
ಕಲಬುರಗಿ, ಜು.೨೩- ಪ್ರಕಾಶ ಗೊಣಗಿ ಅವರನ್ನು ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತಿನ ಸೇಡಂ ತಾಲ್ಲೂಕು ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಪ್ರಯುಕ್ತ ಟೆಂಗಳಿ ಅಂಡಗಿ ಪ್ರತಿಷ್ಠಾನ ಅಧ್ಯಕ್ಷ ಹಾಗೂ ನ್ಯಾಯವಾದಿ ಶಿವರಾಜ ಅಂಡಗಿ ಸನ್ಮಾನಿಸಿ ಗೌರವಿಸಿದರು.
ಸೇವೆ ಮತ್ತು ಸಂಸ್ಕೃತಿ ಒಂದಾದಾಗ ಸಮಾಜದ ಅಭಿವೃದ್ಧಿಗೆ ಹೊಸ ದಿಕ್ಕು ಸೂಚಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತಿನ ಚಟುವಟಿಕೆ ಪ್ರತಿಭೆಗೆ ಪ್ರೋತ್ಸಾಹ ಸಿಗಲಿದೆ ಎಂದರು.
ಸAಸ್ಕೃತಿಗೆ ರಕ್ಷಣೆ, ಸಾಹಿತ್ಯಕ್ಕೆ ಗೌರವ ತಂದುಕೊಡುವ ಆಶಯದೊಂದಿಗೆ ಹುಟ್ಟಿಕೊಂಡಿರುವ ಈ ಪರಿಷತ್ತು ನೌಕರರ ಮನಸ್ಸುಗಳನ್ನು ಸಾಹಿತ್ಯದ ಮೂಲಕ ಬೆಸೆಯುವ ಕುಟುಂಬದAತೆ ಕಾರ್ಯನಿರ್ವಹಿಸಲಿz.
ಈ ಪರಿಷತ್ತಿಗೆ ಸೇಡಂ ತಾಲೂಕಿನ ನ್ಯಾಯಾಂಗ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಕಾಶ ಗೊಣಗಿರವರು ಸೇವಾ ಮನೋಭಾವನಾ ಉಳ್ಳವರಾಗಿದ್ದಾರೆ. ಇವರು ಈಗಾಗಲೇ ಸೇಡಂ ತಾಲ್ಲೂಕಿನ ಕ.ಸಾ.ಪ. ಗೌರವ ಕಾರ್ಯದರ್ಶಿಯಾಗಿ ಸಾಹಿತ್ಯದ ಸೇವೆ ಸಲ್ಲಿಸುತ್ತಿರುವುದು ಇವರು ಸರ್ಕಾರಿ ನೌಕರರ ಸಾಹಿತ್ಯ ಮತ್ತು ಸಂಸ್ಕೃತಿ ಪರಿಷತ್ತಿನಲ್ಲಿಯೂ ಕೂಡ ಉತ್ತಮ ಸೇವೆ ನೀಡುವಂತ ಅರ್ಹತೆ ಹೊಂದಿದ್ದಾರೆ,ಈ ಪರಿಷತ್ತಿನ ಜಿಲ್ಲಾ ಹಾಗೂ ರಾಜ್ಯ ಘಟಕದ ಅಧ್ಯಕ್ಷರಿಗೆ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಳೆದ ಜುಲೈ ೨೧ ರಂದು ಸೇಡಂ ನಗರದ ಬಸವ ಆಸ್ಪತ್ರೆಯಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಡಾ. ಗುರುರಾಜ ಪಾಟೀಲ ರಮ್ಮಣಿ ನ್ಯಾಯವಾದಿಗಳಾದ ವಿನೋದಕುಮಾರ ಜನೇವರಿ, ಗುಂಡಪ್ಪಗೌಡ ಹಿರೆಗುತ್ತಿ ಹಾಗೂ ಸಿದ್ದು ಮಂಗದ ಹೊಸಹಳ್ಳಿ, ಬಾಲಕೃಷ್ಣ ಕುರಕುಂಟಾ ಉಪಸ್ಥಿತರಿದ್ದರು.
ಸನ್ಮಾನ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತಿನ ಸೇಡಂ ತಾಲ್ಲೂಕು ಘಟಕದ ಅಧ್ಯಕ್ಷರನ್ನಾಗಿ ನೇಮಕಗೊಂಡ ಪ್ರಕಾಶ ಗೊಣಗಿ ಅವರಿಗೆ ನ್ಯಾಯವಾದಿ ಶಿವರಾಜ ಅಂಡಗಿ ಸನ್ಮಾನಿಸುತ್ತಿರುವ ಚಿತ್ರ, ಡಾ. ಗುರುರಾಜ ಪಾಟೀಲ ರಮ್ಮಣಿ ನ್ಯಾಯವಾದಿಗಳಾದ ವಿನೋದಕುಮಾರ ಜನೇವರಿ, ಗುಂಡಪ್ಪಗೌಡ ಹಿರೆಗುತ್ತಿ ಹಾಗೂ ಸಿದ್ದು ಮಂಗದ ಹೊಸಹಳ್ಳಿ, ಬಾಲಕೃಷ್ಣ ಕುರಕುಂಟಾ ಉಪಸ್ಥಿತರಿದ್ದರು.































