ್ಯಕ್ಷ ರಾಜೇಶ್ ಗುತ್ತೇದಾರ್ ಅವರು ನಾರಾಯಣ ಗುರುಗಳ ಹೆಸರಿನಲ್ಲಿ ಸುಸಜ್ಜಿತ ವಿದ್ಯಾರ್ಥಿನಿಲಯ ಹಾಗೂ ಸಮುದಾಯ ಭವನ ನಿರ್ಮಿಸುವ ಸಂಕಲ್ಪ ತೊಟ್ಟರು. ಪಕ್ಷಾತೀತವಾಗಿ ಸಮಾಜದ ಒಳಿತಿಗಾಗಿ ಎಲ್ಲರೂ ಕೈಜೋಡಿಸ ಬೇಕು ಎಂದು ಹೇಳಿದರು.
ಖ್ಯಾತ ವಾಗ್ಮಿ ಗಳು ನಿಕೇತ ರಾಜ್ ಮೌರ್ಯ ಅವರು ವಿಶೇಷ ಉಪನ್ಯಾಸ ನೀಡಿ ಮಾತನಾಡಿ ಅವರು, ಶತಮಾನಗಳ ಹಿಂದೆ ಕೇರಳದಲ್ಲಿದ್ದ ತೀವ್ರ ಜಾತ್ಯಂಧತೆ ಮತ್ತು ಶೋಷಣೆಗಳನ್ನು ಮೆಟ್ಟಿ ನಿಂತು ನಾರಾಯಣ ಗುರುಗಳು ಸಾಮಾಜಿಕ ಸುಧಾರಣೆ ತಂದರು. ಅಂದಿನ ಕಾಲದಲ್ಲಿ ಹಿಂದುಳಿದ ಸಮುದಾಯಗಳಿಗೆ ದೇವಸ್ಥಾನ ಪ್ರವೇಶ, ಶಿಕ್ಷಣ ಮತ್ತು ಸಂಚಾರದ ಹಕ್ಕನ್ನು ದೊರಕಿಸಿಕೊಟ್ಟರು. ಅವರ ನೇತೃತ್ವದಲ್ಲಿ ನಡೆದ ಐತಿಹಾಸಿಕ ‘ವೈಕಂ ಸತ್ಯಾಗ್ರಹವು ಮಹಾತ್ಮ ಗಾಂಧೀಜಿ ಹಾಗೂ ರವೀಂದ್ರನಾಥ ಟಾಗೋರ್ ಅವರಿಗೂ ಪ್ರೇರಣೆಯಾಗಿತ್ತು. ಗುರುಗಳ ಶಿಷ್ಯರಾದ ಡಾ. ಪದ್ಮನಾಭ್ ಅವರಿಗೆ ಕೇರಳದಲ್ಲಿ ಅವಕಾಶ ನಿರಾಕರಿಸಲ್ಪಟ್ಟಾಗ, ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಉದ್ಯೋಗ ನೀಡಿ ಗೌರವಿಸಿದ್ದು ಇತಿಹಾಸ ಎಂದರು.
ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು ಎಂಬ ನಾರಾಯಣ ಗುರುಗಳ ತತ್ತ್ವಗಳು ಧಾರ್ಮಿಕ, ಶೈಕ್ಷಣಿಕ ಹಾಗೂ ರಾಜಕೀಯ ರಂಗಗಳಲ್ಲಿ ಕ್ರಾಂತಿ ತಂದಿದ್ದು, ಇಂದಿನ ಅಸಮಾನತೆಯ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿವೆ ಎಂದು ಹೇಳಿದರು.
ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘ ಅಧ್ಯಕ್ಷ ಡಾ. ಎಂ. ತಿಮ್ಮೇಗೌಡ ಅವರು ಮಾತನಾಡಿ, ಜಿಲ್ಲೆಯಲ್ಲಿನ ನಮ್ಮ ಸಮಾಜದ ಯುವಜನರು ಶೈಕ್ಷಣಿಕವಾಗಿ ಮುನ್ನಡೆಯಲು ಉನ್ನತ ಶಿಕ್ಷಣ ಸೌಲಭ್ಯ ಒದಗಿಸುವುದು ಹಾಗೂ ಸಮಾಜದ ಆಸ್ತಿಯನ್ನು ರಕ್ಷಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಿಗುವಂತೆ ನಾಯಕರು ಬೆಂಬಲ ನೀಡಬೇಕು. ಹೆಲಿಪುರದಲ್ಲಿರುವ ಸಮಾಜದ 7 ಎಕರೆ ಜಾಗವನ್ನು ಕಾನೂನುಬದ್ಧವಾಗಿ ಉಳಿಸಿಕೊಳ್ಳಲು ಶ್ರಮಿಸಲಾಗುತ್ತಿದೆ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಉಪ ನಿರ್ದೇಶಕಿ ಜಗದೀಶ್ವರಿ ಅ.ನಾಸಿ ಸ್ವಾಗತಿಸಿದರು,
ಈ ಸಂಧರ್ಭದಲ್ಲಿ ಅಫಜಲಪೂರ ವಿಧಾನಸಭೆ ಶಾಸಕರು ಎಮ್. ವೈ. ಪಾಟೀಲ್, ವಿಧಾನ ಪರಿಷತ್ ಶಾಸಕರುಗಳಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಗ್ಯಾರಂಟಿ ಯೋಜನೆಗಳ ಅನುμÁ್ಠನ ಪ್ರಾಧಿಕಾರ ಜಿಲ್ಲಾ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ್, ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತೋತ್ಸವ ಸಮಿತಿ ಅಧ್ಯಕ್ಷ ಅಶೋಕ ಕಲಾಲ ಸನ್ನತಿ, ಕಲಬುರಗಿ ಆರ್ಯ ಈಡಿಗÀ ಸಮಾಜ ಸಂಘ ಅಧ್ಯಕ್ಷ ರಾಜೇಶ್ ಜಗದೇವ ಗುತ್ತೇದಾರ, ಬಸಯ್ಯ ಗುತ್ತೇದಾರ, ಗಾರಂಪಳ್ಳಿ, ಮಹಾದೇವಿ ಬಿ. ಗುತ್ತೇದಾರ, ರಾಜೇಶ್ ಡಿ.ಗುತ್ತಿದಾರ್, ವಿನೋದ್ ಕುಮಾರ್ ಗುತ್ತೇದಾರ, ನಾಗರಾಜ ಗುತ್ತೇದಾರ, ಜಮುನಾ ಅಶೋಕ್ ಗುತ್ತೇದಾರ ಉಪಸ್ಥಿತರಿದ್ದರು.